ಮಂಗಳೂರು : ನಗರದ ವ್ಯಾಪ್ತಿಯ ಕೊಡಿಯಾಲಬೈಲ್ ಗ್ರಾಮದ ಕಂಬಳಕ್ರಾಸ್ ಬಳಿಯಿರುವ ಎಸ್.ಎಸ್. ಕಂಪೌಂಡ್ ಕಟ್ಟಡದ ಮೊದಲನೇ ಮಹಡಿಯಲ್ಲಿ 1.64ಲಕ್ಷ ರೂ. ಮೌಲ್ಯದ ಮದ್ಯದ ಬಾಟಲಿಗಳು ಪತ್ತೆಯಾಗಿದೆ.
ಮಂಗಳೂರಿನ ಅಬಕಾರಿ ಜಂಟಿ ಆಯುಕ್ತ ಡಾ||ಸಿ.ಹೆಚ್ ಬಾಲಕೃಷ್ಣರವರ ಆದೇಶದಂತೆ ಅಬಕಾರಿ ಉಪ ಆಯುಕ್ತ ಟಿ.ಎಂ. ಶ್ರೀನಿವಾಸ ನಿರ್ದೇಶನದಂತೆ ಅಬಕಾರಿ ಉಪ ಅಧೀಕ್ಷಕ ಸಂತೋಷ ಮೋಡಗಿರವರ ನೇತೃತ್ವದಲ್ಲಿ ನವೆಂಬರ್ 16ರಂದು ಮಧ್ಯರಾತ್ರಿ 12.05ರವೇಳೆ ದಾಳಿ ನಡೆಸಿದ್ದರು. ಈ ವೇಳೆ ಎಸ್.ಎಸ್. ಕಂಪೌಂಡ್ ಕಟ್ಟಡದ ಮೊದಲನೇ ಮಹಡಿಯಲ್ಲಿ 19.5 litres ಡಿಫೆನ್ಸ್ ಮದ್ಯ, 52.5 litres ಗೋವಾ ರಾಜ್ಯದ ಮದ್ಯ, 3 litres ಕರ್ನಾಟಕ ರಾಜ್ಯದ ಮದ್ಯ, 3 litres ತೆರಿಗೆರಹಿತ ವಿದೇಶ ಮದ್ಯ, 21.5 ಲೀಟರ್ ಗೋವಾ ರಾಜ್ಯದ ಬಿಯರ್, 0.33 ಲೀಟರ್ ಕರ್ನಾಟಕ ರಾಜ್ಯದ ಬಿಯರ್, 1.300 ಲೀಟರ್ ಡಿಫೆನ್ಸ್ ಬೀಯರ್ ಪತ್ತೆಯಾಗಿದೆ. ಒಟ್ಟು 101.30 ಲೀಟರ್ ಮದ್ಯ ಹಾಗೂ ಬೀಯರ್ ಇಲ್ಲಿ ಪತ್ತೆಯಾಗಿತ್ತು. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 1,64,205 ರೂ. ಎಂದು ಅಂದಾಜಿಸಲಾಗಿದೆ.
ಯಾವುದೇ ದಾಖಲಾತಿಗಳಿಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ಈ ಮದ್ಯವನ್ನು ಸಂಗ್ರಹಿಸಿ ಇಡಲಾಗಿತ್ತು. ಕರ್ನಾಟಕ ಅಬಕಾರಿ ಕಾಯ್ದೆ 1965 ರ ನಿಯಮ 14, 15 ರಂತೆ ಅಪರಾಧವಾಗಿದ್ದು ಕಲಂ 32(1), 38(ಎ) ಮತ್ತು 43(ಎ) ರಂತೆ ಶಿಕ್ಷಾರ್ಹವಾಗಿರುವುದರಿಂದ ಈ ಪ್ರಕರಣವನ್ನು ಮಂಗಳೂರು ದಕ್ಷಿಣ ವಲಯ-1ರ ಅಬಕಾರಿ ಉಪ ನಿರೀಕ್ಷಕರು-1 ಹರೀಶ ಪಿ. ದಾಖಲಿಸಿದ್ದಾರೆ. ಪ್ರಕರಣದಲ್ಲಿನ ಆರೋಪಿ ಅಮಿತ್ ಎ.ಪಿ. ಎಂಬವನು ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇತ್ತೀಚಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದ ಅಬ್ಯನಡ್ಕದಲ್ಲಿರುವ ಪತ್ತೆಯಾದ ಪ್ರಕರಣಕ್ಕೂ ಈ ಪ್ರಕರಣಕ್ಕೂ ಸಂಬಂಧ ಇರುವುದು ಮೇಲ್ನೋಟಕ್ಕೆ ತಿಳಿದುಬಂದಿರುತ್ತದೆ. ಇದೊಂದು ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯಮಟ್ಟದ ಜಾಲವಾಗಿರುತ್ತದೆ.