ಉಡುಪಿ : ತೆಂಕನಿಡಿಯೂರು ಸರಕಾರಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ರೋಶನ್ ಶೆಟ್ಟಿ ಅವರನ್ನು ಜಿಲ್ಲೆಯ ಗೃಹ ರಕ್ಷಕ ದಳ ಗೌರವ ಸಮಾದೇಷ್ಟರನ್ನಾಗಿ ರಾಜ್ಯ ಸರಕಾರ ನೇಮಿಸಿದೆ.
ಇವರು ಜಿಲ್ಲಾ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಮಣಿಪಾಲ : MAHE FAIMER ಇಂಟರ್ನ್ಯಾಶನಲ್ ಇನ್ಸ್ಟಿಟ್ಯೂಟ್ ಫಾರ್ ಲೀಡರ್ಶಿಪ್ ಇನ್ ಇಂಟರ್ಪ್ರೊಫೆಷನಲ್ ಎಜುಕೇಶನ್ (M-FIILIPE) ಅಧಿಕೃತವಾಗಿ ತನ್ನ 10 ನೇ ಬ್ಯಾಚ್ ಅನ್ನು ಪ್ರಾರಂಭಿಸಿದೆ, ಇದು ಆರೋಗ್ಯ ವೃತ್ತಿಪರರ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಿದೆ. ಈ ಕಾರ್ಯಕ್ರಮವು ಇಂಟರ್ಪ್ರೊಫೆಷನಲ್ ಎಜುಕೇಶನ್ (ಐಪಿಇ) ಮೇಲೆ ಬಲವಾದ ಒತ್ತು ನೀಡುವ ಮೂಲಕ ನಾಯಕರು ಮತ್ತು ನವೋದ್ಯಮಗಳನ್ನು ಸಬಲೀಕರಣಗೊಳಿಸಲು ಸಮರ್ಪಿಸಲಾಗಿದೆ, ಇದು ಆರೋಗ್ಯದ ಅಭ್ಯಾಸಗಳು ಮತ್ತು ಶೈಕ್ಷಣಿಕ ವಿಧಾನಗಳನ್ನು ಪರಿವರ್ತಿಸಲು ಅವಶ್ಯಕವಾಗಿದೆ.
ಮುಖ್ಯ ಅತಿಥಿಗಳಾದ MAHE ನ ರಿಜಿಸ್ಟ್ರಾರ್ ಡಾ. ಪಿ ಗಿರಿಧರ್ ಕಿಣಿ ಅವರು ತಮ್ಮ ಮುಖ್ಯ ಭಾಷಣದಲ್ಲಿ ಸಹೋದ್ಯೋಗಿಗಳ ಸಂಸ್ಥೆಗಳಾದ್ಯಂತ ಸಹಯೋಗದ ಅಂತರವೃತ್ತಿಪರ ಸಂಶೋಧನೆಯ ನಿರ್ಣಾಯಕ ಅಗತ್ಯವನ್ನು ಒತ್ತಿ ಹೇಳಿದರು. ಅವರು ಧನಾತ್ಮಕ ನಾಯಕತ್ವದಲ್ಲಿ ತೊಡಗಿಸಿಕೊಳ್ಳಲು ಮತ್ತು ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗಾಗಿ MAHE ಯ ಸಂಶೋಧನಾ ಲಂಬವಾಗಿ ತೊಡಗಿಸಿಕೊಳ್ಳಲು ಭಾಗವಹಿಸುವವರನ್ನು ಪ್ರೋತ್ಸಾಹಿಸಿದರು.
ಬ್ರಿಟಿಷ್ ಕೊಲಂಬಿಯಾದ ಪ್ರೊಫೆಸರ್ ಎಮೆರಿಟಸ್ ಮತ್ತು M-FIILIPE ನ ಇಂಟರ್ಪ್ರೊಫೆಷನಲ್ ಎಜುಕೇಶನ್ನ Dr. TMA ಪೈ ಎಂಡೋಮೆಂಟ್ ಚೇರ್ ಪ್ರೊ. ಜಾನ್ HV ಗಿಲ್ಬರ್ಟ್, ಪ್ರಾದೇಶಿಕ ಸಂಸ್ಥೆಯು ಜಾಗತಿಕವಾಗಿ ಅತ್ಯಂತ ವಿಶಿಷ್ಟವಾದ FAIMER ಪ್ರಾದೇಶಿಕ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ಪ್ರಶಂಸಿಸಿದರು. ಆರೋಗ್ಯ ರಕ್ಷಣೆಯಲ್ಲಿ ಸುಸ್ಥಿರತೆಗಾಗಿ ಮಹತ್ವದ ನೀತಿ ಪರಿಣಾಮಗಳೊಂದಿಗೆ ಪ್ರಭಾವಿ ಸಂಶೋಧನಾ ಪ್ರಬಂಧಗಳನ್ನು ತಯಾರಿಸಿದ ಹಿಂದಿನ ಫೆಲೋಗಳ ಪ್ರಭಾವಶಾಲಿ ಫಲಿತಾಂಶಗಳನ್ನು ಅವರು ಹೈಲೈಟ್ ಮಾಡಿದರು.
