ಉಡುಪಿ : ಉತ್ತಮ ಪ್ರಾಂಶುಪಾಲ ಪ್ರಶಸ್ತಿ ಘೋಷಣೆ ಮಾಡಿ, ಬಳಿಕ ತಡೆಹಿಡಿದ ವಿಚಾರಕ್ಕೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ಸರಕಾರ ಶಿಕ್ಷಕ ವೃಂದಕ್ಕೆ ಅವಮಾನ ಮಾಡಿದೆ ಎಂದು ಹೇಳಿದ್ದಾರೆ.
ಪ್ರಾಂಶುಪಾಲರ ಪ್ರಶಸ್ತಿ ವಾಪಸ್ ಪಡೆದದ್ದು ನೋವಿನ ಸಂಗತಿ ಎಂದಿರುವ ಅವರು, ಸರ್ಕಾರದ ಈ ನಡೆ ಆಶ್ಚರ್ಯಕರ. ಪ್ರಾಂಶುಪಾಲರು ರಾಜ್ಯ ಸರ್ಕಾರದ ಆದೇಶ ಪಾಲಿಸಿದ್ದರು. ಇದು ದಿಗ್ಬ್ರಮೆಯ ವಾತಾವರಣ ಉಂಟುಮಾಡಿದೆ. ಸಮಾನ ವಸ್ತ್ರ ಇರಬೇಕು ಎಂದು ಹಿಜಾಬ್ ನಿಷೇಧಿಸಲಾಗಿತ್ತು. ಸರ್ಕಾರದ ಆದೇಶವನ್ನು ಸರ್ಕಾರಿ ಅಧಿಕಾರಿಯಾಗಿ ಅವರು ಪಾಲಿಸಿದ್ದಾರೆ. ಹೈಕೋರ್ಟ್ ಕೂಡ ಅದಕ್ಕೆ ಪೂರಕ ಆದೇಶ ನೀಡಿತ್ತು. ಸರಕಾರ ಹೈಕೋರ್ಟ್ನ ಆದೇಶವನ್ನು ಗೌರವಿಸುತ್ತದೋ? ಅಥವಾ ತಮ್ಮ ಅಜೆಂಡವನ್ನು ಗೌರವಿಸುತ್ತದೋ? ಎಂಬುದನ್ನು ಸ್ಪಷ್ಟಪಡಿಸಬೇಕು. ಇದು ಶಿಕ್ಷಕ ವೃಂದಕ್ಕೆ ಮಾಡಿದ ಅಪಮಾನ. ಮುಖ್ಯಮಂತ್ರಿಗಳು ತಪ್ಪನ್ನು ಸರಿಪಡಿಸಿಕೊಂಡು ಶಿಕ್ಷಕರಿಗೆ ಪ್ರಶಸ್ತಿಯನ್ನು ಪುನರ್ ಘೋಷಣೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.