ಉಡುಪಿ : ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ಪೂರ್ಣಪ್ರಜ್ಞ ಕಾಲೇಜು, (ಸ್ವಾಯತ್ತ) ಉಡುಪಿ, ವಿಶೇಷವಾಗಿ ನಿರ್ಮಿಸಲಾದ ಶ್ರೀ ವಿಬುಧೇಶತೀರ್ಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣದಲ್ಲಿ 2024-25ನೇ ಸಾಲಿನ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಪಂದ್ಯಾಕೂಟವನ್ನು ಎಪ್ರಿಲ್ 9-12ರ ವರೆಗೆ ಆಯೋಜಿಸಲಾಗಿದೆ.
ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಉದ್ದೇಶದೊಂದಿಗೆ ವಿವಿಧ ಶಾಖೆ-ವಿಷಯಗಳಲ್ಲಿ ವಿದ್ಯೆಯನ್ನು ನೀಡಲೋಸುಗ ಪೂರ್ಣಪ್ರಜ್ಞ ಕಾಲೇಜು ಆರು ದಶಕಗಳ ಹಿಂದೆ 1960ರಲ್ಲಿ ಸ್ಥಾಪನೆಯಾಗಿದ್ದು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಆಡಳಿತಕ್ಕೊಳಪಟ್ಟಿದೆ.
2022ರಲ್ಲಿ ನ್ಯಾಕ್ನಿಂದ ಮರುಮೌಲ್ಯಮಾಪನಕ್ಕೆ ಒಳಪಟ್ಟು ಗುಣಮಟ್ಟದ ಶಿಕ್ಷಣಕ್ಕಾಗಿ ‘+’ಶ್ರೇಯಾಂಕ ಪಡೆದಿರುವ ಸಂಸ್ಥೆಯು ಉಡುಪಿ ಜಿಲ್ಲೆಯಲ್ಲಿಯೇ ಮೊದಲೆಂಬಂತೆ ಅಖಿಲಭಾರತ ಮಟ್ಟದ ಅನೇಕ ಪಂದ್ಯಾಕೂಟಗಳನ್ನು ಏರ್ಪಡಿಸಿ ಯಶಸ್ವಿಯಾಗಿದೆ. 2018ರ ಅಖಿಲ ಭಾರತ ಅಂತರ್ ವಿ.ವಿ. ನೆಟ್ಬಾಲ್ ಚಾಂಪಿಯನ್ಶಿಪ್, 2019ರ ಅಖಿಲ ಭಾರತ ಅಂತರ್ ವಿ.ವಿ ಕಬಡ್ಡಿ ಪಂದ್ಯಾಟ, 2023ರ ಅಖಿಲ ಭಾರತ ಅಂತರ್ ವಿ.ವಿ. ಕಬಡ್ಡಿ ಪಂದ್ಯಾಕೂಟ, 2024ರ ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಖೋ-ಖೋ ಪಂದ್ಯಾಕೂಟ -2025 ಆಯೋಜಿಸಿದ್ದು ಇದೇ ಎಪ್ರೀಲ್ 9 ರಿಂದ 12ನೇ ತಾರೀಖಿನ ತನಕ ಪ್ರತಿಷ್ಠಿತ ಪಂದ್ಯಾಟ ನಡೆಯಲಿದೆ.