M-FIILIPE ನ ನಿರ್ದೇಶಕರಾದ ಡಾ. ಎಲ್ಸಾ ಸನತೊಂಬಿ ದೇವಿ ಅವರು ಫೆಲೋಗಳ ಲಂಬ ಬೆಳವಣಿಗೆ ಮತ್ತು ಭಾರತದಾದ್ಯಂತ ಸಾಮರ್ಥ್ಯ-ಆಧಾರಿತ ವೈದ್ಯಕೀಯ ಶಿಕ್ಷಣದೊಂದಿಗೆ ಜೋಡಿಸಲಾದ ವಿವಿಧ ಕೇಂದ್ರಗಳ ಸ್ಥಾಪನೆಗೆ ಒತ್ತು ನೀಡಿದರು. “ನಮ್ಮ ಫೆಲೋಗಳು ನಮ್ಮ ಹೆಮ್ಮೆ, ಮತ್ತು ಅವರ ಆಕಾಂಕ್ಷೆಗಳು ಆರೋಗ್ಯ ರಕ್ಷಣೆಯ ಗುಣಮಟ್ಟದ ಭವಿಷ್ಯಕ್ಕಾಗಿ ಅತ್ಯಗತ್ಯ” ಎಂದು ಅವರು ಹೇಳಿದರು, 11 ರಾಜ್ಯಗಳು ಮತ್ತು 2 ದೇಶಗಳ 24 ಫೆಲೋಗಳ ಭಾಗವಹಿಸುವಿಕೆಯನ್ನು ಗಮನಿಸಿ ಧನಾತ್ಮಕ ಪರಿಣಾಮ ಬೀರಲು ಬದ್ಧರಾಗಿದ್ದಾರೆ.
ಡಾ. ಟಟಿಯಾನಾ ಮಂಡಲ್ ಅವರು IPE ಯಲ್ಲಿನ ಆಡಳಿತಾತ್ಮಕ ಅಧಿಕಾರಿಗಳು ಮತ್ತು ಜಾಗತಿಕ ನಾಯಕರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು, ಅವರ ಒಳನೋಟಗಳು ಮತ್ತು ಅನುಭವಗಳೊಂದಿಗೆ ಸಹೋದ್ಯೋಗಿಗಳನ್ನು ಪ್ರೇರೇಪಿಸಿದರು. ವಿವಿಧ ಪ್ರಾದೇಶಿಕ ಸಂಸ್ಥೆಗಳ FAIMER ಅಧ್ಯಾಪಕರು ಅಂತರವೃತ್ತಿಪರ ಶಿಕ್ಷಣಕ್ಕೆ ನವೀನ ವಿಧಾನಗಳನ್ನು ಚರ್ಚಿಸುವ ಮೂಲಕ ಕಾರ್ಯಕ್ರಮಕ್ಕೆ ಕೊಡುಗೆ ನೀಡಿದರು.
10 ನೇ ಬ್ಯಾಚ್ ಫೆಲೋಗಳು ಈ ಪರಿವರ್ತಕ ಪ್ರಯಾಣವನ್ನು ಪ್ರಾರಂಭಿಸಿದಾಗ, M-FIILIPE ಸಹಕಾರಿ ಮತ್ತು ಪರಿಣಾಮಕಾರಿ ಆರೋಗ್ಯ ವ್ಯವಸ್ಥೆಗೆ ದಾರಿ ಮಾಡಿಕೊಡುವುದನ್ನು ಮುಂದುವರೆಸಿದೆ.
ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್ಹೈಯರ್ ಎಜುಕೇಶನ್ (MAHE) 19ನೇ ಎಫ್ಐಸಿಸಿಐ ಉನ್ನತಶಿಕ್ಷಣ ಶೃಂಗಸಭೆ 2024ರಲ್ಲಿ ಪ್ರತಿಷ್ಠಿತ ಎಫ್ಐಸಿಸಿಐ “ವರ್ಷದ ಅತ್ಯುತ್ತಮ ವಿಶ್ವವಿದ್ಯಾಲಯ – (ಸ್ಥಾಪಿತ ವರ್ಗ)” ಪ್ರಶಸ್ತಿಯನ್ನು ನೀಡಿಗೌರವಿಸಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಅಂಬೇಡ್ಕರ್ ಇಂಟರ್ನ್ಯಾಶನಲ್ ಸೆಂಟರ್, ನವದೆಹಲಿಯಲ್ಲಿ ನಡೆಯಿತು. ಭಾರತದಲ್ಲಿನ ಬ್ರಿಟಿಷ್ ಹೈ ಕಮಿಷನರ್ ಲಿಂಡಿ ಕ್ಯಾಮರೂನ್ ಅವರು ಎಫ್ಐಸಿಸಿಐಯ ಮಹಾನಿರ್ದೇಶಕರಾದ ಶ್ರೀಮತಿ ಜ್ಯೋತಿ ವಿಜ್ಮತ್ತು ಸಿಂಬಯೋಸಿಸ್ ಇಂಟರ್ನ್ಯಾಶನಲ್ ಯೂನಿವರ್ಸಿಟಿಯ ಸಹಕುಲಾಧಿಪತಿ ಡಾ. ವಿದ್ಯಾ ಯರ್ವಾಡೇಕರ್ ಅವರ ಉಪಸ್ಥಿತಿಯಲ್ಲಿ ಪ್ರದಾನ ಮಾಡಿದರು.
