ಉಡುಪಿ : ಗುತ್ತಿಗೆ ಆಧಾರದಲ್ಲಿ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೌರಕಾರ್ಮಿಕ ತನ್ನಿ (39) ಎಂಬವರು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರು ಕದ್ಮಲ್ ರಂಗರಾವ್ ರಸ್ತೆಯಲ್ಲಿ ಸಂಭವಿಸಿದೆ.

ನಗರ ಪೋಲಿಸ್ ಠಾಣೆಯ ಸುರೇಶ್ ಕೆ, ಜಾಸ್ವ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತ ದೇಹವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುರ ಅವರು ವೈದ್ಯಕೀಯ ಪರೀಕ್ಷಾ ಘಟಕಕ್ಕೆ ಸಾಗಿಸಲು ನೆರವಾದರು. ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
