ಮಂಗಳೂರು : ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಗರಿಗೆದರಿದೆ. ಈ ಶುಭ ಸಂದರ್ಭದಲ್ಲಿ ದ.ಕ.ಜಿಲ್ಲೆಯ ದೇವತೆಯರನ್ನೂ ತ್ರಿವರ್ಣ ಧ್ವಜದ ಅಲಂಕಾರದಲ್ಲಿ ಸಿಂಗರಿಸಿ ದೇಶಪ್ರೇಮ ಮೆರೆಯಲಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಹಾಗೂ ಮಂಗಳೂರಿನ ಶ್ರೀ ಮಂಗಳಾದೇವಿಯರು ತ್ರಿವರ್ಣ ಧ್ವಜದಲಂಕಾರದಲ್ಲಿ ಕಂಗೊಳಿಸಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ತ್ರಿವರ್ಣ ಧ್ವಜದ ಸೀರೆಯನ್ನು ಉಡಿಸಲಾಗಿದ್ದು, ತ್ರಿವರ್ಣ ಧ್ವಜದ ಹೂಮಾಲೆಯ ಅಲಂಕರಿಸಿ ಸಿಂಗರಿಸಲಾಗಿದೆ.
ಅದೇ ರೀತಿ ಮಂಗಳೂರಿನ ಅಧಿದೇವತೆ ಶ್ರೀ ಮಂಗಳಾದೇವಿಗೆ ತಿರಂಗದ ಸೀರೆಯನ್ನೇ ಉಡಿಸಲಾಗಿದ್ದು, ತ್ರಿವರ್ಣ ಧ್ವಜದ ಹೂಗಳಿಂದಲೇ ಅಲಂಕಾರ ಮಾಡಲಾಗಿದೆ. ಒಟ್ಟಿನಲ್ಲಿ ದ.ಕ.ಜಿಲ್ಲೆಯ ದೇವತೆಗಳಿಗೆ ದೇಶಪ್ರೇಮ ಬೀರುವ ಅಲಂಕಾರ ಮಾಡಿದ್ದು, ಭಕ್ತರಲ್ಲೂ ದೇಶಭಕ್ತಿ ಜಾಗೃತಿ ಮೂಡಿಸುವಂತಾಗಿದೆ.