ಮಾಹೆ ಪರವಾಗಿ ಡಾ. ನಾರಾಯಣ ಸಭಾಹಿತ್ ಸಹ ಕುಲಪತಿ (ತಂತ್ರಜ್ಞಾನ ಮತ್ತು ವಿಜ್ಞಾನ) ಅವರು ಮಾಹೆಯ ವಿಶೇಷ ನಿಯೋಗದೊಂದಿಗೆ ಪ್ರಶಸ್ತಿಯನ್ನು ಸ್ವೀಕರಿಸಿದರು. ನಿಯೋಗದಲ್ಲಿ ಎಂಐಟಿ ಮಣಿಪಾಲದ ಪ್ರೊ. ವಿನೋದ್ ಕಾಮತ್, ಟ್ಯಾಪ್ಮಿ ಮಣಿಪಾಲದ ಡಾ. ಗುರುದತ್ ನಾಯಕ್, ಮಾಹೆ ಮಣಿಪಾಲದ ಹಿಲ್ಡಾ ಕರ್ನೆಲಿಯೊ, ಮಾಹೆ ಮಣಿಪಾಲದ ಮಾರ್ಕೆಟಿಂಗ್ ಸಹಾಯಕ ನಿರ್ದೇಶಕಿ ಅರ್ಚನಾ ನಾಯಕ್ ಮತ್ತು ಮಾಹೆ ಬೆಂಗಳೂರಿನ ಸಹಾಯಕ ನಿರ್ದೇಶಕಿ ದಿವ್ಯದರ್ಶಿನಿ ಕೆ ಉಪಸ್ಥಿತರಿದ್ದರು.
ಮಾಹೆಯ ಸಹ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅವರು ಈ ಪ್ರಶಸ್ತಿಗಾಗಿ ತಮ್ಮ ಮೆಚ್ಚುಗೆಯನ್ನು ಹಂಚಿಕೊಂಡರು, “ಮಾಹೆಯಲ್ಲಿ, ನಾವು ಜ್ಞಾನವನ್ನು ನೀಡುವುದರ ಜೊತೆಗೆ ಜಗತ್ತಿನಲ್ಲಿ ಮಹತ್ವದ ಬದಲಾವಣೆಯನ್ನು ಮಾಡಬಲ್ಲ ವ್ಯಕ್ತಿಗಳನ್ನು ರೂಪಿಸುವಲ್ಲಿಯೂ ಮಹತ್ವದ ಪಾತ್ರವನ್ನು ವಹಿಸುತ್ತೇವೆ. ಈ ಪ್ರಶಸ್ತಿಯು ನಮ್ಮ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ, ನಮ್ಮ ಸಂಸ್ಥೆಯನ್ನು ಮುನ್ನಡೆಸುವ ದೃಷ್ಟಿಕೋನ ಮತ್ತು ನಾಯಕತ್ವವು ನಮ್ಮ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗೆ ನಾವು ಈ ಸಾಧನೆಯನ್ನು ಅರ್ಪಿಸುತ್ತೇವೆ, ಅವರ ಸಮರ್ಪಣೆ ಮತ್ತು ಪರಿಶ್ರಮವು ಮಾಹೆ ಅನ್ನು ಜಾಗತಿಕ ಖ್ಯಾತಿಯ ಸಂಸ್ಥೆಯನ್ನಾಗಿ ಮಾಡಿದೆ”
ಈ ಸಂದರ್ಭದಲ್ಲಿ ಸಂತೋಷ ಹಂಚಿಕೊಂಡ ಮಾಹೆಯ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ವಿಎಸ್ಎಂ (ನಿವೃತ್ತ)ಅವರು ತಮ್ಮ ಕೃತಜ್ಞತೆ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದರು, “ಈ ಪ್ರಶಸ್ತಿಯು ಪ್ರತಿಯೊಬ್ಬ ಸದಸ್ಯರ ಅವಿರತ ಶ್ರೇಷ್ಠತೆಯ ಅನ್ವೇಷಣೆಗೆ ಸಾಕ್ಷಿಯಾಗಿದೆ. ಮಾಹೆ ಸಮುದಾಯದ ನಾವೀನ್ಯತೆ, ಸಂಶೋಧನೆ ಮತ್ತು ಶೈಕ್ಷಣಿಕ ಪ್ರತಿಭೆಯನ್ನು ಬೆಳೆಸುವ ನಮ್ಮ ಬದ್ಧತೆಯು ಎಫ್ಐಸಿಸಿಐ ಯಿಂದ ಗುರುತಿಸಲ್ಪಟ್ಟಿರುವುದಕ್ಕೆ ನಾವು ಅಪಾರವಾಗಿ ಹೆಮ್ಮೆಪಡುತ್ತೇವೆ ಮತ್ತು ಈ ಪುರಸ್ಕಾರವು ಉನ್ನತ ಶಿಕ್ಷಣದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಲು ನಮಗೆ ಸ್ಫೂರ್ತಿ ನೀಡುತ್ತದೆ.”
