Sushanth a Top Graduate from PoornaPrajna Evening College, working as a Vegetable Trader in A.P.M.C Market in Udupi also a RSS activist & Spokesperson from BJP OBC MORCHA UDUPI CITY has done a remarkable history under the guidance of Puthige Paryaya Sri Sri Sugunendra Teertha Swamiji of global recognised famous temple Udupi Krishna Matha on 22 December 2024 by breaking the record done by Pathanjali Gurukul Students who has written the entire verses in 8.00 hours. This Tremendous job by him was done by seeking the Blessing From Swamiji and making thousands of people to give him a applause with most of live coverage from the Media for World Record. Now lets hope for the appreciation either all over people from the society and wishing him to get the appreciation from the FIrst Citizen of Bharath Honourable President and also from Honourable Prime Minister of Bharath Shri Narendra DamodarDas Modi to recognise the tremendous work done by his own party small Karyakarthas and will see if he gets promoted to higher level and opportunities to work for the party welfare.\
Inspiration
ಸ್ಪೇಸ್ ಸ್ಟೇಷನ್ನಿಂದ ಭೂಮಿಗೆ ಬಂದ ವಿಜ್ಞಾನಿಗಳು – ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಭ್ರಮಾಚರಣೆ
ಉಡುಪಿ : ಸ್ಪೇಸ್ ಸ್ಟೇಷನ್ನಲ್ಲಿ ನಿಗದಿಯಾದ ಎಂಟು ದಿನದ ಬದಲು 286 ದಿನ ಬಾಕಿಯಾಗಿ ಹರಸಾಹಸ ಪಟ್ಟು ಭೂಮಿ ಮೇಲೆ ವಾಪಸಾದ ಹಿರಿಯ ವಿಜ್ಞಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಉಡುಪಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ನಗರದ ನೇತ್ರ ಜ್ಯೋತಿ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಸಂಭ್ರಮಾಚರಣೆಯನ್ನು ಮಾಡಿತು. ನೂರಾರು ವಿದ್ಯಾರ್ಥಿನಿಯರು ಸುನಿತಾ ವಿಲಿಯಮ್ಸ್ ಅವರ ಭಾವಚಿತ್ರ ಹಿಡಿದು ಶುಭ ಕೋರಿದರು. ಕಾಲೇಜಿನ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಈ ಸಾಧನೆಯನ್ನು ಸಂಭ್ರಮಿಸಲಾಯಿತು.
ಹಿರಿಯ ಭೌತಶಾಸ್ತ್ರಜ್ಞ, ಪ್ರೊಫೆಸರ್ ಎ.ಪಿ ಭಟ್, ಈ ಸಂದರ್ಭ ಗಗನಯಾತ್ರೆಯ ಸಾಹಸ ಮತ್ತು ತಾಂತ್ರಿಕ ಸಮಸ್ಯೆಯಿಂದ ವಿಜ್ಞಾನಿಗಳಿಗಾದ ತೊಂದರೆಗಳ ಬಗ್ಗೆ ಮತ್ತು ಅಮೆರಿಕ ನಾಸಾ ಸಂಸ್ಥೆ ಇಬ್ಬರೂ ವಿಜ್ಞಾನಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತಂದ ಬಗ್ಗೆ ಮಾಹಿತಿ ಉಪನ್ಯಾಸ ನೀಡಿದರು.

ಉಡುಪಿ : ನಿಟ್ಟೂರಿನಲ್ಲಿ ತಿಂಗಳ ಹಿಂದೆ ಮಲಮೂತ್ರಾದಿ ನಡುವೆಯೇ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ ವೃದ್ಧ ತಾಯಿ ಕಮಲ ಶೆಟ್ಟಿ ಹಾಗೂ ಮಾನಸಿಕ ಅಸ್ವಸ್ಥ ಮಗ ಅನಿಲ್ ಶೆಟ್ಟಿಯವರನ್ನು ವಿಶು ಶೆಟ್ಟಿ ಅಂಬಲಪಾಡಿ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇದೀಗ ವೃದ್ದ ತಾಯಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದು ಸಂಬಂಧಿಕರು ಯಾರೂ ಸ್ಪಂದಿಸದೇ ಇರುವುದರಿಂದ ವಿಶು ಶೆಟ್ಟಿಯವರ ವಿನಂತಿಗೆ ಬೈಲೂರಿನ ಹೊಸಬೆಳಕು ಆಶ್ರಮದ ಮುಖ್ಯಸ್ಥೆ ತನುಲಾರವರು ಆಶ್ರಯ ನೀಡಲು ಸಮ್ಮತಿಸಿದ್ದು ವಿಶು ಶೆಟ್ಟಿ ಆಂಬುಲೆನ್ಸ್ ಮುಖಾಂತರ ವೃದ್ದೆಯನ್ನು ಕಾರ್ಕಳದ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.

