ಉಡುಪಿ : ನೆರೆಯ ದೇಶ ಬಾಂಗ್ಲಾದಲ್ಲಿ ಇತ್ತೀಚಿಗೆ ರಾಜಕೀಯ ಕ್ಷಿಪ್ರ ಕ್ರಾಂತಿಯಾಗಿ ಅರಾಜಕತೆ ಸೃಷ್ಟಿಯಾಗಿದೆ. ಅಲ್ಲಿ ಅಲ್ಪ ಸಂಖ್ಯಾತರಾದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ಹಾಗೂ ದಬ್ಬಾಳಿಕೆ ಮಾಡುತ್ತಿರುವುದನ್ನು ಮನಗಂಡ ಉಡುಪಿ ಜಿಲ್ಲಾ ಶ್ರೀರಾಮಸೇನೆಯು ಉಡುಪಿ ಜಿಲ್ಲೆಯಿಂದ ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಅಗ್ರಹಿಸಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರಿಗೆ ಮನವಿ ಮೂಲಕ ಅಗ್ರಹಿಸಿತು.
ಆಂತರಿಕ ಮೀಸಲಾತಿಯಿಂದ ಗಲಭೆಯಾಗಿ ಹಿಂದೂಗಳ ಮೇಲೆ ಅಮಾನುಷವಾಗಿ ದೌರ್ಜನ್ಯ ಎಸಗುತ್ತಿದ್ದಾರೆ. ಹಿಂದೂ ಮಂದಿರ, ದೇವಸ್ಥಾನ ಲೂಟಿ, ಹಿಂದೂಗಳ ಮನೆ ಮೇಲೆ ಆಕ್ರಮಣ, ಹಿಂದೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮುಂತಾದ ರಾಕ್ಷಶಿ ಕೃತ್ಯಗಳು ನಡೆಯುತ್ತಿದೆ.
1971ರಲ್ಲಿ ಬಾಂಗ್ಲಾ ದೇಶವಾದಾಗ 21% ಹಿಂದುಗಳು ಇದ್ದರು. ಈಗ ಇರುವ ಹಿಂದುಗಳು ಕೇವಲ 1% ಮಾತ್ರ. ಅವರು ಭಯಬೀತರಾಗಿ ಕಂಗೆಟ್ಟಿದ್ದಾರೆ. ಕರ್ನಾಟಕದಲ್ಲಿ ಅಕ್ರಮ ಬಾಂಗ್ಲಾ ಮುಸ್ಲಿಂ ಹಾಗೂ ಬರ್ಮ ರೋಹಿಂಗ್ಯಾ ಮುಸ್ಲಿಮರು 10 ಲಕ್ಷಕ್ಕೂ ಅಧಿಕವಾಗಿ, ಅನಧಿಕೃತವಾಗಿ ನೆಲೆಸಿದ್ದಾರೆ. ಇವರನ್ನು ಶಿಕ್ಷಿಸುವುದು ಹಾಗೂ ರಾಜ್ಯ ಮತ್ತು ನಮ್ಮ ಜಿಲ್ಲೆಯಿಂದ ಹೊರಹಾಕುವುದು ಘನವೆತ್ತ ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿರುತ್ತದೆ. ಬಾಂಗ್ಲಾ ಮುಸ್ಲಿಂರು ಹಾಗೂ ರೋಹಿಂಗ್ಯಾಗಳು ಕಾನೂನು ಭಾಹಿರ ಚಟುವಟಿಕೆ ಅಲ್ಲದೇ ದೇಶದ ಭದ್ರತೆಗೆ ಕಂಟಕವಾಗಿದ್ದಾರೆ.
ಹಾಗಾಗಿ ಕೂಡಲೇ ದೇಶದ್ರೋಹಿ ನುಸುಳುಕೊರರಾದ ಬಾಂಗ್ಲಾ ಮುಸ್ಲಿಂ ಮತ್ತು ರೋಹಿಂಗ್ಯಾಗಳನ್ನು ನಮ್ಮ ಜಿಲ್ಲೆ ಹಾಗೂ ರಾಜ್ಯದಿಂದ ಗಡಿಪಾರು ಮಾಡಬೇಕು. ದೇಶದ ಆಂತರಿಕ ಸುರಕ್ಷತೆ ದೃಷ್ಟಿಯಿಂದ ಶ್ರೀರಾಮಸೇನೆಯ ಹೋರಾಟ ಉಗ್ರಸ್ವರೂಪ ಅನಿವಾರ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾ ಶ್ರೀರಾಮಸೇನೆಯ ಮುಖಂಡರು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ಮುಖಂಡರಾದ ಸುದರ್ಶನ್ ಪೂಜಾರಿ, ಶರತ್ ಮಣಿಪಾಲ, ಸುಜಿತ್ ನಿಟ್ಟೂರು, ವಿಕ್ರಂ ಕುಂದರ್, ಸುದೀಪ್ ನಿಟ್ಟೂರು, ಅರುಣ್ ಕುರ್ಕಾಲು, ಮೋಹನ್ ಪೂಜಾರಿ ಕಾಪು, ಸುರೇಶ್ ಶೆಟ್ಟಿ ಶಿರ್ವ, ಸುಧೀರ್ ಅಂಬಲಪಾಡಿ, ರಾಘವೇಂದ್ರ ಮಣಿಪಾಲ, ರಮೇಶ್, ಪ್ರದೀಪ್ ಅಂಬಲಪಾಡಿ ಉಪಸ್ಥಿತರಿದ್ದರು.