ಶೈಕ್ಷಣಿಕ ಉತ್ಕೃಷ್ಟತೆ, ನವೀನ ಅಭ್ಯಾಸಗಳು, ಅಧ್ಯಾಪಕರ ಅಭಿವೃದ್ಧಿ, ವಿದ್ಯಾರ್ಥಿ ತೊಡಗಿಸಿಕೊಳ್ಳುವಿಕೆ ಮತ್ತು ಸಮಾಜದ ಬೆಳವಣಿಗೆಗೆ ಕೊಡುಗೆಗಳಂತಹ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ವಿಶ್ವವಿದ್ಯಾಲಯಗಳನ್ನು ಪ್ರಶಸ್ತಿ ಗುರುತಿಸುತ್ತದೆ. ಸಂಶೋಧನೆ, ಜಾಗತಿಕ ಸಹಯೋಗಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಾಹೆಯ ನಿರಂತರ ದಾಪುಗಾಲುಗಳು ಈ ಪ್ರತಿಷ್ಠಿತ ಪುರಸ್ಕಾರವನ್ನು ಗಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿವೆ.
ಪ್ರಶಸ್ತಿ ಪ್ರದಾನ ಸಮಾರಂಭವು ಉನ್ನತ ಶಿಕ್ಷಣ ಕ್ಷೇತ್ರದ ಪ್ರಮುಖ ವ್ಯಕ್ತಿಗಳು, ನೀತಿ ನಿರೂಪಕರು ಮತ್ತು ಜಾಗತಿಕ ಗಣ್ಯರ ಉಪಸ್ಥಿತಿಗೆ ಸಾಕ್ಷಿಯಾಯಿತು. “ವರ್ಷದ ಅತ್ಯುತ್ತಮ ವಿಶ್ವವಿದ್ಯಾನಿಲಯ” ಎಂದು ಮಾಹೆಯ ಗುರುತಿಸುವಿಕೆ ವಿಶ್ವ-ದರ್ಜೆಯ ಶಿಕ್ಷಣವನ್ನು ನೀಡಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಭವಿಷ್ಯದ ನಾಯಕರನ್ನು ಪೋಷಿಸಲು ಅದರ ಬದ್ಧತೆಯನ್ನು ಬಲಪಡಿಸುತ್ತದೆ.
ಉಡುಪಿ : ಖ್ಯಾತ ಉದ್ಯಮಿ ರತನ್ ಟಾಟಾ ನಿಧನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ದೂರದೃಷ್ಟಿಯ ಮೂಲಕ ಉದ್ಯಮ ಜಗತ್ತನ್ನು ಆಳಿದ ರತನ್ ಟಾಟಾ, ಇಡೀ ದೇಶಕ್ಕೆ ಸ್ಫೂರ್ತಿಯಾಗಿದ್ದರು. ದೇಶದ ಇತಿಹಾಸದಲ್ಲಿ ಶಾಶ್ವತವಾಗಿ ತಮ್ಮ ಹೆಸರು ಉಳಿಯುವಂತೆ ಮಾಡಿದ್ದಾರೆ ಎಂದು ಹೆಬ್ಬಾಳಕರ್ ಸ್ಮರಿಸಿದ್ದಾರೆ.
