ಉಡುಪಿ : ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಂಡ-ಹೆಂಡತಿ ಜಗಳ ಕೊಲೆಯಾಗಿ ತಿರುಗಿದ ಘಟನೆ ನಡೆದಿದೆ. ಈ ಕುರಿತು ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಮಾಹಿತಿ ನೀಡಿದರು.

ಮೃತ ಜಯಶ್ರೀ ಹಾಗೂ ಆರೋಪಿ ಪತಿ ಕಿರಣ್ ಬೀದರ್ ಮೂಲದವರು. ಕಳೆದ ರಾತ್ರಿ ಗಂಡ-ಹೆಂಡತಿ ನಡುವೆ ತೀವ್ರ ಜಗಳ ನಡೆದಿದೆ. ಜಗಳದ ಪರಿಣಾಮ ಪತಿ ಕಿರಣ್ ಪತ್ನಿ ಜಯಶ್ರೀ ಮೇಲೆ ಹಲ್ಲೆ ನಡೆಸಿದ್ದು, ಈ ಘಟನೆ ಅಕ್ಕಪಕ್ಕದ ಮನೆಯವರ ಗಮನಕ್ಕೆ ಬಂದಿದೆ. ಗಂಭೀರ ಗಾಯವಾಗಿದ್ದ ಜಯಶ್ರಿಯನ್ನು ಬೆಳಗಿನ ಜಾವ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಸಂದರ್ಭ ಪೊಲೀಸರಿಗೆ ಮಾಹಿತಿ ಲಭಿಸಿದೆ.
ನಂತರ ಪೊಲೀಸರು ನಡೆಸಿದ ತನಿಖೆಯಲ್ಲಿ ಪತಿ ಕಿರಣ್ ಪತ್ನಿಯನ್ನು ಕೊಲೆಗೈದಿರುವುದು ದೃಢಪಟ್ಟಿದೆ. ತಕ್ಷಣ ಕೋಟ ಪೊಲೀಸರು ಆರೋಪಿ ಕಿರಣ್ನನ್ನು ಬಂಧಿಸಿದ್ದಾರೆ.
ಮೃತ ಜಯಶ್ರಿಯ ಬೀದರ್ ಮೂಲದ ಕುಟುಂಬಕ್ಕೆ ಈ ಕುರಿತು ಮಾಹಿತಿ ನೀಡಲಾಗಿದೆ. ಆರೋಪಿ ಕಿರಣ್ನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಡಾ ಅರುಣ್ ಹೇಳಿದ್ದಾರೆ.
