ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಅವರು ಮಂಗಳವಾರ ರಾತ್ರಿ 12.30ರ ಸುಮಾರಿಗೆ ಪಂಪ್ ಹೌಸ್ಗಳಿಗೆ ದಿಢೀರ್ ಭೇಟಿ ನೀಡಿದರು. ಪಡೀಲ್ ಹಾಗೂ ಪಣಂಬೂರು ಪಂಪ್ ಹೌಸ್ಗಳಲ್ಲಿ ಇರುವ ದಾಖಲೆ ಪರಿಶೀಲಿಸಿದರು.

ಅಲ್ಲಿನ ರೆಕಾರ್ಡ್ಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ಬಗ್ಗೆ ಗಮನಿಸಿದರು. ಸೌಲಭ್ಯ, ಹಾಗೂ ನೀರು ಪೂರೈಕೆಯ ಸೌಲಭ್ಯ, ನೀರು ಶುದ್ದೀಕರಣದ ಘಟಕ ಪರಿಶೀಲಿಸಿದರು. ಪಂಪ್ಗಳು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವ ಮೂಲಕ ನೀರು ಪೂರೈಕೆಗೆ ತೊಂದರೆಯಾಗದಂತೆ ಗಮನಿಸುತ್ತಿರಬೇಕು. ಯಾವುದೇ ಸಮಸ್ಯೆ ಎದುರಾದರೂ ಗಮನಕ್ಕೆ ತನ್ನಿ ಎಂದು ಸಿಬ್ಬಂದಿಗಳಿಗೆ ಸೂಚಿಸಿದರು.