ಉಡುಪಿ : ದಿವ್ಯಾಂಗ ರಕ್ಷಣಾ ಸಮಿತಿ ಕೊಡುವೂರು, ಪಶು ಚಿಕಿತ್ಸಾಲಯ ಮಲ್ಪೆ/ಜಿಲ್ಲಾ ಪಂಚಾಯತ್ ಉಡುಪಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಉಡುಪಿ ಯುವಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘ (ರಿ.) ಕೊಡವೂರು, ಲಯನ್ಸ್ & ಲಿಯೂ ಕ್ಲಬ್ ಪರ್ಕಳ ಹಾಗೂ ಗಣೇಶೋತ್ಸವ ಸಮಿತಿ ಕೊಡುವೂರು ಇವರ ಜಂಟಿ ಆಶ್ರಯದಲ್ಲಿ ಕೊಡವೂರಿನಲ್ಲಿ 6 ನೇ ಬಾರಿಗೆ ಸಾಕು / ಬೀದಿ ನಾಯಿಗಳಿಗೆ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರವು ಅ.06 ರಂದು ಸ್ಥಳ ಕೊಡವೂರು ಶಾಲಾ ವಠಾರದಲ್ಲಿ ಸಮಯ ಬೆಳಿಗ್ಗೆ 9.30 ರಿಂದ 11-30 ರ ವರೆಗೆ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 8660984279 ನ್ನು ಸಂಪರ್ಕಿಸಬಹುದು.
Kodavoor
ಉಡುಪಿ : ಕೊಡವೂರು ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ ‘ನೃತ್ಯಶಂಕರ’ ಸರಣಿ 61 ಪ್ರಸ್ತುತಿ ಪ್ರಜ್ಞಾ ಇವರ ಕಾರ್ಯಕ್ರಮ ಸೆಪ್ಟೆಂಬರ್ 2 ಸೋಮವಾರ ಸಂಜೆ 6-25 ರಿಂದ 7-25 ಗಂಟೆಯವರೆಗೆ ದೇವಳದ ವಸಂತ ಮಂಟಪದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಉಡುಪಿ : ಕೊಡವೂರು ಹಾಲು ಉತ್ಪಾದಕರ ಸಹಕಾರಿ ಸಂಘ ನಿ., ಕೊಡವೂರು ಇದರ ವಾರ್ಷಿಕ ಮಹಾಸಭೆ ಸಂಘದ ‘ಕ್ಷೀರಧಾಮ’ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಹಾಗೂ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರು, ಪ್ರಸ್ತುತ ನಿರ್ದೇಶಕ ರವಿರಾಜ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರಗಿತು.
ಒಕ್ಕೂಟ ಹಾಗೂ ಸಂಘದಲ್ಲಿ ಸಿಗುವ ಸವಲತ್ತಿನ ಬಗ್ಗೆ, ಸಂಘ ಬೆಳೆದು ಬಂದ ದಾರಿ, ಸಂಘದ ಸದಸ್ಯರಿಗೆ ಹಲವಾರು ಕೊಡುಗೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಸಂಘದ ಮಾಜಿ ಆಧ್ಯಕ್ಷ, ಪ್ರಸ್ತುತ ನಿರ್ದೇಶಕರ ಪ್ರಸಾದ್ ಕೆ.ಟಿ ಆಡಳಿತ ಮಂಡಳಿ ಸದಸ್ಯರನ್ನು, ಒಕ್ಕೂಟದ ವಿಸ್ತರಣಾಧಿಕಾರಿಯವರನ್ನು ಹಾಗೂ ಎಲ್ಲಾ ಸದಸ್ಯರನ್ನು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸಂತೋಷ ವಾರ್ಷಿಕ ವರದಿಯನ್ನು ವಾಚಿಸಿದರು.