ಮಗ ಅನಿಲ್ ಶೆಟ್ಟಿ ಕೊಳಲಗಿರಿ ಸ್ವರ್ಗ ಆಶ್ರಮದಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಬಹಳಷ್ಟು ಸುಧಾರಿಸಿದ್ದಾರೆ. ಇನ್ನಾದರೂ ಸಂಬಂಧಿಕರು ಇದ್ದರೆ ಹೊಸ ಬೆಳಕು ಹಾಗೂ ಸ್ವರ್ಗ ಆಶ್ರಮ ಸಂಪರ್ಕಿಸಬೇಕೆಂದು ವಿಶು ಶೆಟ್ಟಿ ಅವರು ವಿನಂತಿಸಿದ್ದಾರೆ.
ತಮ್ಮ “ಅಭಿಮಾನಿ” ಸುನೀತಾ ವಿಲಿಯಮ್ಸ್ಗೆ ಶುಭವಾಗಲಿ ಎಂದು ಹಾರೈಸಿದ ಪರ್ಯಾಯ ಶ್ರೀಗಳು
ಉಡುಪಿ : ಸುನೀತಾ ವಿಲಿಯಮ್ಸ್ ಅವರು ಬರೋಬ್ಬರಿ 9 ತಿಂಗಳ ಬಾಹ್ಯಾಕಾಶ ವಾಸ ಮುಗಿಸಿ ಭೂಮಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಕೋಟಿ ಕೋಟಿ ಜನರ ಪ್ರಾರ್ಥನೆ ಹಾಗೂ ವಿಜ್ಞಾನಿಗಳ ಶ್ರಮದ ಫಲವಾಗಿ ಭೂಮಿಗೆ ವಾಪಸ್ಸಾಗುತ್ತಿದ್ದಾರೆ. ಭಾರತೀಯರು ಮಾತ್ರವಲ್ಲದೆ ಇಡೀ ವಿಶ್ವವೇ ಈ ಕ್ಷಣಕ್ಕಾಗಿ ಕಾದು ಕುಳಿತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉಡುಪಿಯ ಪರ್ಯಾಯ ಪುತ್ತಿಗೆ ಶ್ರೀಗಳು “ನಮ್ಮ ಅಭಿಮಾನಿಯೂ ಆಗಿರುವ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಭೂಮಿಗೆ ಬರುತ್ತಿದ್ದಾರೆ. ಇದು ಅತ್ಯಂತ ಖುಷಿ ಕೊಟ್ಟಿದೆ. ಅವರ ಈ ಯಾತ್ರೆ ನಿರ್ವಿಘ್ನವಾಗಿ ನಡೆಯಲಿ. ಅವರ ಸಾಧನೆ ಚಿರಸ್ಥಾಯಿಯಾಗಬೇಕು. ಅವರಿಗಾಗಿ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ” ಎಂದು ಹೇಳಿದ್ದಾರೆ.
ಉಡುಪಿ : ಕೈವಾರ ತಾತಯ್ಯ ತನ್ನ ಚಿಂತನೆಗಳ ಮೂಲಕ ಜನರಲ್ಲಿ ಬದಲಾವಣೆ ತರಲು ಶ್ರಮಿಸಿದವರು. ಅವರ ತತ್ವಾದರ್ಶ ಹಾಗೂ ಮೌಲ್ಯಗಳು ಜೀವನಕ್ಕೆ ಮಾದರಿಯಾಗಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಯೋಗಿ ನಾರೇಯಣರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಮಾತನಾಡಿದರು.
ಕೈವಾರ ತಾತಯ್ಯ ಕಾಯಕದಿಂದಲೇ ಬದುಕು ಕಟ್ಟಿಕೊಂಡು, ಭಾಷೆ ಹಾಗೂ ಬರಹಗಳ ಮೂಲಕ ಸಮಾಜದ ಸಮಸ್ಯೆಗಳನ್ನು ಗುರುತಿಸಿ, ಅನ್ಯರ ಏಳಿಗೆಗಾಗಿ ಶ್ರಮಿಸಿದವರು. ಆಧ್ಯಾತ್ಮ ಚಿಂತನ ಮಂಥನ ನಡೆಸುವುದರಲ್ಲಿ ಕೈವಾರ ತಾತಯ್ಯ ಚಾಣಾಕ್ಷತೆ ಹೊಂದಿದ್ದರು ಎಂದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಸರ್ಕಾರ ಸಂತರು, ವಚನಕಾರರು, ಶರಣರು ಮೊದಲಾದ ಸಾಧಕರ ಜಯಂತಿ ಆಚರಿಸಿ ಅವರ ಬದುಕಿನ ಬಗ್ಗೆ ಜನರಿಗೆ ಜ್ಞಾನ ಮೂಡಿಸುವ ಮಹತ್ವದ ಕೆಲಸ ಮಾಡುತ್ತಿದೆ. ಪ್ರಸ್ತುತ ಸಮಾಜದಲ್ಲಿ ನ್ಯಾಯಾಂಗ, ಶಾಸಕಾಂಗ ವ್ಯವಸ್ಥೆ ಇದ್ದರೂ ಸಮಾನತೆ ಬಂದಿಲ್ಲ. ಸಮಾಜಕ್ಕೆ ಕೈವಾರ ತಾತಯ್ಯ ನೀಡಿದ ಕೊಡುಗೆಗಳು ಎಲ್ಲರಿಗೆ ಪ್ರೇರಣೆಯಾಗಲಿ ಎಂದರು.
ನಿವೃತ್ತ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ಶ್ರೀಕಾಂತ ಸಿದ್ದಾಪುರ ವಿಶೇಷ ಉಪನ್ಯಾಸ ನೀಡಿ, ಕೈವಾರ ತಾತಯ್ಯ ವೃತ್ತಿ ಜೀವನ ತೊರೆದು ಆಧ್ಯಾತ್ಮಿಕ ಹಾದಿಯನ್ನು ಹಿಡಿದರು. ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಬೇಕಾದರೆ ಮನಸ್ಸನ್ನು ನಿಯಂತ್ರಣದಲ್ಲಿಡಬೇಕು ಹಾಗೂ ಜೀವನದಲ್ಲಿ ಆತ್ಮಸ್ಥೈರ್ಯ ತಂದುಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ನಗರಸಭೆ ಪೌರಾಯುಕ್ತ ಉದಯ್ ಕುಮಾರ್ ಶೆಟ್ಟಿ ಮೊದಲಾದವರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಇಲಾಖೆಯ ವರ್ಷಾ ನಿರೂಪಿಸಿ, ವಂದಿಸಿದರು.
ಉಡುಪಿ : ಮಾಜಿ ಗೃಹ ಸಚಿವ, ನವ ಉಡುಪಿಯ ನಿರ್ಮಾತೃ ಕೀರ್ತಿಶೇಷ ಡಾ. ವಿ.ಎಸ್. ಆಚಾರ್ಯ ಅವರ ಪುಣ್ಯ ಸಂಸ್ಮರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿಗಳ ಸಂಕೀರ್ಣ ಮಣಿಪಾಲದ ರಜತಾದ್ರಿಯ ಮುಂಭಾಗದಲ್ಲಿರುವ ಡಾ.ವಿ.ಎಸ್. ಆಚಾರ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆಗೈದು ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್, ಉಡುಪಿ ನಗರಸಭೆ ಮಾಜಿ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಪ್ ಡಿಸೋಜ, ಪ್ರಮುಖರಾದ ನಳಿನಿ ಪ್ರದೀಪ್ ರಾವ್, ವೀಣಾ ಎಸ್. ಶೆಟ್ಟಿ, ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ. ಶೆಟ್ಟಿ, ಅಶೋಕ್ ನಾಯ್ಕ್, ಕಲ್ಪನಾ ಸುಧಾಮ, ಡೇನಿಸ್ ಪೆರಂಪಳ್ಳಿ, ಶ್ರಿವತ್ಸ, ಮಂಜುಳಾ ಪ್ರಸಾದ್, ಆನಂದ್ ಸುವರ್ಣ, ಕಿಶೋರ್ ಕರಂಬಳ್ಳಿ, ಸಂತೋಷ್ ಆಚಾರ್ಯ, ನಿತಿನ್ ಪೈ, ಸಂತೋಷ್ ಪ್ರಭು, ಧನುಷ್ ಶೆಟ್ಟಿ, ಭೂಷಣ್ ಮುಂತಾದವರು ಉಪಸ್ಥಿತರಿದ್ದರು.