ಭಾರತದ ಅಸ್ಮಿತೆ ಬೆಳೆಸಲು ಟಾಟಾ ಅವರ ಪಾತ್ರ ಅತ್ಯಂತ ದೊಡ್ಡದು. ಯುವ ಉದ್ಯಮಿಗಳಿಗೆ ಅವರು ದೊಡ್ಡ ಆದರ್ಶ. ಅವರ ನಿಧನದಿಂದ ದೇಶಕ್ಕೆ ಅಪಾರ ನಷ್ಟವಾಗಿದೆ. ಕೇವಲ ಉದ್ಯಮಿಯಾಗಿ ಮಾತ್ರವಲ್ಲ, ಅವರ ಟ್ರಸ್ಟ್ಗಳ ಮೂಲಕ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ. ಅವರು ತಮ್ಮ ಸರಳತೆ ಹಾಗೂ ಪರೋಪಕಾರಕ್ಕಾಗಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಕುಟುಂಬಕ್ಕೆ ಮತ್ತು ಟಾಟಾ ಸಮೂಹಕ್ಕೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಚಿವರು ಪ್ರಾರ್ಥಿಸಿದ್ದಾರೆ.
ಕಾರ್ಕಳ : ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯನವರ ಸರಕಾರ ದಿವಾಳಿಯಾಗಿದ್ದು, ತನ್ನ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ರಾಜ್ಯದ ಆರ್ಥಿಕತೆ ಅದೋಗತಿಗೆ ಇಳಿದಿದೆ. ಇದನ್ನು ಸರಿಪಡಿಸಲು ಸಾಧ್ಯವಾಗದೇ ಇದೀಗ ಸರಕಾರವು ಬಡವರ ಬಿಪಿಎಲ್ ಪಡಿತರ ಚೀಟಿ ರದ್ದಿಗೆ ಮುಂದಾಗಿದೆ. ಕಾಂಗ್ರೆಸ್ ಸರಕಾರ ಈ ಮೂಲಕ ಆರನೇ ಭಾಗ್ಯ ನೀಡಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಕಿಡಿಕಾರಿದರು.
ಅವರು ಅ. 2ರಂದು ಕಾರ್ಕಳದ ಬಜಗೋಳಿಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯ ಸರಕಾರ ಕೆಲವೊಂದು ತಾಂತ್ರಿಕ ಕಾರಣಗಳನ್ನು ನೀಡಿ ಪಡಿತರ ಚೀಟಿ ನೀಡದಂತೆ ನಿರ್ದೇಶನ ನೀಡಿದೆ. ಇದರಿಂದಾಗಿ ಲಕ್ಷಾಂತರ ಜನ ಅನ್ನ ಭಾಗ್ಯ ಯೋಜನೆಯಿಂದ ವಂಚಿತರಾಗಿದ್ದಾರೆ. ತನ್ನ ಆರ್ಥಿಕ ನೀತಿಯ ವೈಫಲ್ಯವನ್ನು ಸರಿಪಡಿಸಲು ರಾಜ್ಯದ ಜನತೆಯ ಮೇಲೆ ಗದಾ ಪ್ರಹಾರ ಮಾಡುತ್ತಿರುವ ಸರಕಾರ, ಗ್ಯಾರಂಟಿಗಳನ್ನು ಕೊಡಲಾಗದೆ ಹೀಗೆ ತನ್ನ ಜನವಿರೋಧಿ ನೀತಿ ಸಂಕಲ್ಪವನ್ನು ಪರೋಕ್ಷವಾಗಿ ಈಡೇರಿಸುತ್ತಿದೆ. ಈ ನಿಟ್ಟಿನಲ್ಲಿ ನಾವು ಸರಕಾರದ ಜನ ವಿರೋಧಿ ನೀತಿ, ಜನರಿಗೆ ಮಾಡಿರುವ ಮೋಸವನ್ನು ಜನತೆಯ ಮುಂದಿಡಬೇಕೆಂದು ಸುನಿಲ್ ಕುಮಾರ್ ಹೇಳಿದರು.
ಮುಖ್ಯಮಂತ್ರಿ ಸ್ಥಾನದ ಘನತೆ ಕಾಪಾಡಿ ರಾಜ್ಯ ಸರಕಾರ ಭ್ರಷ್ಟಾಚಾರದಿಂದ ಕೂಡಿದೆ. ಸ್ವತಃ ಮುಖ್ಯಮಂತ್ರಿಗಳೇ ಮುಡಾ ಹಗರಣದಲ್ಲಿ ಸಿಲುಕಿದ್ದಾರೆ. ಮುಡಾದಿಂದ ಅಕ್ರಮವಾಗಿ ಪಡೆದಿರುವ 14 ಸೈಟುಗಳನ್ನು ವಾಪಸ್ ನೀಡುವ ಮೂಲಕ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಇನ್ನೂ ಅಧಿಕಾರಕ್ಕೆ ಅಂಟಿಕೊಳ್ಳದೇ, ನೈತಿಕ ಹೊಣೆ ಹೊತ್ತಿಕೊಂಡು ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು ಕಾಪಾಡಿ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಸಭೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಜಿಲ್ಲಾ ಕಾರ್ಯದರ್ಶಿ ಉದಯ್ ಕೋಟ್ಯಾನ್, ಕಾರ್ಕಳ ಮಂಡಲದ ಉಪಾಧ್ಯಕ್ಷ ಅನಂತಕೃಷ್ಣ ಶೆಣೈ, ಮರ್ಣೆ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್ ಶೆಟ್ಟಿ ಹಿರ್ಗಾನ ಉಪಸ್ಥಿತರಿದ್ದರು.
