ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ವೈದ್ಯಕೀಯ ಕೌಶಲ ತರಬೇತಿಗಾಗಿ ವರ್ಚುವಲ್ ರಿಯಾಲಿಟಿ (VR) ಪ್ರವರ್ತಕ ಕಂಪನಿ ಮೆಡಿಸಿಮ್ ವಿಆರ್ (MedisimVR) ನೊಂದಿಗೆ ಏಪ್ರಿಲ್ 14 ರಂದು ಒಪ್ಪಂದಕ್ಕೆ (MoU) ಸಹಿ ಹಾಕಿದೆ.
ಈ ಒಪ್ಪಂದವು ವೈದ್ಯಕೀಯ ಶಿಕ್ಷಣದಲ್ಲಿ ಒಳಗೊಳ್ಳುವ ತಂತ್ರಜ್ಞಾನಗಳನ್ನು ಸಂಯೋಜಿಸುವಲ್ಲಿ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ. ಮಾಹೆ ಮತ್ತು ಮೆಡಿಸಿಮ್ ವಿಆರ್ ಒಪ್ಪಂದವು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ ವಿಆರ್ ಮೂಲಕ ಅತ್ಯಾಧುನಿಕ ಸಂಶೋಧನೆಗೆ ಚಾಲನೆ ನೀಡಲಿದೆ. ಇದು ಕೌಶಲ ಅಭಿವೃದ್ಧಿಯನ್ನು ಸಕ್ರಿಯಗೊಳಿಸಲಿದೆ. ಇದಕ್ಕಾಗಿ ಕ್ಯಾಂಪಸ್ಸಿನಲ್ಲಿ ವಿಆರ್ ಕೌಶಲ ಪ್ರಯೋಗಾಲಯವನ್ನು ಸ್ಥಾಪಿಸಲಾಗುತ್ತಿದ್ದು, ವಿವಿಧ ಚಟುವಟಿಕೆಗಳ ಮೂಲಕ ನಾವೀನ್ಯತೆಯನ್ನು ಉತ್ತೇಜಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ವಿಜ್ಞಾನಗಳ ಪ್ರೊ ವೈಸ್ ಚಾನ್ಸೆಲರ್ ಡಾ. ಶರತ್ ಕೆ. ರಾವ್ ಅವರು, ವೈದ್ಯಕೀಯ ಶಿಕ್ಷಣದಲ್ಲಿ ತಾಂತ್ರಿಕ ಆವಿಷ್ಕಾರಕ್ಕೆ ಮಾಹೆಯ ಬದ್ಧತೆಯನ್ನು ಪುನರುಚ್ಚರಿಸಿದರು. ಇದರೊಂದಿಗೆ ವಿಆರ್ ಏಕೀಕರಣದ ಮೂಲಕ ಪಠ್ಯಕ್ರಮ ಮತ್ತು ಕೌಶಲದ ಭವಿಷ್ಯದ ದೃಷ್ಟಿಕೋನವನ್ನು ವಿವರಿಸಿದರು.
ಮಾಹೆಯ ರಿಜಿಸ್ಟ್ರಾರ್ ಡಾ.ಗಿರಿಧರ ಕಿಣಿ ಅವರು ಈ ವಿಆರ್ ಉಪಕ್ರಮ ವಿದ್ಯಾರ್ಥಿಗಳ ತೊಡಗಿಸುವಿಕೆಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.
ಈ ಒಪ್ಪಂದದ ಮೂಲಕ ವೈದ್ಯಕೀಯ ಕೌಶಲ ಮತ್ತು ಸಾಮರ್ಥ್ಯ ಆಧಾರಿತ ತರಬೇತಿ ಹೆಚ್ಚಿಸಲು ವಿಆರ್ ಸಾಮಥ ವಿಆರ್ನ ರೂಪಾಂತರದ ಸಾಮರ್ಥ್ಯವನ್ನು ಮೂಲ ವೈದ್ಯಕೀಯ ವಿಜ್ಞಾನಗಳ ವಿಭಾಗದ ಹಿರಿಯ ಅಧ್ಯಾಪಕ ಡಾ. ಸಂಬಿತ್ ದಾಶ್ ಹೇಳಿದರು.
ಮಾಹೆ ಕಾರ್ಪೋರೆಟ್ ರಿಲೇಷನ್ನ ನಿರ್ದೇಶಕ ಡಾ. ಹರೀಶ್ ಕುಮಾರ್ ಅವರು ಮಾಹೆಯ ವಿಸ್ತರಿಸುತ್ತಿರುವ ಉದ್ಯ-ಶಿಕ್ಷಣವಲಯದ ಸಹಯೋಗಗಳ ಬಗ್ಗೆ ವಿವರಿಸಿದರು.
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ತುರ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ವಿಮಲ್ ಕೃಷ್ಣನ್,ಮಾಹೆಯಲ್ಲಿ ನಡೆಯುತ್ತಿರುವ ವಿಆರ್ ಸಂಬಂಧಿತ ಸಂಶೋಧನಾ ಉಪಕ್ರಮಗಳ ಬಗ್ಗೆ ಒಳನೋಟಗಳನ್ನು ಹಂಚಿಕೊಂಡರು.
ಮೆಡಿಸಿಮ್ವಿಆರ್ನ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅದಿತ್ ಚಿನ್ನಸ್ವಾಮಿ ಅವರು ಕಂಪನಿಯ ವಿಆರ್ ಸಾಮರ್ಥ್ಯಗಳು ಮತ್ತು ಪರಿಹಾರಗಳ ಕುರಿತ ಅವಲೋಕನವನ್ನು ಪ್ರಸ್ತುತಪಡಿಸಿದರು, ವಿಕಸನಗೊಳ್ಳುತ್ತಿರುವ ಶೈಕ್ಷಣಿಕ ಅಗತ್ಯಗಳೊಂದಿಗೆ ಅವುಗಳ ಹೊಂದಾಣಿಕೆ ಕುರಿತು ಹೇಳಿದರು.
ಮಾಹೆಯಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಸಮುದಾಯದ ಚಾಲನೆ ಮತ್ತು ಆವಿಷ್ಕಾರದ ಭಾಗವಾಗಿ ಅದನ್ನು ನನಸು ಮಾಡುವಲ್ಲಿ ಒಂದು ಭಾಗವಾಗಿರುವ ಡಿಬಿಎಂಎಸ್-ಮಾಹೆಯ ಹಿರಿಯ ಪ್ರಾಧ್ಯಾಪಕರಾದ ಡಾ. ಉಲ್ಲಾಸ್ ಕಾಮತ್, ಡಾ. ಬಿನ್ಸಿ ಜಾರ್ಜ್, ಡಾ. ಅರವಿಂದ್ ಪಾಂಡೆ ಮತ್ತು ಸ್ನಿಗ್ಧಾ ಮಿಶ್ರಾ ಉಪಸ್ಥಿತರಿದ್ದರು.
ಆರೋಗ್ಯ ವಿಜ್ಞಾನ ಶಿಕ್ಷಣದಲ್ಲಿ ವಿಆರ್ ಆಧಾರಿತ ತರಬೇತಿ ಮಾಡ್ಯೂಲ್ಗಳ ಸಂಶೋಧನೆ, ಅಭಿವೃದ್ಧಿ ಮತ್ತು ಅನುಷ್ಠಾನಕ್ಕಾಗಿ ಸಹಕಾರಿ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಿದ ಬಳಿಕ ಒಪ್ಪಂದಕ್ಕೆ ಸಹಿ ಮಾಡಲಾಯಿತು.