ಪಡುಬಿದ್ರೆ : ಕರ್ನಾಟಕ ಸರಕಾರದ 2024ರ ಪ್ರತಿಷ್ಠಿತ ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಪಡುಬಿದ್ರೆ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್, ದಕ್ಷ ಹಾಗೂ ಪ್ರಾಮಾಣಿಕ ಜನಸ್ನೇಹಿ ಪೊಲೀಸ್ ಎಂಬ ಖ್ಯಾತಿಗೆ ಪಾತ್ರರಾದ ಪ್ರಸನ್ನ ಪಿ. ಎಸ್ರವರಿಗೆ ಕಂಚಿನಡ್ಕ ಫ್ರೆಂಡ್ಸ್ ವತಿಯಿಂದ ಎಪ್ರಿಲ್ 4 ರಂದು ಗೌರವಾರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಕಂಚಿನಡ್ಕ ಪ್ರೆಂಡ್ಸ್ ಅಧ್ಯಕ್ಷರಾದ ಎಂ. ಎಸ್ ನಿಜಾಮ್ ಪಡುಬಿದ್ರಿ, ಗೌರವಾಧ್ಯಕ್ಷರಾದ ಶಾಫಿ ಎಂ. ಎಸ್, ಮನ್ಸೂರ್ ಕಂಚಿನಡ್ಕ, ಉದಯಕುಮಾರ್ ಶೆಟ್ಟಿ ಇನ್ನ, ಗಫರ್ ಕಂಚಿನಡ್ಕ, ರಾಮಿಜ್ ಹುಸೇನ್, ನಿಯಾಜ್ ಪಡುಬಿದ್ರಿ, ನಜೀಮ್ ಕಂಚಿನಡ್ಕ, ಬುಡನ್ ಸಾಬ್ ಖಾದರ್ ಮಂಚಕಲ್ ಮೊದಲಾದವರು ಉಪಸ್ಥಿತರಿದ್ದರು.