ಸಂಘವು 2023-24ನೇ ಸಾಲಿನಲ್ಲಿ ನಿವ್ವಳ ಲಾಭ 4,25,664.05 ರೂಪಾಯಿ ಗಳಿಸಿದ್ದು ಉತ್ಪಾದಕರಿಗೆ ಬೋನಸ್ ರೂ. 2,13,263.00ನ್ನು ನೀಡಲಾಯಿತು. ಜತೆಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ 9 ಉತ್ಪಾದಕರಿಗೆ ಉತ್ತೇಜನ ಬಹುಮಾನದೊಂದಿಗೆ ಸಕ್ರಿಯ ಸದಸ್ಯರಿಗೆ ನಂದಿನಿ ಸಿಹಿ ತಿಂಡಿ ಹಾಗೂ ರಾಸುಗಳಿಗೆ ಖನಿಜ ಮಿಶ್ರಣ ನೀಡಲಾಯಿತು. ಸದಸ್ಯರಿಗೆ 15% ಡಿವಿಡೆಂಡ್ ನೀಡಲಾಯಿತು. ಸದಸ್ಯರ 8 ಮಂದಿ ಮಕ್ಕಳಿಗೆ ವಿದ್ಯಾರ್ಥಿ ಉತ್ತೇಜನ ಕೊಡುಗೆಯನ್ನು ನೀಡಲಾಯಿತು. ಸಂಘದ ವತಿಯಿಂದ ಹಾಲು ಉತ್ಪಾದಕರಿಗೆ 3 ತಿಂಗಳು ಹೆಚ್ಚುವರಿಯಾಗಿ ಲೀಟರಿಗೆ 1ರೂ. ನಂತೆ ರೂ.55,278.70 ನೀಡಿರುತ್ತದೆ.
ಸಂಘದ ಮುಖಾಂತರ ಒಕ್ಕೂಟದ ರೈತರ ಕಲ್ಯಾಣ ಟ್ರಸ್ಟ್ ನ ವತಿಯಿಂದ ಸಕ್ರಿಯ ಸದಸ್ಯರಿಗೆ ಅನಾರೋಗ್ಯಕ್ಕೆ ತುತ್ತಾದಾಗ ಐವರಿಗೆ ಹಾಗೂ ರಾಸು ಸಾವನ್ನಪ್ಪಿದಾಗ ಒಬ್ಬರಿಗೆ ಒಟ್ಟು ರೂ.1,61,5000.00 ಹಾಗೂ ಸಂಘದ ಮುಖಾಂತರ ಸಂಘಕ್ಕೆ ಹಾಲು ನೀಡುವ ಸದಸ್ಯರಿಗೆ ಒಕ್ಕೂಟದ ಯೋಜನೆಯಾದ ಮಿನಿ ಡೇರಿ ಯೋಜನೆ-ಒಬ್ಬರಿಗೆ, ಹೆಣ್ಣುಕರು ಸಾಕಾಣಿಕೆ ಯೋಜನೆ-22 ಮಂದಿಗೆ, ರಬ್ಬರ್ ಮ್ಯಾಟ್-ಒಬ್ಬರಿಗೆ, ದಿನವಾಹಿ 100 ಲೀಟರ್ ಕ್ಕಿಂತ ಜಾಸ್ತಿ ಹಾಲು ನೀಡಿದ ಒಬ್ಬರಿಗೆ ಹಾಗೂ 163 ರಾಸುಗಳಿಗೆ ಜಾನುವಾರು ವಿಮೆಯ ಮೂಲಕ ಒಟ್ಟು ರೂ.2,13,619.18 ಒಕ್ಕೂಟವು ನೀಡಿರುತ್ತದೆ. ಜಾನುವಾರು ವಿಮೆಯ ಮೂಲಕ ೫ ಮಂದಿ ಸಕ್ರಿಯ ಸದಸ್ಯರ ರಾಸು ಸಾವನ್ನಪ್ಪಿದಾಗ ಒಟ್ಟು ರೂ.1,65,000.00 ನೀಡುವಲ್ಲಿ ಸಂಘ ಹಾಗೂ ಒಕ್ಕೂಟ ಸಹಕರಿಸಿರುವ ಬಗ್ಗೆ ಮಾಹಿತಿ ಸದಸ್ಯರಿಗೆ ನೀಡಲಾಯಿತು.
