ಉಡುಪಿ : ಉಡುಪಿ ನಗರಸಭೆ ವ್ಯಾಪ್ತಿಯ ಮಹಿಳಾ ಮೀನುಗಾರರ ಬೇಡಿಕೆಯಂತೆ ನಗರಸಭೆಯ ಮೂಲಕ ₹ 5 ಲಕ್ಷ ವೆಚ್ಚದಲ್ಲಿ ನವೀಕೃತ ಅಂಬಾಗಿಲು ಮೀನು ಮಾರುಕಟ್ಟೆಯನ್ನು ಉಡುಪಿ ಶಾಸಕರಾದ ಶ್ರೀ ಯಶ್ಪಾಲ್ ಸುವರ್ಣ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ಪಾಲ್ ಸುವರ್ಣ ಕಳೆದ ಬಾರಿ ಮೀನು ಮಾರುಕಟ್ಟೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹಿಳಾ ಮೀನು ಮಾರಾಟಗಾರರು ಮಾರುಕಟ್ಟೆಯ ಮೂಲ ಸೌಕರ್ಯದ ಕೊರತೆಯ ಬಗ್ಗೆ ಮನವಿ ಮಾಡಿದ ಹಿನ್ನೆಲೆ ತಕ್ಷಣ ನಗರಸಭೆ ವತಿಯಿಂದ ಅನುದಾನ ಒದಗಿಸಿ ಕಾಮಗಾರಿ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿಯು ಮೀನು ಮಾರುಕಟ್ಟೆ ಅಭಿವೃದ್ಧಿಗೆ ಸದಾ ಸಹಕಾರ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಶ್ರೀಮತಿ ಜಯಂತಿ ಪೂಜಾರಿ, ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀಮತಿ ಮಂಜುಳ ನಾಯಕ್, ಮಹಿಳಾ ಮೀನು ಮಾರಾಟಗಾರರ ಸಂಘದ ಅಧ್ಯಕ್ಷರಾದ ಶ್ರೀಮತಿ ಬೇಬಿ ಸಾಲ್ಯಾನ್, ಸ್ಥಳೀಯ ಮುಖಂಡರಾದ ಶ್ರೀ ಉಮೇಶ್ ಶೆಟ್ಟಿ, ಶ್ರೀ ಪ್ರಸಾದ್ ರಾವ್, ಶ್ರೀ ರುಡಾಲ್ಫ್ ಡಿಸೋಜಾ ಹಾಗೂ ಮಹಿಳಾ ಮೀನುಗಾರರು, ಸಾರ್ವಜನಿಕರು ಉಪಸ್ಥಿತರಿದ್ದರು.