ಉಡುಪಿ : ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ‘ರಂಗಭೂಮಿ (ರಿ.) ಉಡುಪಿ’ಯ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.
ಉಡುಪಿಯ ಡಯಾನ ಹೋಟೆಲ್ ಸಭಾಂಗಣದಲ್ಲಿ ಇತ್ತೀಚಿಗೆ ನಡೆದ ಸಂಸ್ಥೆಯ 59ನೇ ವಾರ್ಷಿಕ ಮಹಾಸಭೆಯಲ್ಲಿ 2024-25ನೇ ಸಾಲಿನ ಪದಾಧಿಕಾರಿಗಳು ಆಯ್ಕೆ ನಡೆಯಿತು.
ಮಾರ್ಗದರ್ಶಕರಾಗಿ ಡಾ. ಹೆಚ್. ಶಾಂತಾರಾಮ್, ಗೌರವಾಧ್ಯಕ್ಷರಾಗಿ ಡಾ. ಹೆಚ್. ಎಸ್. ಬಲ್ಲಾಳ್, ಉಪಾಧ್ಯಕ್ಷರಾಗಿ ಭಾಸ್ಕರ ರಾವ್ ಕಿದಿಯೂರು, ಹಾಗೂ ಎನ್. ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿಯಾಗಿ ಪ್ರದೀಪ್ ಚಂದ್ರ ಕುತ್ಪಾಡಿ ಆಯ್ಕೆಯಾದರು.
ಜತೆ ಕಾರ್ಯದರ್ಶಿಗಳಾಗಿ ಶ್ರೀಪಾದ ಹೆಗಡೆ ಹಾಗೂ ವಿವೇಕಾನಂದ ಎನ್., ಕೋಶಾಧಿಕಾರಿಯಾಗಿ ಭೋಜ ಯು., ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಪೂರ್ಣಿಮಾ ಸುರೇಶ್, ವಿದ್ಯಾವಂತ ಆಚಾರ್ಯ, ಹೆಚ್. ಜಯಪ್ರಕಾಶ್ ಕೆದ್ಲಾಯ, ಆನಂದ ಮೇಲಂಟ, ಡಾ. ವಿಷ್ಣುಮೂರ್ತಿ ಪ್ರಭು, ಅಮಿತಾಂಜಲಿ ಕಿರಣ್, ರವೀಂದ್ರ ಶೆಟ್ಟಿ ಕಡೆಕಾರು, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಹರೀಶ್ ಜಿ ಕಲ್ಯಾಡಿ, ಕೆ. ರವೀಂದ್ರ ಆಚಾರ್ಯ, ಕಾರ್ತಿಕ್ ಪ್ರಭು ಆಯ್ಕೆಯಾದರು.
ಗೌರವ ಸಲಹಾ ಸಮಿತಿಯ ಸದಸ್ಯರಾಗಿ ಯು ದಾಮೋದರ್, ಕೆ. ಗೋಪಾಲ್, ಕೆ. ಲಕ್ಷ್ಮೀನಾರಾಯಣ ಭಟ್, ಯು. ವಿಶ್ವನಾಥ ಶೆಣೈ, ಭುವನಪ್ರಸಾದ್ ಹೆಗ್ಡೆ, ಕುತ್ಪಾಡಿ ವಿಠಲ ಗಾಣಿಗ ಆಯ್ಕೆಯಾದರು.