ಸಂಘದ ಮುಖಾಂತರ ಸಂಘಕ್ಕೆ ಹಾಲು ನೀಡುವ 13 ಮಂದಿ ಸದಸ್ಯರಿಗೆ ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಮೂಲಕ 3% ಬಡ್ಡಿಯ ಒಟ್ಟು 12,55,000 ರೂಪಾಯಿಯ ಸಾಲ ಹಾಗೂ ರಾಷ್ಟ್ರೀಕತ ಬ್ಯಾಂಕ್ ನ ಕೆಸಿಸಿ ಸಾಲ ಒಬ್ಬರಿಗೆ 70,000.00 ರೂಪಾಯಿ ಮಾಡಿಸುವಲ್ಲಿ ಸಂಘವು ಸಹಕರಿಸಿರುವ ಬಗ್ಗೆ ಮಾಹಿತಿ ನೀಡಲಾಯಿತು. ಒಕ್ಕೂಟದ ವಿಸ್ತರಣಾಧಿಕಾರಿ ವಿನಯ್ ಕುಮಾರ್ ಬಿ.ಎಸ್ ಒಕ್ಕೂಟದಿಂದ ಸದಸ್ಯರಿಗೆ ಸಿಗುವ ಅನುದಾನದ ಬಗ್ಗೆ ತಿಳಿಸಿದರು.
ಸಂಘದ ನಿರ್ದೇಶಕರಾದ ಬಿ. ಗೋಪಾಲ ಶೆಟ್ಟಿ, ಅಣ್ಣಪ್ಪ ಶೆಟ್ಟಿ, ಕೃಷ್ಣ ಪ್ರಸಾದ್, ಗಣೇಶ ಪೂಜಾರಿ, ರಾಜ ಶೇರಿಗಾರ, ಸದಾನಂದ ಶೇರಿಗಾರ, ಸುವರ್ಣ ಹೊಳ್ಳ, ಸರಸ್ವತಿ, ಲೀಲಾ ಎಂ., ಹಿಲ್ಡಾ ಕುಂದರ್ ಸಿಬ್ಬಂದಿಗಳಾದ ಸುಮಿತ್ರ, ಸುಧಾ, ಸುಜಯ ಉಪಸ್ಥಿತರಿದ್ದರು. ಸಂಘದ ಅಂತರಿಕ ಲೆಕ್ಕ ಪರಿಶೋಧಕ ರಾಮ ಶೇರಿಗಾರ ನಿರೂಪಿಸಿದರು.
ಉಡುಪಿ : ಛಾಯಾಚಿತ್ರ ಕಲಾವಿದ ಮುರಳೀಧರ್ ಭಟ್ ಕೊಡವೂರು ಇವರಿಗೆ ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ “ವಿಪ್ರ ಛಾಯಾ ಸಾಧಕ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಕಳೆದ ಹಲವಾರು ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ವಲಯ ಬ್ರಾಹ್ಮಣ ಮಹಾಸಭಾದ ಎಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಛಾಯಾಗ್ರಹಣ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಶ್ರೀನಿವಾಸ ತೋಡತ್ತಿಲ್ಲಾಯ, ಸುಬ್ರಹ್ಮಣ್ಯ ಉಪಾಧ್ಯಾಯ, ವಿಪ್ರ ಸೇನಾನಿ ಗಣೇಶ್ ಅಡಿಗ, ದಿನಕರ ರಾವ್ ಸಂಘದ ಅಧ್ಯಕ್ಷ ಸುರೇಂದ್ರ ಉಪಾಧ್ಯಾಯ, ಗೌರವಾಧ್ಯಕ್ಷರುಗಳಾದ ಗೋವಿಂದ ಐತಾಳ್, ಗುರುರಾಜ್ ರಾವ್, ಕಾರ್ಯದರ್ಶಿ ಪ್ರವೀಣ್ ಬಲ್ಲಾಳ್, ಕೋಶಾಧಿಕಾರಿ ಚಂದ್ರಶೇಖರ್ ರಾವ್ ಜೊತೆ ಕೋಶಾಧಿಕಾರಿ ಶ್ರೀಧರ ಶರ್ಮ ಹಾಗೂ ಕಲ್ಪನಾ ಭಟ್ ಉಪಸ್ಥಿತರಿದ್ದರು.