ಅಟಲ್ ಬಿಹಾರಿ ವಾಜಪೇಯಿ ಅವರ ಕೆಲ ಕ್ಷಣಗಳ ಸಂದರ್ಶನವೇ ನನಗೆ ಪ್ರೇರಣೆಯಾಯಿತು – ಕ್ಯಾಪ್ಟನ್ ಬ್ರಿಜೇಶ್ ಚೌಟ
ಮಂಗಳೂರು : ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮ ದಿನಾಚರಣೆ ದ.ಕ. ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನಡೆಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ವಾಜಪೇಯಿ ಅವರ ಜೀವನ ಸಂಸ್ಕರಣೆಯನ್ನು ನೆನೆಯುತ್ತಾ ಅಟಲ್ ಜಿ ಅವರು ಪ್ರಧಾನಿ ಆಗಿದ್ದ ಸಂಧರ್ಭದಲ್ಲಿ ತಾನು ಎನ್.ಸಿ.ಸಿ. ಯ ಕೆಡಿಟ್ ಆಗಿದ್ದಾಗ ಗಣರಾಜ್ಯೋತ್ಸವ ಪರೇಡ್ನಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತ್ತು. ಆಗ ಎರಡು ಮೂರು ನಿಮಿಷಗಳ ಕಾಲ ಅವರನ್ನು ಹತ್ತಿರದಿಂದ ಕಾಣುವ ಸುಸಂಧಂರ್ಭ ಒದಗಿಬಂದಿತ್ತು. ಆಗಲೇ ಅವರ ಆ ವರ್ಚಸ್ಸು ನನ್ನ ಮೇಲೆ ಅಗಾಧ ಪ್ರಭಾವವನ್ನು ಬೀರಿತ್ತು. ದೇಶಕ್ಕಾಗಿ ನಾನು ಸೇವೆ ಮಾಡಬೇಕೆಂಬ ಹಂಬಲ ಮೂಡಿತ್ತು ಎಂದು ಆ ಕ್ಷಣಗಳನ್ನು ಕಣ್ತುಂಬಿಕೊಂಡು ನೆನೆದರು.
ಹಾಗೇಯೇ ಬಿಜೆಪಿಯ ಹಿರಿಯರಾದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮೋನಪ್ಪ ಭಂಡಾರಿಯವರು ಮಾತನಾಡುತ್ತಾ ವಾಜಪೇಯಿ ಅವರು ಅಜಾತಶತ್ರು ಆಗಿದ್ದರು ವಿರೋಧಿಗಳು ಕೂಡಾ ಅಟಲ್ ಅವರನ್ನು ಒಪ್ಪಿಕೊಳ್ಳುತ್ತಿದ್ದರು. ಅತೀ ಕಿರಿಯ ಸದಸ್ಯರಾಗಿ ಮೊದಲು ಸಂಸತ್ತು ಪ್ರವೇಶಿಸಿದ ಅಟಲ್ ಅವರ ಮಾತುಗಳನ್ನು ಕೇಳಿದ ಅಂದಿನ ಪ್ರಧಾನಿ ನೆಹರೂರವರು ಅಟಲ್ಜಿ ಮುಂದೊಂದು ದಿನ ಭಾರತದ ಪ್ರಧಾನಿ ಆಗುತ್ತಾರೆ ನೋಡಿ ಎಂದು ಭವಿಷ್ಯ ನುಡಿದ್ದಿದ್ದರು. ಪ್ರಧಾನಿಯಾದ ಸಂಧರ್ಭದಲ್ಲಿ ಫೋಖರಣ್ ಅಣು ಬಾಂಬ್ ಪರೀಕ್ಷೆ, ಕಾರ್ಗಿಲ್ ಯುದ್ಧವನ್ನು ನಿಭಾಯಿಸಿ ಜಯಿಸಿದ ಬಗೆ, ಜಗತ್ತಿನ ಅನೇಕ ದೇಶಗಳ ಆರ್ಥಿಕ ನಿರ್ಬಂಧಗಳನ್ನು ನಿಭಾಯಿಸಿದ್ದು. ಟೆಲಿಕಾಂ ಕ್ಷೇತ್ರದಲ್ಲಿ ಇರಬಹುದು, ಸುವರ್ಣ ಚತುಷ್ಪಥ ರಸ್ತೆ, ಸರ್ವ ಶಿಕ್ಷಾ ಅಭಿಯಾನ ಇಂತಹ ಅನೇಕ ಯೋಜನೆಗಳು ಇಂದಿಗೂ ಮಾದರಿಯಾಗಿವೆ ಎಂದು ಅಟಲ್ ಬಿಹಾರಿ ವಾಜಪೇಯಿ ಅವರ ಅಗಣಿತ ಸಾಧನೆಗಳನ್ನು ಸ್ಮರಿಸಿದರು.
