ಕಾರ್ಕಳ : ಕಾರ್ಕಳ ಪೊಲೀಸ್ ಉಪ ವಿಭಾಗಕ್ಕೆ ನೂತನ ಎಎಸ್ಪಿಯಾಗಿ ಐಪಿಎಸ್ ಅಧಿಕಾರಿ ಡಾ. ಹರ್ಷ ಪ್ರಿಯಂವದ ಅವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ.

ಜಾರ್ಖಂಡ್ ಮೂಲದ ಹರ್ಷ ಪ್ರಿಯಂವದ ಅವರು 2020ರ ಯುಪಿಎಸ್ಸಿ ಪರೀಕ್ಷೆಯಲ್ಲಿ 165ನೇ ರ್ಯಾಂಕ್ ಪಡೆದಿದ್ದರು. ಇವರು ಎಂಬಿಬಿಎಸ್ ಪದವೀಧರೆಯೂ ಹೌದು.
ಪ್ರಸ್ತುತ ಕಾರ್ಕಳದಲ್ಲಿ ಡಿವೈಎಸ್ಪಿಯಾಗಿದ್ದ ಅರವಿಂದ ಕಲಗುಜ್ಜಿ ಅವರನ್ನು ವರ್ಗಾವಣೆಗೊಳಿಸಲಾಗಿದೆ.