ಉಡುಪಿ : ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ತಾಲೂಕು ಮಹಿಳಾ ಘಟಕದ ವತಿಯಿಂದ ಮಕ್ಕಳ ದಿನಾಚರಣೆಯನ್ನು ಉಡುಪಿಯ ವಿಶೇಷ ಅಗತ್ಯವುಳ್ಳ ಮಕ್ಕಳ ತರಭೇತಿ ಕೇಂದ್ರದ ಮಕ್ಕಳೊಂದಿಗೆ ಆಚರಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಹೆಲೆನ್ ಸೋನ್ಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಯಾದ ಶ್ರೀಮತಿ ಎಲ್ಲಮ್ಮ ಬಿಇಒ ಮಾತನಾಡಿ ಮಕ್ಕಳಿಗಾಗಿ ನನ್ನಿಂದ ಸರ್ಕಾರದ ವ್ಯಾಪ್ತಿಯಲ್ಲಿ ಯಾವುದೇ ಸಹಾಯ ಮಾಡುವುದಾಗಿ ಹೇಳಿದರು. ಶ್ರೀಯುತ ಫಯಾಜ್ ಇವರು ಜಾಗವನ್ನು ಕೊಟ್ಟಿರುವುದಲ್ಲದೆ ವ್ಯವಸ್ಥಿತವಾದ ಕಟ್ಟಡವನ್ನು ಕೊಟ್ಟು ಸದಾ ನೆರವನ್ನು ನೀಡುತ್ತಾ ಬಂದಿರುತ್ತಾರೆ. ಹೆಡ್ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಯುತ ನಾಗರಾಜ್ ಅವರು ಮಕ್ಕಳಿಗಾಗಿ ತಮ್ಮ ಆದಾಯದಲ್ಲಿ ನೆರವನ್ನು ನೀಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಡಾಕ್ಟರ್ ದೀಕ್ಷಿತಾ, ಶ್ರೀಮತಿ ಗೀತಾ ಹೆಗಡೆ, ಶ್ರೀಮತಿ ಶಾಲಿನಿ, ಫಯಾಜ್ ಸರ್, ನಾಗರಾಜ್ ಸರ್ ಹಾಗು ಶ್ರೀಮತಿ ಎಲ್ಲಮ್ಮ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕದ ಅಧ್ಯಕ್ಷೆ ಹೆಲೆನ್ ಸೋನ್ಸ್ ರಾಜ್ಯಾಧ್ಯಕ್ಷರಾದ ಟಿ, ಎ ನಾರಾಯಣ ಗೌಡರ ಕಾರ್ಯ ವೈಖರಿಯ ಬಗ್ಗೆ ಮಾತನಾಡಿ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿಯಲ್ಲಿ ಬಲವಾದ ಸಂಘಟನೆಯ ಅಗತ್ಯವಿದೆ ಎಲ್ಲರೂ ಕೈ ಜೋಡಿಸಿ ಸಂಘಟನೆ ಬಲ ಗೊಳಿಸಬೇಕಾಗಿದೆ ಎಂದು ಹೇಳಿದರು.
ಮಕ್ಕಳಿಗಾಗಿ ಗಾಯನ ಸ್ಪರ್ಧೆ, ಚಿತ್ರ ಬಿಡಿಸುವ ಸ್ಪರ್ಧೆ, ನರ್ತ್ಯ ಸ್ಪರ್ಧೆ, ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ರೆಡ್ ಕ್ರಾಸ್ ಸಂಸ್ಥೆಯಿಂದ ಮಕ್ಕಳಿಗೆ ಬ್ಯಾಗ್ ವಿತರಿಸಲಾಯಿತು. ಪಾನೀಯ ಸಿಹಿ ತಿಂಡಿ, ಊಟದ ಡಬ್ಬಿ, ಚಿತ್ರಕಲಾ ಪುಸ್ತಕ, ಬಣ್ಣದ ಪೆನ್ಸಿಲ್ಗಳನ್ನು ವಿತರಿಸಲಾಯಿತು. ಎಲ್ಲರಿಗೂ ಫಲಹಾರ ನೀಡಲಾಯಿತು.
ಕರವೇ ಪದಾಧಿಕಾರಿಗಳಾದ ಸುನೀತಾ, ಪವಿತ್ರಾ ಅನುರಾಧ, ವಿಶಾಲಿ ಮತ್ತಿತರರು ಸದಸ್ಯರು ಉಪಸ್ಥಿತರಿದ್ದರು.
ಕರವೇ ಉಡುಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಮುಕ್ತಾ ಸಾವಂತ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ಪವಿತ್ರಾ ಶೆಟ್ಟಿ ವಂದಿಸಿದರು.