ಕುಂದಾಪುರ : ಕಳ್ಳನೊಬ್ಬ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ದೇವಸ್ಥಾನದ ಹುಂಡಿ ಡಬ್ಬಿ ಒಡೆದು ಕಳ್ಳತನಕ್ಕೆ ಯತ್ನಿಸಿ ಪರಾರಿಯಾದ ಘಟನೆ ನಡೆದಿದೆ.
ಬಿಳಿ ಬಣ್ಣದ ಓಮ್ನಿ ಕಾರಿನಲ್ಲಿ ಬಂದಿದ್ದ ಕಳ್ಳ, ಕುಂದಾಪುರ ಹೇರಿಕುದ್ರು ಅರೆಕಲ್ಲು ಬೊಬ್ಬರ್ಯ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಕಬ್ಬಿಣದ ಕೊಡಲಿಯಿಂದ ಹುಂಡಿ ಒಡೆಯಲು ಯತ್ನ ನಡೆಸಿದ್ದರೂ ಲಾಕ್ ಓಪನ್ ಆಗಿರಲಿಲ್ಲ. ಈ ವೇಳೆ ಕ್ಯಾಮೆರಾ ಸೈರನ್ ಆದ ಕಾರಣ ಅಲ್ಲಿಂದ ಪರಾರಿಯಾಗಿದ್ದಾನೆ.
ಸೋಮವಾರ ಬೆಳಗಿನ ಜಾವ 3 ಗಂಟೆಗೆ ಈ ಘಟನೆ ನಡೆದಿದ್ದು ಕಳ್ಳನ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.