ಉಡುಪಿ : ಮುನಿಯಾಲಿನ ಅಪ್ತಿ ಆಚಾರ್ಯ ಜಿಮ್ನಾಸ್ಟಿಕ್ನ ಮಾದರಿಯಲ್ಲೊಂದಾದ ಹೆಡ್ರೋಲ್ನಲ್ಲಿ ಗರಿಷ್ಠ 4 ನಿಮಿಷ 40 ಸೆಕೆಂಡ್ನಲ್ಲಿ ಸತತ 65 ರೌಂಡ್ಗಳನ್ನು ಮಾಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾಳೆ.
ಮುನಿಯಾಲಿನ ಶಿವಾನಂದ ಆಚಾರ್ಯ ಮತ್ತು ಲತಾ ಆಚಾರ್ಯ ದಂಪತಿಯ ಪುತ್ರಿಯಾಗಿರುವ ಆಪ್ತಿ ಆಚಾರ್ಯ ಹೆಬ್ರಿಯ ಎಸ್. ಆರ್ ಪಬ್ಲಿಕ್ ಸ್ಕೂಲಿನ 4ನೇ ತರಗತಿಯ ವಿದ್ಯಾರ್ಥಿಯಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ಅವಿನಾಶ್ ಪೆರ್ಡೂರು ಅವರಿಂದ ನೃತ್ಯ ಮತ್ತು ಜಿಮ್ನಾಸ್ಟಿಕ್ ತರಬೇತಿ ಪಡೆಯುತ್ತಿದ್ದಾಳೆ.