ಉಡುಪಿ : ಇಂದ್ರಾಳಿ ಪರಿಸರದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಮಣಿಪಾಲ ಪೋಲಿಸರ ಸಹಕಾರದಿಂದ ವಶಕ್ಕೆ ಪಡೆದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಸೋಮವಾರ ನಡೆದಿದೆ.
ದಾಖಲಿಸಲ್ಪಟ್ಟಿರುವ ವ್ಯಕ್ತಿ ಮನೋರೋಗಿಯಾಗಿದ್ದು, ಪಶ್ಚಿಮ ಬಂಗಾಳದವನೆಂದು ತಿಳಿದುಬಂದಿದೆ.
ವ್ಯಕ್ತಿಯ ಸಂಬಂಧಿಕರಿಗೆ ವಿಷಯ ಮುಟ್ಟಿಸಲಾಗಿದೆ. ಕರೆದೊಯ್ಯಲು ಪಶ್ಚಿಮ ಬಂಗಾಲದಿಂದ ಬರುವುದಾಗಿ ಹೇಳಿಕೊಂಡಿದ್ದಾರೆ.
ಕಾರ್ಯಚಾರಣೆಯಲ್ಲಿ ಸದಾನಂದ ಪೂಜಾರಿ, ವಿವೇಕ್, ವಿಕ್ರಮ್, ವಿಲಾಸ್ ನಾಯಕ್ ಮಂಚಿ, ನೆರವಾಗಿದ್ದರು.