ಉಡುಪಿ : ಇಲ್ಲಿನ ನಗರ ಸಭೆಯ ವ್ಯಾಪ್ತಿಯ ಶೆಟ್ಟಿ ಬೆಟ್ಟು ವಾರ್ಡಿನಲ್ಲಿರುವ ಶ್ರೀ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಲಾಯಕ್ಕೆ ಹೋಗುವ ದಾರಿಯಲ್ಲಿ ನಗರಸಭೆಗೆ ಸೇರಿದೆ ಎನ್ನಲಾದ ರಸ್ತೆಯ ಅಂಚಿನಲ್ಲಿರುವ ಕುಡಿಯುವ ನೀರಿನ ಪೈಪಿಗೆ ಹಾನಿ ಮಾಡಿ ತುಂಡರಿಸಿ ಸ್ಥಳೀಯ ವಾಸಿಸುವ ನಗರವಾಸಿಗಳಿಗೆ ನೀರಿಲ್ಲದಂತಾಗಿದೆ.
ಶೆಟ್ಟಿ ಬೆಟ್ಟು ವಾರ್ಡಿನ ಸುಮಾರು ಹತ್ತು ಇಪ್ಪತ್ತು ಮನೆಗಳಲ್ಲಿ ನಗರ ಸಭೆಯ ನೀರಿನ ಸಂಪರ್ಕವಿದ್ದು ಕುಡಿಯುವ ನೀರಿನ ಪೈಪಿಗೆ ಹಾನಿ ಮಾಡಿ, ಕಳೆದ ಹತ್ತು ದಿನಗಳಿಂದ ಸುತ್ತಮುತ್ತಲ ಪ್ರದೇಶದ ವಾಸಿಸುವ ಜನತೆಗೆ ಕುಡಿಯುವ ನೀರಿಲ್ಲದೆ ತೊಂದರೆಗೆಡಾಗಿದೆ.
ಬೇಸಿಗೆಯ ಈ ಸುಡುಬಿಸಿನಲ್ಲಿ. ನೀರಿಲ್ಲದೆ ಪರದಾಡುವಂತಾಗಿದೆ. ಇತ್ತೀಚೆಗೆ ಈ ಪ್ರದೇಶದಲ್ಲಿ ತರಾತುರಿಯಲ್ಲಿ ಕಾಮಗಾರಿ ಕೈಗೊಂಡ ದಿನದಲ್ಲಿ ಪ್ರಮುಖ ಪೈಪಿಗೆ ಹಾನಿ ಮಾಡಿ ಸ್ಥಳೀಯರಿಗೆ ನೀರಿಲ್ಲದಂತಾಗಿದೆ. ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಳಲನ್ನು ತೋಡಿಕೊಂಡಿದ್ದಾರೆ.
ಕೂಡಲೆ ನಗರಸಭೆ ಇತ್ತ ಕಡೆ ಗಮನಹರಿಸಿ ತುಂಡರಿಸಿದ ಪೈಪನ್ನ ಮರುಜೊಡನೆಗೊಳಿಸಿ ಸಕಾಲದಲ್ಲಿ ನೀರು ಬರುವಂತೆ ಮಾಡಬೇಕೆಂದು ಸ್ಥಳೀಯರು ನಗರಸಭೆ ಅಧಿಕಾರಿಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.