ಈ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿಯಾದ ಪ್ರೇಮಾನಂದ ಶೆಟ್ಟಿಯವರು, ಉಪಾಧ್ಯಕ್ಷೆ ಶ್ರೀಮತಿ ಪೂಜಾ ಪೈ, ಮನಪಾ ಸದಸ್ಯರಾದ ಕಿರಣ್ ಕೋಡಿಕಲ್, ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಪ್ರಮುಖರಾದ ಅರುಣ್ ಜಿ. ಶೇಟ್, ಸಂದ್ಯಾ ವೆಂಕಟೇಶ್, ಶಾಹನಾಜ್, ಮುರಳೀ ಎಚ್.ಎಚ್., ಗುರುಚರಣ್, ಪ್ರದೀಪ್, ಅವಿನಾಶ್, ಘನಶ್ಯಾಂ ಮೊದಲಾದವರು ಉಪಸ್ಥಿತರಿದ್ದರು.
ಮಣಿಪಾಲ : ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಕನ್ಸಲ್ಟೆಂಟ್ ಕಾರ್ಡಿಯೋಲಾಜಿಸ್ಟ್ ಡಾ.ಕೆ.ಎಸ್.ಎಸ್. ಭಟ್ ಅವರ ಪತ್ನಿ, ಹಿರಿಯ ವೈದ್ಯೆ ಡಾ. ಆಶಾ ಭಟ್ (79) ಅಸೌಖ್ಯದಿಂದ ಇಂದಿರಾನಗರದ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತಿ, ಪುತ್ರನಾದ ಬೆಂಗಳೂರಿನ ಹೆಸರಾಂತ ಮನೋವೈದ್ಯ ಡಾ.ಶಾಮ್ ಭಟ್ ಮತ್ತು ಪುತ್ರಿಯಾದ ಮ್ಯಾನೇಜ್ಮೆಂಟ್ ತಜ್ಞೆ ದೀಪಾ ಭಟ್ ಅವರನ್ನು ಅಗಲಿದ್ದಾರೆ.
ಜನರಲ್ ಪ್ರಾಕ್ಟೀಶನರ್ ಆದ ಡಾ. ಆಶಾ ಭಟ್ ಅವರು ನ್ಯೂಜಿಲೆಂಡ್, ಲಿಬಿಯಾ ಮೊದಲಾದ ದೇಶಗಳಲ್ಲಿ, ದಿಲ್ಲಿಯ ಪ್ರತಿಷ್ಠಿತ ಸಫ್ಜರ್ಜಂಗ್ ಆಸ್ಪತ್ರೆ ಮತ್ತು ಬೆಂಗಳೂರಿನ ಕ್ಲಿನಿಕ್ನಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ್ದರು.
ಚಿತ್ರಕಲಾವಿದರಾದ ಆಶಾ ಭಟ್ ಅವರು ತಂಜಾವೂರು, ಮೈಸೂರು ಶೈಲಿಯ ಚಿತ್ರಕಲೆಗಳನ್ನು ರಚಿಸಿದ್ದರು. ಕರ್ನಾಟಕ ಸಂಗೀತದ ಹಾಡುಗಾರರಾಗಿ ಮತ್ತು ಹಾರ್ಮೋನಿಯಂ ವಾದಕರಾಗಿಯೂ ಸೇವೆ ಸಲ್ಲಿಸಿದ್ದರು.
ದೊಡ್ಡ ಕನಸು ಕಂಡು ಅದನ್ನು ನಿಷ್ಠೆ, ಕಠಿಣ ಪರಿಶ್ರಮದಿಂದ ಸಾಕಾರಗೊಳಿಸಿ : ಪದವೀಧರರಿಗೆ ಎಲ್ ಕೆ ಅತೀಖ್ ಕರೆ
ಮಂಗಳೂರು : ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಮತ್ತು ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬೀಡ್ಸ್) ವತಿಯಿಂದ ಬಿಐಟಿ 12ನೇ ಬ್ಯಾಚ್ ವಿದ್ಯಾರ್ಥಿಗಳಿಗೆ ಮತ್ತು ಬೀಡ್ಸ್ 5ನೇ ಬ್ಯಾಚ್ನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ಮಂಗಳೂರಿನ ಇನೊಳಿಯಲ್ಲಿರುವ ಬ್ಯಾರಿಸ್ ನಾಲೆಜ್ ಕ್ಯಾಂಪಸ್ನಲ್ಲಿ ಶನಿವಾರ ನಡೆಯಿತು.