ಆಡಳಿತ ಮಂಡಳಿಯ ವಿಶೇಷ ಆಹ್ವಾನಿತ ಸದಸ್ಯರಾಗಿ ಡಾ. ಮಾಧವಿ ಭಂಡಾರಿ, ಬೆಳಗೋಡು ರಮೇಶ್ ಭಟ್, ತೆಳ್ಳಾರು ರವೀಂದ್ರ ಪೂಜಾರಿ, ರಂಜನ್ ಕಲ್ಕೂರ, ಜಯಕರ್ ಮಣಿಪಾಲ, ಪಿ. ಆರ್ಮುಗಂ, ಸಂದೀಪ್ ಕುಮಾರ್ ಎಂ. ವಿಜಯ್ ಪ್ರಭಾಕರ್, ಹೆಚ್. ನರಸಿಂಹಮೂರ್ತಿ ರಾವ್, ಸೂರ್ಯಪ್ರಕಾಶ್, ಸುಬ್ರಹ್ಮಣ್ಯ ಸೇರಿಗಾರ್, ಸುಭಾಶ್ ಕೊರಂಗ್ರಪಾಡಿ, ರಾಘವ ಬಿ., ಅಕ್ಷಯ್ ಭಟ್, ಆದ್ಯತಾ ಭಟ್, ಪ್ರೀತಮ್ ನಾಯಕ್, ರೇವತಿ ನಾಡಿಗೇರ್, ರವಿರಾಜ್ ನಾಯಕ್, ಶ್ರೀಕಲ್ಯಾಣಿ ಪೂಜಾರಿ, ವಿಶ್ವನಾಥ್ ಕಟ್ಟೆಗುಡ್ಡೆ ಆಯ್ಕೆಯಾದರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಕಾರ್ಕಳ : ಗ್ಯಾರಂಟಿ ಯೋಜನೆಗಳ ಸಮರ್ಪಕ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯನ್ನು ರಚಿಸಲು ಸರಕಾರದ ಸೂಚನೆಯಂತೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಗೊಳಿಸುವ ಬಗ್ಗೆ ನಾಮ ನಿರ್ದೇಶನ ಮಾಡಿ ಶಿಫಾರಸ್ಸು ಮಾಡಿರುತ್ತಾರೆ.
ಅಂತೆಯೇ ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಯ ಸಮಿತಿಯ ಅಧ್ಯಕ್ಷರಾಗಿ ಮಾಳ ಗ್ರಾಮದ ಅಜಿತ್ ಹೆಗ್ಡೆ ನೇಮಕಗೊಂಡಿದ್ದಾರೆ. ಇವರು ಕಾರ್ಕಳ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಹಾಗೂ ಮಾಳ ಪಂಚಾಯತ್ನಲ್ಲಿ 5 ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಕಾರ್ಕಳ ಬ್ಲಾಕ್ ಕಾಂಗ್ರೆಸ್ನ ಉಪಾಧ್ಯಕ್ಷರಾಗಿದ್ದಾರೆ. ಸಮಿತಿಯ ಸದಸ್ಯರಾಗಿ ರಜನಿ, ರಾಕೇಶ್ ನಾಯ್ಕ ಪ್ರಶಾಂತ್ ಪೂಜಾರಿ, ಚರಿತ ಎಂ., ಶೋಭಾ ರಾಣೆ, ಸಹೀಮಾ, ಜಯ ಕುಲಾಲ್, ಸುರೇಶ್ ಆಚಾರ್ಯ, ಸಂತೋಷ ದೇವಾಡಿಗ, ಸಂತೋಷ್ ಶೆಟ್ಟಿ, ವಿಶ್ವನಾಥ ಭಂಡಾರಿ, ಹೇಮಂತ್ ಆಚಾರ್ಯ, ಯತೀಶ್ ಕೋಟ್ಯಾನ್, ಫಿಲಿಪ್ ಮಸ್ಕರೇನಸ್ ಹಾಗೂ ಕಾರ್ಕಳ ತಾಲೂಕು ಪಂಚಾಯಕತ್ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಕಗೊಂಡಿದ್ದಾರೆ.
ಕಾರ್ಕಳ : ಕಾರ್ಕಳ ಜೋಡುರಸ್ತೆಯ ಬಿ.ಆರ್.ಕೆ ಉದ್ಯಮದ ಆಡಳಿತ ನಿರ್ದೇಶಕರಾಗಿದ್ದ ಬೋಳ ರಮಾನಾಥ ಕಾಮತ್ (82) ಅವರು ಇಂದು ಬೆಳಗ್ಗೆ ಅಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
ಉದ್ಯಮ ಕ್ಷೇತ್ರದ ಸಾಧನೆಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದಿದ್ದ ರಮಾನಾಥ ಕಾಮತ್ ಅವರು ಯಕ್ಷಗಾನ ಕಲಾ ಸಮಿತಿಯ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ರಮಾನಾಥ ಕಾಮತ್ ಅವರ ನಿಧನಕ್ಕೆ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಸಂತಾಪ :
ರಮಾನಾಥ ಕಾಮತ್ ಅವರು ಉದ್ಯಮ ಕ್ಷೇತ್ರದ ಜೊತೆಗೆ ಶ್ರೀ ವೆಂಕಟರಮಣ ಯಕ್ಷಗಾನ ಕಲಾ ಸಮಿತಿಯ ಸಂಚಾಲಕರಾಗಿ ಧಾರ್ಮಿಕ ಹಾಗೂ ಶೈಕ್ಷಣಿಕ ಸೇರಿದಂತೆ ಸಮಾಜಮುಖಿ ಚಟುವಟಿಕೆಗಳಿಗೆ ಅಪಾರ ಕೊಡುಗೆ ನೀಡಿದ್ದರು. ತಮ್ಮ ಸಂಸ್ಥೆಗಳಲ್ಲಿ ಸಾವಿರಾರು ಮಂದಿಗೆ ಉದ್ಯೋಗ ನೀಡುವ ಮೂಲಕ ಅವರ ಬದುಕಿಗೆ ಆಸರೆಯಾಗಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಭಗವಂತನು ಅವರ ಕುಟುಂಬ ಹಾಗೂ ಬಂಧು-ಮಿತ್ರರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.
