ಕಾರ್ಕಳ : ಪಳ್ಳಿ ಚಾಮುಂಡೇಶ್ವರಿ ಟೈಗರ್ಸ್ ತಂಡದ ಹುಲಿವೇಷ ಕುಣಿತ ಲೋಬಾನ ಸೇವೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ರವಿವಾರ ಪಳ್ಳಿ ಕಾರ್ಣಿಕದ ಮಾಯ ಶಕ್ತಿಗಳು ನೆಲೆನಿಂತ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಪಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಸತ್ಯಾನಂದ ಶೆಟ್ಟಿ, ಶ್ರೀಕಾಂತ್ ಪ್ರಭು, ರಮೇಶ್ ಕಲ್ಲೊಟ್ಟೆ, ಮೋಹನ್ದಾಸ್ ನಾಯಕ್, ಮಹಾಕಾಳಿ ಮಠದ ಅರ್ಚಕರಾದ ಗಣಪತಿ ಭಟ್ ಹಾಗೂ ಪಳ್ಳಿ ಸೇವಾ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು.
