ಉಡುಪಿ : ಉಡುಪಿಯ ಪುತ್ತೂರಿನಲ್ಲಿ ನಡೆದ ಗ್ಯಾಂಗ್ವಾರ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಅರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಅಭಿ, ಪ್ರವೀಣ್ ಕಟಪಾಡಿ, ದೇಶರಾಜ್ ಬಂಧಿತ ಅರೋಪಿಗಳು.

ಉಡುಪಿಯ ಪುತ್ತೂರಿನಲ್ಲಿ ಜೂನ್ 15 ರ ರಾತ್ರಿ ಈ ಘಟನೆ ನಡೆದಿತ್ತು. ಶಬರಿ ಎಂಬಾತನಿಗೆ ಸೆಲೂನ್ ನೌಕರ ಚರಣ್ ಬೈದಿದ್ದ. ಇದೇ ವಿಚಾರವಾಗಿ ಮಾತುಕತೆಗೆ ಕರೆದು ಕೊಲೆ ಯತ್ನ ನಡೆಸಲಾಗಿತ್ತು. ಉಡುಪಿ ನಗರದ ಪುತ್ತೂರಿನ ಬಿರಿಯಾನಿ ಪಾಯಿಂಟ್ ಬಳಿ ಕರೆದಿದ್ದ ಪ್ರವೀಣ್ ಮತ್ತು ತಂಡ ಚರಣ್ನನ್ನು ಕೊಲೆ ಮಾಡುವ ಉದ್ದೇಶದಿಂದ ತಲವಾರು ಬೀಸಿದ್ದರು. ದಾಳಿಯಿಂದ ತಪ್ಪಿಸಿಕೊಳ್ಳಲು ಚರಣ್ ಸಂಗಡಿಗರು ಬೈಕ್ ಬಿಟ್ಟು ಪರಾರಿಯಾಗಿದ್ದರು. ಬಳಿಕ ದುಷ್ಕರ್ಮಿಗಳ ತಂಡ ಚರಣ್ನ ಬೈಕ್ಗೂ ಸಾಕಷ್ಟು ಹಾನಿಗೈದಿತ್ತು. ಘಟನೆಯ ದೃಶ್ಯವನ್ನು ಆರೋಪಿಗಳು ತಮ್ಮ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದರು. ಇದೀಗ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.