ಕಾಪು ಅಭಿವೃದ್ಧಿ ಸಮಿತಿ (ರಿ.) ಇದರ ನೂತನ ಸಾಲಿನ ಅಧ್ಯಕ್ಷರಾಗಿ ಬೆಳಪು ಗ್ರಾಮ ಪಂಚಾಯತ್ನ ಅಧ್ಯಕ್ಷ, ಅಭಿವೃದ್ಧಿಯ ಹರಿಕಾರ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ, ಬೆಳಪು ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾಪು ಅಭಿವೃದ್ಧಿ ಸಮಿತಿಯ ಕಚೇರಿಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಬೆಳಪು ದೇವಿ ಪ್ರಸಾದ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.
ಬೆಳಕು ದೇವಿ ಪ್ರಸಾದ್ ಶೆಟ್ಟಿ ಬೆಳಪು ಗ್ರಾಮ ಪಂಚಾಯತಿನ ಅಧ್ಯಕ್ಷರಾಗಿ ಸದಸ್ಯರಾಗಿ ಸಾವಿರಾರು ಕೋಟಿ ರೂಪಾಯಿಯ ಯೋಜನೆಗಳನ್ನು ಬೆಳಪುಗೆ ತಂದು ಅಭಿವೃದ್ಧಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಉಡುಪಿ : ಮಾನ್ಯ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಇವರ ಮಾರ್ಗದರ್ಶನದಿಂದ ಜಿಲ್ಲಾ ಮುಖ್ಯ ಆಯುಕ್ತರಾಗಿ (D.C.C.) ನೂತನವಾಗಿ ಶ್ರೀ ಇಂದ್ರಾಳಿ ಜಯಕರ್ ಶೆಟ್ಟಿರವರ ಪದಗ್ರಹಣ ಕಾರ್ಯಕ್ರಮವು, ಆದಿತ್ಯವಾರದಂದು ಡಾ|ವಿ.ಎಸ್. ಆಚಾರ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಹಾಗೂ ಶಿಬಿರ ಕೇಂದ್ರ, ಪ್ರಗತಿನಗರ, ಮಣಿಪಾಲದಲ್ಲಿ ನಡೆಯಿತು.
ಈ ಪ್ರಯುಕ್ತ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಗಣಹೋಮ ನೆರವೇರಿಸುವುದರೊಂದಿಗೆ, ಜಿಲ್ಲಾ ಪದಾಧಿಕಾರಿಗಳ ಕಾರ್ಯಕಾರಿ ಸಭೆ ನಡೆಸಿ ಜಿಲ್ಲೆಯ ಪ್ರಗತಿಯು ಇನ್ನೂ ಮುಂದೆ ರಾಜ್ಯಕ್ಕೆ ಮಾದರಿಯಾಗುವ ಪಥದಲ್ಲಿ ನಾವೆಲ್ಲ ಒಂದಾಗಿ ಸಾಗೋಣ, ಸಂಸ್ಥೆ ಎಂದರೆ ಏರುಪೇರು, ಕುಂದು ಕೊರತೆ ಇದ್ದೇ ಇರುತ್ತದೆ. ಸಂಸ್ಥೆಯಲ್ಲಿ ಅದು ಸರಿ ಇಲ್ಲ, ಇದು ಸರಿ ಇಲ್ಲ, ಎನ್ನುವ ಮೊದಲು ನಾವೆಷ್ಟು ಸರಿ ಎಂದು ತಿಳಿದು, ನಾವು ಆತ್ಮ ಸಾಕ್ಷಿಯಿಂದ ಸೇವೆ ಮಾಡೋಣ. ಇದು ಒಂದು ಉನ್ನತ ಸಂಸ್ಥೆ ಎನ್ನುವ ಮುನ್ನುಡಿಯನ್ನು ಮಾನ್ಯ ಶ್ರೀ ಇಂದ್ರಾಳಿ ಜಯಕರ್ ಶೆಟ್ಟಿಯವರು ತಿಳಿಸಿದರು.
ಈ ಎಲ್ಲಾ ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಆಯುಕ್ತರಾದ ಪ್ರಭಾಕರ್ ಭಟ್, ಜಿಲ್ಲಾ ಸರ್ವ ಪದಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಸಾಕ್ಷಿಯಾದರು.
Maax News covers major news and events of Udupi district. This channel provides detailed reports on the political, social, economic, and cultural life of Udupi district.
Maax News, equipped with the most sophisticated studio in Udupi, assures people comprehensive news coverage.