ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುಂಜಾರುಗಿರಿ ಪರಿಸರದಲ್ಲಿ ರಾಶಿ ಹಾಕಿದ ಶಿಲೆ ಕಲ್ಲುಗಳಲ್ಲಿ ವಾಸವಾಗಿದ್ದ ಚಿರತೆಯನ್ನು ಕೊನೆಗೂ ಯಶಸ್ವಿಯಾಗಿ ಸರೆ ಹಿಡಿಯಲಾಗಿದೆ.
ಈ ಪರಿಸರದಲ್ಲಿ ಬಹಳ ದಿನಗಳಿಂದ ಗ್ರಾಮಸ್ಥರು ಭಯದಿಂದ ಓಡಾಟ ನಡೆಸುತ್ತಿದ್ದರು. ಚಿರತೆ ಭಯದಿಂದಾಗಿ ಈ ಪರಿಸರದ ಅಂಗನವಾಡಿಗಳಿಗೆ ರಜೆಯನ್ನೂ ನೀಡಲಾಗಿತ್ತು. ರಾತ್ರಿ ಆಗುವ ಮೊದಲೇ ಗ್ರಾಮಸ್ಥರು ತಮ್ಮ ಮನೆಯಿಂದ ಹೊರಬರಲು ಭಯಪಡುತ್ತಿದ್ದರು.
ಇದೀಗ ಅರಣ್ಯ ಇಲಾಖೆ ಇಲ್ಲಿ ಬೋನನ್ನು ಇರಿಸಿ ಚಿರತೆಯನ್ನು ಸೆರೆಹಿಡಿಯುವುದರೊಂದಿಗೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.