ಹೊಸ ಪದವೀಧರರನ್ನು ಅಭಿನಂದಿಸಿ ಮಾತನಾಡಿದ ಮುಖ್ಯ ಅತಿಥಿ, ಮುಖ್ಯಮಂತ್ರಿಗಳ ಹಾಗು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗು ಬೆಂಗಳೂರು ಬಿಸಿನೆಸ್ ಕಾರಿಡಾರ್ ಲಿ. ನ ಮುಖ್ಯಸ್ಥ ಎಲ್ ಕೆ ಅತೀಖ್ ಅವರು “ಇದು ನಿಮ್ಮ ಜೀವನದ ಒಂದು ಪ್ರಮುಖ ಮೈಲಿಗಲ್ಲು. ಶಿಸ್ತು, ನಿಷ್ಠೆ ಹಾಗು ಕಠಿಣ ಪರಿಶ್ರಮಗಳೇ ಯಶಸ್ವೀ ಹಾಗು ಅರ್ಥಪೂರ್ಣ ವೃತ್ತಿ ಜೀವನಕ್ಕೆ ಅಡಿಪಾಯ ಹಾಕುತ್ತವೆ ಹಾಗು ನಿರ್ಣಾಯಕ ಪಾತ್ರ ವಹಿಸುತ್ತವೆ. ನಮ್ಮ ಜೀವನದ ಗುರಿ ಸಾಧಿಸಲು ಈ ಮೂರು ಅಂಶಗಳು ಅನಿವಾರ್ಯ. ಸ್ಫೂರ್ತಿ ಬಹಳ ಮುಖ್ಯ ಆದರೆ ನಿರಂತರ ಪ್ರಯತ್ನ ಹಾಗು ಕಠಿಣ ಪರಿಶ್ರಮ ಅದರ ಜೊತೆಗಿದ್ದರೆ ಮಾತ್ರ ಫಲಿತಾಂಶ ಸಿಗಲಿದೆ ಎಂದು ಸಲಹೆ ನೀಡಿದರು. ತಮ್ಮ ವೃತ್ತಿ ಬದುಕಿನ ಬಗ್ಗೆ ಹೇಳಿದ ಅತೀಖ್ ಅವರು “ಜೀವನದಲ್ಲಿ ನಾವು ದೊಡ್ಡ ಕನಸುಗಳನ್ನು ಕಾಣಬೇಕು. ನಾನು ಕನಸು ಕಂಡು, ಗುರಿ ಇಟ್ಟುಕೊಂಡಿದ್ದರಿಂದ ವೃತ್ತಿ ಜೀವನದಲ್ಲಿ ಈ ಹಂತಕ್ಕೆ ಬರಲು ಸಾಧ್ಯವಾಯಿತು. ವೈಫಲ್ಯ ನಮ್ಮ ಜೀವನದ ಸಹಜ ಭಾಗ. ಅದನ್ನು ಎದುರಿಸಿ ಮುನ್ನುಗ್ಗಬೇಕು ” ಎಂದು ಕರೆ ನೀಡಿದರು.

ಆಡಳಿತ ಹಾಗು ಆರ್ಥಿಕ ರಂಗಗಳಲ್ಲಿ ಎಲ್ ಕೆ ಅತೀಖ್ ಅವರ ಅಪಾರ ಅನುಭವ, ಪರಿಣತಿ ಹಾಗು ಸಾಧನೆಯನ್ನು ಪ್ರಶಂಸಿಸಿದ ಸಯ್ಯದ್ ಬ್ಯಾರಿ ಅವರು “ಜಗತ್ತಿನ ಯಾರು ಏನೇ ಹೇಳಿದರೂ 21ನೇ ಶತಮಾನ ಭಾರತದ್ದು. ನಮ್ಮ ದೇಶಕ್ಕೆ ಭವ್ಯ ಭವಿಷ್ಯವಿದೆ. ಇಲ್ಲಿ ಧಾರಾಳ ಅವಕಾಶಗಳಿವೆ. ಆದರೆ ನೀವು ಉದ್ಯೋಗ ಕೇಳುವವರಾಗುವ ಬದಲು ಉದ್ಯೋಗ ಸೃಷ್ಟಿಸುವವರಾಗಬೇಕು” ಎಂದು ಪದವೀಧರರಿಗೆ ಕರೆ ನೀಡಿದರು. “ನಮ್ಮ ಸಮಾಜದಿಂದ ಭ್ರಷ್ಟಾಚಾರ, ಕೋಮುವಾದ ಹಾಗು ಅದಕ್ಷತೆ ನಿರ್ಮೂಲನೆಯಾಗಬೇಕು. ಭ್ರಷ್ಟಾಚಾರ ಅಂದರೆ ಕೇವಲ ಆರ್ಥಿಕ ಭ್ರಷ್ಟಚಾರ ಮಾತ್ರವಲ್ಲ, ಮನಸ್ಸು ಹಾಗೂ ಆತ್ಮಸಾಕ್ಷಿಯ ಭ್ರಷ್ಟಚಾರ ಕೊನೆಯಾಗಬೇಕು. ಇಲ್ಲಿ ಸಾರೆ ಜಹಾಂ ಸೆ ಅಚ್ಛಾ, ಹಿಂದೂಸ್ತಾನ್ ಹಮಾರಾ ಎಂಬ ಹಾಡಿನಂತೆ ನಮ್ಮ ಸಮಾಜದ ಎಲ್ಲರಲ್ಲಿ ಐಕ್ಯತೆ ಮೂಡಬೇಕು. ಪದವೀಧರರು ಕಾಲೇಜಿನ ಪರೀಕ್ಷೆ ಮಾತ್ರವಲ್ಲದೆ ಜೀವನದ ಪರೀಕ್ಷೆಗಳಲ್ಲೂ ಪಾಸಾಗಬೇಕು. ಬಿ ಐ ಟಿ ಹಾಗೂ ಬ್ಯಾರೀಸ್ ನ ಎಲ್ಲ ಶಿಕ್ಷಣ ಸಂಸ್ಥೆಗಳು ದೇಶದ ಪ್ರಗತಿಗೆ ಶ್ರಮಿಸುವ ಧ್ಯೇಯದೊಂದಿಗೆ ಸೇವೆ ಸಲ್ಲಿಸುತ್ತಿವೆ. ಅಹಂ, ದುರಾಸೆಗಳನ್ನು ಬದಿಗೊತ್ತಿ ಎಲ್ಲರೂ ದೇಶಕ್ಕೆ ನಾವು ಹೇಗೆ ಸೇವೆ ಸಲ್ಲಿಸಬಹುದು ಎಂಬ ಬಗ್ಗೆ ಚಿಂತಿಸಬೇಕು” ಎಂದು ಸಯ್ಯದ್ ಬ್ಯಾರಿ ಹೇಳಿದರು.
ಪದವಿ ಪ್ರದಾನ ಭಾಷಣ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು,”ಸೈಯದ್ ಮೊಹಮ್ಮದ್ ಬ್ಯಾರಿ ಅವರು ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ನಾಯಕ” ಎಂದು ಶ್ಲಾಘಿಸಿದರು. ದೇಶಕ್ಕೆ ಯುವ ಪ್ರತಿಭೆಗಳನ್ನು ಸಮರ್ಪಿಸುತ್ತಿರುವ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸಿದರು. ಪದವೀಧರ ವಿದ್ಯಾರ್ಥಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ಜವಾಬ್ದಾರಿಗಳನ್ನು ನೆನಪಿಸಿದ ಪ್ರೊ.ಪಿ.ಎಲ್.ಧರ್ಮ, “ನೀವು ಉದ್ಯೋಗ ಪಡೆಯುವುದರ ಮೇಲೆ ಮಾತ್ರ ಗಮನಹರಿಸಬೇಡಿ. ದೇಶ ಮತ್ತು ವ್ಯವಸ್ಥೆ ನಿಮಗೆ ಬಹಳ ನೀಡಿದೆ, ಆದ್ದರಿಂದ ಅದನ್ನು ಹಿಂತಿರುಗಿಸುವುದು ನಿಮ್ಮ ಕರ್ತವ್ಯ” ಎಂದು ಹೇಳಿದ್ದಾರೆ. ಸಮಾಜ ಮತ್ತು ರಾಜಕೀಯದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರವನ್ನು ಪ್ರೊ.ಧರ್ಮ ಇದೇ ವೇಳೆ ಒತ್ತಿ ಹೇಳಿದರು.
“ನಾಳೆ ಜಾಗತಿಕ ನಾಯಕರಾಗುವವರಿಗೆ ಇಂತಹ ಸಾಮಾಜಿಕ, ರಾಜಕೀಯ ಪ್ರಜ್ಞೆ ಬಹಳ ಅಗತ್ಯ” ಎಂದು ಹೇಳಿದ ಪ್ರೊ. ಧರ್ಮ “ಸಯ್ಯದ್ ಬ್ಯಾರಿ ಅವರಿಂದ ಪ್ರೇರಣೆ ಪಡೆದು ಯುವ ಪದವೀಧರರು ಸಮಾಜದ ದುರ್ಬಲ ವರ್ಗಗಳ ಮಕ್ಕಳಿಗೆ ಶಿಕ್ಷಣ ಕೊಡಲು ಮುಂದೆ ಬರಬೇಕು” ಎಂದು ಕರೆ ನೀಡಿದರು.
ಶ್ನೈಡರ್ ಎಲೆಕ್ಟ್ರಿಕ್ ಬೆಂಗಳೂರು ಇದರ ಉಪಾಧ್ಯಕ್ಷರಾದ ಚಿತ್ರಾ ಸುಕುಮಾರ್ ಮಾತನಾಡಿ “ಬಿಐಟಿ ಹಸಿರುಮಯ ಸುಂದರ ಕ್ಯಾಂಪಸ್ನಿಂದಲೇ ಇಲ್ಲಿನ ಪದವೀಧರರು ಪರಿಸರ ಸ್ನೇಹಿ ಅಭಿವೃದ್ಧಿಯ ಪ್ರೇರಣೆ ಪಡೆಯಬಹುದು. ವಿದ್ಯಾರ್ಥಿಗಳು ರಾಜಕೀಯ, ಸಾಮಾಜಿಕ ಹಾಗು ತಾಂತ್ರಿಕ ಬದಲಾವಣೆಗಳಿಗೆ ತಕ್ಷಣ ಹೊಂದಿಕೊಳ್ಳುವ ವ್ಯಕ್ತಿತ್ವ ಹಾಗು ಮನೋಭಾವ ರೂಪಿಸಿಕೊಳ್ಳಬೇಕು” ಎಂದು ಹೇಳಿದರು.
ಐಜಿಬಿಸಿ ಮಂಗಳೂರು ಅಧ್ಯಕ್ಷರಾದ ವೆಂಕಟೇಶ್ ಪೈ ಮಾತನಾಡಿ “ನೀವು ಏನೇ ಮಾಡಿದರೂ ಅದನ್ನು ಅತ್ಯಂತ ಪ್ರೀತಿಯಿಂದ, ಶೃದ್ಧೆಯಿಂದ ಮಾಡಿ. ಯುವ ಆರ್ಕಿಟೆಕ್ಟ್ಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನೂ ಅರಿತುಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಐಟಿಯ ಪ್ರಾಂಶುಪಾಲ ಡಾ.ಎಸ್.ಐ.ಮಂಝೂರ್ ಬಾಷಾ ಸ್ವಾಗತಿಸಿ , ಬ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಎಮರ್ಜಿಂಗ್ ಸೈನ್ಸಸ್ನ ಪ್ರಾಂಶುಪಾಲರಾದ ಡಾ. ಅಝೀಝ್ ಮುಸ್ತಫ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಸಮಾರಂಭದಲ್ಲಿ ಪ್ರತಿ ವಿಭಾಗದಿಂದ Best out going student ಪ್ರಶಸ್ತಿ ಮತ್ತು ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಡಾ. ಅಝೀಝ್ ಮುಸ್ತಫಾ ಅವರು ಧನ್ಯವಾದವನ್ನು ಸಮರ್ಪಿಸಿದರು.
ವೇದಿಕೆಯಲ್ಲಿ ಬೀಡ್ಸ್ನ ಪ್ರಾಂಶುಪಾಲ ಡಾ.ಖಲೀಲ್ ರಝಾಕ್, ಬಿಐಟಿ ಪಾಲಿಟೆಕ್ನಿಕ್ ನಿರ್ದೇಶಕ ಡಾ. ಪೃಥ್ವಿರಾಜ್ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಾಯ್ಸನ್ ಮಿರಾಂಡಾ ಮತ್ತು ರೆಹಾನಾ ಹನೀನಾ ನಿರೂಪಿಸಿದರು.

ರಾಷ್ಟ್ರಮಟ್ಟದ ಬೆಂಚ್ ಪ್ರೆಸ್ ಚಾಂಪಿಯನ್ಶಿಪ್ : ಕಿನ್ನಿಗೋಳಿಯ ದಿಶಾ ಕುಕ್ಯಾನ್ಗೆ ಬೆಳ್ಳಿಯ ಪದಕ
ಮುಲ್ಕಿ : ರಾಷ್ಟ್ರಮಟ್ಟದ ಬೆಂಚ್ ಪ್ರೆಸ್ ಚಾಂಪಿಯನ್ಶಿಪ್ನಲ್ಲಿ ಕಿನ್ನಿಗೋಳಿಯ ದಿಶಾ ಕುಕ್ಯಾನ್ ಬೆಳ್ಳಿಯ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಗೋವಾದ ವಾಸ್ಕೋಡಗಾಮದಲ್ಲಿ ನಡೆದ ರಾಷ್ಟ್ರಮಟ್ಟದ ಬೆಂಚ್ ಪ್ರೆಸ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಎರಡು ಬೆಳ್ಳಿಯ ಪದಕಗಳನ್ನು ಕಿನ್ನಿಗೋಳಿಯ ದಿಶಾ ಕುಕ್ಯಾನ್ರವರು ಗಳಿಸಿದ್ದಾರೆ.
ಈಕೆ ಕಿನ್ನಿಗೋಳಿಯ ಎಸ್ಪಿಎ ಫಿಟ್ಟೆಸ್ನ ಸುಪ್ರಮ್ ಶೆಟ್ಟಿರವರಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.