ಪಡುಬಿದ್ರಿ : ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಗೆ ಅಳವಡಿಸಲು ಉದ್ದೇಶಿಸಿರುವ ಟೋಲ್ಗೇಟ್ ವಿರುದ್ಧ ಇಂದು ಪಡುಬಿದ್ರಿ ಕಂಚಿನಡ್ಕ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
ಪಡುಬಿದ್ರಿ ಕಂಚಿನಡ್ಕ ರಾಜ್ಯ ಹೆದ್ದಾರಿಗೆ ಅಳವಡಿಸಲು ಉದ್ದೇಶಿಸಿರುವ ಟೋಲ್ಗೇಟ್ ಅನ್ನು ಶಾಶ್ವತವಾಗಿ ರದ್ದುಗೊಳಿಸುವಂತೆ ಅಪರ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಳಿಕ ಸಾವಿರಾರು ಜನರೊಂದಿಗೆ ಸೇರಿ ಕಂಚಿನಡ್ಕದಿಂದ ಪಡುಬಿದ್ರಿ ಪೇಟೆವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಕಾಪು ಶಾಸಕರು ಪಾಲ್ಗೊಂಡರು.
