ಮಣಿಪಾಲ : ಕಸ್ತೂರ್ಬಾ ಮೆಡಿಕಲ್ ಕಾಲೇಜಿನ (ಕೆಎಂಸಿ) ಕ್ಲಿನಿಕಲ್ ಎಂಬ್ರಿಯಾಲಜಿಯ ಶ್ರೇಷ್ಠತಾ ಕೇಂದ್ರವು ಜರ್ಮನಿಯ ಮೂನ್ಸ್ಟರ್ ವಿಶ್ವವಿದ್ಯಾಲಯದ ಸಂತಾನೋತ್ಪತ್ತಿ ಔಷಧ ಮತ್ತು ಆಂಡ್ರಾಲಜಿ ಕೇಂದ್ರದ ಸಹಯೋಗದಲ್ಲಿ ಟ್ರಾನ್ಸ್ಲೇಷನಲ್ ಆಂಡ್ರಾಲಜಿ ಕುರಿತ ಇಂಡೋ-ಜರ್ಮನ್ ಕಾರ್ಯಾಗಾರ ಫೆಬ್ರವರಿ 28 ಮತ್ತು ಮಾರ್ಚ್ 1ರಂದು ಮಣಿಪಾಲದಲ್ಲಿ ಆಯೋಜಿಸಲಾಗಿದೆ.
ಕಾರ್ಯಾಗಾರವು ಭ್ರೂಣದ ಬೆಳವಣಿಗೆ ಮತ್ತು ಕ್ಯಾನ್ಸರ್ ಹೊಂದಿರುವ ಮಕ್ಕಳ ಫಲವತ್ತತೆ ಸಂರಕ್ಷಣೆಗಾಗಿ ಆಕ್ರಮಣಶೀಲವಲ್ಲದ ವೀರ್ಯ ಆಯ್ಕೆಯ ಅಂಶಗಳಲ್ಲಿ ಕ್ಲಿನಿಕಲ್ ಅಭ್ಯಾಸದಲ್ಲಿ ಅತ್ಯಾಧುನಿಕ ಪುರುಷ ಸಂತಾನೋತ್ಪತ್ತಿ ಸಂಶೋಧನೆ ಸಂಯೋಜಿಸುವ ಗುರಿಯನ್ನು ಇದು ಹೊಂದಿದೆ.
ಕಾರ್ಯಕ್ರಮವನ್ನು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಪ್ರೊ ವೈಸ್ ಚಾನ್ಸಲರ್ ಡಾ. ಶರತ್ ರಾವ್, ಮಣಿಪಾಲದ ಕೆಎಂಸಿಯ ಕ್ಲಿನಿಕಲ್ ಎಂಬ್ರಿಯಾಲಜಿಯ ಡಾ.ಸತೀಶ್ ಅಡಿಗ, ಜರ್ಮನಿಯ ಮುಯೆನ್ಸ್ಟರ್ ನ ಸಂತಾನೋತ್ಪತ್ತಿ ಔಷಧ ಮತ್ತು ಆಂಡ್ರಾಲಜಿ ಕೇಂದ್ರದ ನಿರ್ದೇಶಕರಾದ ಪ್ರೊ ಡಾ. ಸ್ಟೀಫನ್ ಶ್ಲಾಟ್, ಜರ್ಮನಿ ಗಿಸೆನ್ ನ ಜಸ್ಟಸ್ ಲೀಬಿಗ್ ವಿಶ್ವವಿದ್ಯಾಲಯದ ಪ್ರೊ. ಡಾ ಆಂಡ್ರಿಯಾಸ್ ಮೈನ್ಹಾರ್ಡ್, ಜರ್ಮನಿಯ ಸೆಂಟರ್ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್ ಮತ್ತು ಆಂಡ್ರಾಲಜಿಯ ಆಂಡ್ರಾಲಜಿ ಮತ್ತು ಲೈಂಗಿಕ ಔಷಧದಲ್ಲಿ ತಜ್ಞರಾದ ಡಾ. ಕ್ಲೌಡಿಯಾ ಕ್ರಾಲ್ಮನ್ ಉದ್ಘಾಟಿಸಿದರು..

ಈ ಸಮ್ಮೇಳನದಲ್ಲಿ ಮಾತನಾಡಿದ ಮಾಹೆ ಆರೋಗ್ಯ ವಿಜ್ಞಾನದ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ರಾವ್ ಅವರು “ಪುರುಷ ಫಲವತ್ತತೆಯಲ್ಲಿ ಪ್ರಾಯೋಗಿಕ ಸಂಶೋಧನೆ ಮತ್ತು ಕ್ಲಿನಿಕಲ್ ಅಭ್ಯಾಸದ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಟ್ರಾನ್ಸ್ಲೇಷನಲ್ ಆಂಡ್ರಾಲಜಿಯಲ್ಲಿ ಭಾರತ-ಜರ್ಮನಿ ಸಭೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಅಂತಾರಾಷ್ಟ್ರೀಯ ಸಹಯೋಗ ಮತ್ತು ಉದ್ಯಮದ ಪಾಲುದಾರಿಕೆಯನ್ನು ಬೆಳೆಸುವ ಮೂಲಕ, ನಮ್ಮ ವಿಶ್ವವಿದ್ಯಾನಿಲಯ ನವೀನ ರೀತಿಯ, ರೋಗಿಗಳ-ಕೇಂದ್ರಿತವಾದ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ ಅದು ಸಂತಾನೋತ್ಪತ್ತಿ ಆರೋಗ್ಯದ ಫಲಿತಾಂಶಗಳನ್ನು ಸುಧಾರಿಸುತ್ತದೆ. ಈ ಜ್ಞಾನ ಮತ್ತು ಪರಿಣತಿಯ ವಿನಿಮಯವನ್ನು ಆಯೋಜಿಸಲು ನಾವು ಹೆಮ್ಮೆಪಡುತ್ತೇವೆ, ವೈಜ್ಞಾನಿಕ ಶ್ರೇಷ್ಠತೆ ಮತ್ತು ಜಾಗತಿಕ ಪಾಲುದಾರಿಕೆಗಳಿಗೆ ನಮ್ಮ ಬದ್ಧತೆಯನ್ನು ಇನ್ನಷ್ಟು ಬಲಪಡಿಸುತ್ತದೆ” ಎಂದರು.
ಕೆಎಂಸಿ ಮಣಿಪಾಲದ ಶ್ರೇಷ್ಠತಾ ಕೇಂದ್ರ, ಕ್ಲಿನಿಕಲ್ ಎಂಬ್ರಿಯಾಲಜಿಯ ಮುