ಅಜೆಕಾರು : ಧರ್ಮಸ್ಥಳ ಕ್ಷೇತ್ರಕ್ಕೆ ತೀರ್ಥಯಾತ್ರೆಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿರುವ ಘಟನೆ ಅಜೆಕಾರು ಎಂಬಲ್ಲಿ ಸಂಭವಿಸಿದೆ.

ಹುಬ್ಬಳ್ಳಿ ಮೂಲದ ಆರು ಮಂದಿ ಇನೋವಾ ಕಾರಿನಲ್ಲಿ ಆಗುಂಬೆಯಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದರು. ರವಿವಾರ ನಸುಕಿನ ಜಾವ ಸುಮಾರು 5.30ರ ವೇಳೆಗೆ ಅಜೆಕಾರು ಸಮೀಪದ ರಾಜ್ಯ ಹೆದ್ದಾರಿಯ ಸೇತುವೆ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಂಜುನಾಥ್ ಗೌಡ (28), ಆತ್ಮಾನಂದ (24) ಹನುಮಂತ್ ಗೌಡ (23) ಹಾಲಪ್ಪ ಗೌಡ (24) ವೀರಭದ್ರಗೌಡ (28) ಬಸನಗೌಡ( 27) ಎಂಬವರು ಗಾಯಗೊಂಡಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದೆ. ಘಟನಾ ಸ್ಥಳಕ್ಕೆ ಅಜೆಕಾರ್ 108 ಆಂಬುಲೆನ್ಸ್ ಸಿಬ್ಬಂದಿ ಅಗಮಿಸಿ ಗಾಯಾಳುಗಳನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. 108 ಅಂಬುಲೆನ್ಸ್ ಸಿಬ್ಬಂದಿ ಪೈಲೆಟ್ ನಾಗರಾಜ್ ಅಂಗಡಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.