ಕಾಪು: ಮಣಿಪುರ ಗ್ರಾಮದ ರಹಮಾನಿಯ ಜುಮ್ಮಾ ಮಸೀದಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಎರಡು ಯುವಕರ ಗುಂಪು ಸೇರಿಕೊಂಡು ಶಾಂತಿ ಭಂಗ ಉಂಟಾಗುವ ರೀತಿಯಲ್ಲಿ ಹೊಡೆದಾಡಿಕೊಂಡಿರುವ ಘಟನೆ ಸಂಭವಿಸಿದೆ.

ಗಸ್ತಿನಲ್ಲಿದ್ದ ಪೊಲೀಸರು ಗಲಾಟೆ ನಿಲ್ಲಿಸಲು ಅವರ ಹತ್ತಿರಕ್ಕೆ ಹೋಗುತ್ತಿದ್ದಂತೆ ಎಲ್ಲರೂ ಅಲ್ಲಿಂದ ಓಡಿ ಹೋಗಿದ್ದಾರೆ. ಬಳಿಕ ಅಲ್ಲಿನ ಸಾರ್ವಜನಿಕರಲ್ಲಿ ಪೊಲೀಸರು ವಿಚಾರಿಸಿದ್ದು, ಗಲಾಟೆ ಮಾಡುತ್ತಿದ್ದ ಎರಡೂ ಗುಂಪಿನವರು ಮಣಿಪುರದ ನಿವಾಸಿಗಳೆಂದು ತಿಳಿದು ಕಾಪು ಎಎಸ್ಐ ದಯಾನಂದ್ ಅವರು ವಿಚಾರಣೆ ನಡೆಸಿದಾಗ ಒಂದು ಗುಂಪಿನಲ್ಲಿ ಮೊಹಮ್ಮದ್ ಇಝುದ್ದೀನ್, ಮೊಹಮ್ಮದ್ ಸಿರಾಜ್, ಇಮ್ರಾನ್ ಖಾನ್, ಆದಂ, ಸಫ್ವಾನ್ ಹಾಗೂ ಆರೀಶ್ ಅವರುಗಳಿದ್ದುದು ಗೊತ್ತಾಗಿತ್ತು. ಮತ್ತೊಂದು ಗುಂಪಿನಲ್ಲಿ ರಮೀಜ್, ರಿಯಾಝ್, ಸಲೀಂ, ಅನ್ವರ್, ಶಮೀಲ್ ಹಾಗೂ ಮಾಮು ಎನ್ನುವವರಿದ್ದರು ಎಂದು ಪೊಲೀಸರಿಗೆ ತಿಳಿದುಬಂದಿತ್ತು. ಆದರಂತೆ ಈ ಎರಡೂ ತಂಡದವರು ಸಾರ್ವಜನಿಕವಾಗಿ ಶಾಂತಿ ಭಂಗ ಉಂಟು ಮಾಡಿದ್ದಾರೆ ಎಂದು ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.