ಉಡುಪಿ : 2023ನೇ ಸಾಲಿನ ರಾಷ್ಟ್ರೀಯ ಕಾಳಿದಾಸ ಸಮ್ಮಾನ್ ಪ್ರಶಸ್ತಿಯನ್ನು ಮಧ್ಯಪ್ರದೇಶ ಸರ್ಕಾರ ಜೀವಿತಾವಧಿಯ ಶ್ರೇಷ್ಠತೆ ಆಧಾರದ ಮೇಲೆ ಸರ್ವಾನುಮತದಿಂದ ರಘುಪತಿ ಭಟ್ಟರನ್ನು ಆಯ್ಕೆ ಮಾಡಿದೆ.

ಈ ಗೌರವದ ಅಡಿಯಲ್ಲಿ 5 ಲಕ್ಷ ನಗದು ಶಾಲು ಫಲಕ ನೀಡಲಾಗುತ್ತದೆ. ರಘುಪತಿ ಭಟ್ಟರಿಗೆ 12-11-2024ರಂದು ಉಜ್ಜಯಿನಿಯಲ್ಲಿ ನಡೆಯುವ ಸಮಾರಂಭದಲ್ಲಿ ಗೌರವವನ್ನು ಆಯೋಜಿಸಲಾಗಿದೆ. ಭಟ್ಟರು ಭಾರತೀಯ ಶಾಸ್ತ್ರೀಯ ಚಿತ್ರ ರಚನೆಯಲ್ಲಿ ಸುಮಾರು 50 ವರ್ಷ ಶ್ರಮವಹಿಸಿ ಕೆಲಸ ಮಾಡಿರುತ್ತಾರೆ. ಅವರ ಪ್ರತಿಭೆಯನ್ನು ಮಧ್ಯಪ್ರದೇಶದ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಲಾಗುವುದು.
ನಮ್ಮ ಭಟ್ಟರು ನಮ್ಮ ಮಠದ ಆಸ್ಥಾನ ಕಲಾವಿದರಾಗಿದ್ದು ಉಡುಪಿಯ ಗೀತಮಂದಿರದಲ್ಲೂ ಅವರ ಅಪೂರ್ವ ಚಿತ್ರಗಳನ್ನೆ ಕೆತ್ತಿಸಲಾಗಿದೆ. ನಮ್ಮವಿಶೇಷ ಅಭಿಮಾನಿಗಳಾದ ಉಡುಪಿಯವರೇ ಆದ ರಘುಪತಿ ಭಟ್ಟರಿಗೆ ಶ್ರೀಕೃಷ್ಣಮುಖ್ಯಪ್ರಾಣ ದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲಿ ಇನ್ನಷ್ಟು ಉತ್ತಮ ಪ್ರಶಸ್ತಿಗಳು ಬರಲಿ ಎಂದು ಪೂಜ್ಯ ಪರ್ಯಾಯ ಶ್ರೀಪಾದರು ಹಾರೈಸಿದ್ದಾರೆ.