ಕಾರ್ಕಳ : ಇಲ್ಲಿನ ಮಹಿಳೆಯೊಬ್ಬರಿಗೆ ಚಿನ್ನದ ವ್ಯಾಪಾರದಲ್ಲಿ ಹೂಡಿಕೆಗೆ ಪ್ರೇರೆಪಿಸಿ ಲಕ್ಷಾಂತರ ರೂ. ವಂಚಿಸಿದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಜೇಶ್ವರಿ ವಂಚನೆಗೆ ಒಳಗಾದ ಮಹಿಳೆ. ಅವರಿಗೆ ವಾಟ್ಸಪ್ ಮೂಲಕ ಗೋಲ್ಡ್ ಮೈನಿಂಗ್ ಟ್ರೇಡಿಂಗ್ ಮಾಡಿದ್ದಲ್ಲಿ ಅಧಿಕ ಲಾಭಾಂಶ ಬರಲಿದೆ ಎಂದು ಅಪರಿಚಿತರು ತಿಳಿಸಿದ್ದರು. ಆರಂಭಿಕ ಹಂತದಲ್ಲಿ ಲಾಭಾಂಶವನ್ನು ನೀಡಿ ಮಹಿಳೆಗೆ ಮತ್ತಷ್ಟು ನಂಬಿಕೆ ಬರುವಂತೆ ಮಾಡಿದ್ದಾರೆ. ಇದನ್ನು ನಂಬಿದ ರಾಜೇಶ್ವರಿ ಅವರು ಬೇರೆ ಬೇರೆ ಖಾತೆ ಮೂಲಕ ಹಂತ ಹಂತವಾಗಿ 66,27,634 ರೂ. ವರ್ಗಾವಣೆ ಮಾಡಿದ್ದಾರೆ. ಹೂಡಿಕೆ ಮಾಡಿರುವ ಹಣವನ್ನು ವಾಪಸು ನೀಡದೆ, ಲಾಭಾಂಶವನ್ನು ನೀಡದೆ ವಂಚಿಸಲಾಗಿದೆ ಎಂದು ಅವರು ದೂರು ದಾಖಲಿಸಿದ್ದಾರೆ.