ಉಡುಪಿ : ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾಗಾಂಧಿ ಅವರು ಕುಟುಂಬದೊಂದಿಗೆ ಭಾನುವಾರ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿ ದರ್ಶನ ಪಡೆದು ಭೋಜನ ಪ್ರಸಾದ ಸ್ವೀಕರಿಸಿ ಪರ್ಯಾಯ ಶ್ರೀಪಾದರಿಂದ ಕೋಟಿಗೀತಾ ಲೇಖನ ಯಜ್ಞದ ದೀಕ್ಷೆ ಪಡೆದು ಮಂತ್ರಾಕ್ಷತೆ ಸ್ವೀಕರಿಸಿದರು.
Tag:
Prasadam
ಅಷ್ಠಮಿ ಪ್ರಯುಕ್ತ ನಿನ್ನೆ ಉಪವಾಸ: ಇಂದು ಸಾವಿರಾರು ಭಕ್ತರಿಗೆ ಮೃಷ್ಠಾನ್ನ ಭೋಜನ…
by NewsDesk
written by NewsDesk
ಉಡುಪಿ : ಜಗದೋದ್ಧಾರನ ಜನ್ಮದಿನದ ಸಂದರ್ಭ ಸಂಪೂರ್ಣವಾಗಿ ಉಪವಾಸವಿದ್ದ ಭಕ್ತರು ಉಪವಾಸ ತೊರೆದಿದ್ದಾರೆ. ಅರ್ಘ್ಯ ಪ್ರದಾನದ ನಂತರ ಮಠದಲ್ಲಿ ಫಲಹಾರ ವ್ಯವಸ್ಥೆ ಮಾಡಲಾಗಿತ್ತು. ಅನ್ನ ಬ್ರಹ್ಮನ ಕ್ಷೇತ್ರದಲ್ಲಿ, ಇಂದು ಮಠಕ್ಕೆ ಬರುವ 40 ರಿಂದ 50 ಸಾವಿರ ಜನಕ್ಕೆ ಅನ್ನಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ. ಕೃಷ್ಣ ಮಠ ರಾಜಾಂಗಣ ಸುತ್ತಮುತ್ತ ಹಲವಾರು ಕೌಂಟರ್ಗಳನ್ನು ತೆರೆದು ಭೋಜನ ವಿತರಿಸಲಾಗುತ್ತಿದೆ.
ಸಿಹಿ ಊಟದ ಜೊತೆಗೆ ಇವತ್ತು ಹಾಲು ಪಾಯಸ ಮಾಡಿ ಬಡಿಸಲಾಗುತ್ತಿದೆ. ಜೊತೆ ತರಹೇವಾರಿ ಲಡ್ಡುಗಳನ್ನು ಪರ್ಯಾಯ ಪುತ್ತಿಗೆ ಮಠ ತಯಾರು ಮಾಡಿದ್ದು ಭಕ್ತರಿಗೆ ಊಟದ ಸಂದರ್ಭ ಬಡಿಸಲಾಗುತ್ತಿದೆ.