ಉಡುಪಿ : ಕೊಡವೂರು ನಿವಾಸಿಯಾದ ಪೂಜಾ ಗೋಪಾಲ್ ಪೂಜಾರಿಯವರು ಡಿಪಾರ್ಟ್ಮೆಂಟ್ ಆಫ್ ಫಾರ್ಮಸಿ ಪ್ರಾಕ್ಟೀಸ್, ಮಣಿಪಾಲ್ ಕಾಲೇಜ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್, ಮಾಹೆ ಮಾಣಿಪಾಲದ ಸಹ ಪ್ರಾಧ್ಯಾಪಕರಾದ ಡಾ. ಗಿರೀಶ್ ತುಂಗ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ “ಡೆವಲಪ್ಮೆಂಟ್ ಆಫ್ ಸ್ಟ್ರಾಟೆಜಿ ಟು ಇಂಪ್ರೂವ್ ದಿ ರೇಟ್ ಆಫ್ ಮೆಟಾಬಾಲಿಕ್ ಮಾನಿಟರಿಂಗ್ ಪೇಶೆಂಟ್ಸ್ ಆನ್ ಆಂಟಿಸೈಕೋಟಿಕ್ ಮೆಡಿಕೇಷನ್ಸ್” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಾಹೆ ಮಣಿಪಾಲ ವಿಶ್ವವಿದ್ಯಾನಿಲಯವು ಪಿಎಚ್ಡಿ ಪದವಿ ಪ್ರಧಾನ ಮಾಡಿದೆ.
ಪೂಜಾ ಗೋಪಾಲ್ ಪೂಜಾರಿ ಲಲಿತಾ ಹಾಗು ಗೋಪಾಲ್ ಪೂಜಾರಿ ಇವರ ಪುತ್ರಿ.
ಉಡುಪಿ : ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಹಲವೆಡೆ ಮನೆಗಳು ಜಲಾವೃತಗೊಂಡಿದೆ. ಉಡುಪಿಯ ಕರಂಬಳ್ಳಿ, ಮೂಡುನಿಡಂಬೂರು, ಕೊಡವೂರು ಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಕರಂಬಳ್ಳಿ ಭಾಗದಲ್ಲಿ, ಬನ್ನಂಜೆ ಮೂಡನಿಡಂಬೂರು ಕೆಲವು ಮನೆಗಳು ಜಲಾವೃತಗೊಂಡಿವೆ. ಇಂದ್ರಾಣಿ ನದಿ ಹರಿಯುವ ಪಾತ್ರದಲ್ಲಿ ಗುಂಡಿಭಾಗದಲ್ಲಿ ತೋಟ, ಗದ್ದೆಗಳು ಜಲಾವೃತಗೊಂಡಿದೆ.
ಕರಂಬಳ್ಳಿ ವೆಂಕಟರಮಣ ಲೇಔಟ್ನ ಹಲವು ಮನೆಗಳು ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ. ಭಾರಿ ಮಳೆಯಿಂದ ನಗರದಲ್ಲಿನ ಮಳೆನೀರು ತೋಡು ತುಂಬಿ ಹರಿಯುತ್ತಿದ್ದು ಇದರಿಂದ ಈ ಪರಿಸರದ ಹತ್ತಾರು ಮನೆಗಳು ಜಲಾವೃತಗೊಳ್ಳುವ ಆತಂಕ ಎದುರಾಗಿದೆ. ಹಲವೆಡೆ ಮಕ್ಕಳು ಶಾಲೆಗೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಕೂಡ ಜಲಾವೃತಗೊಂಡಿರುವುದರಿಂದ ವಾಹನ ಸಂಚಾರಕ್ಕೂ ಅಡ್ಡಿಯಾಗುತ್ತಿದೆ.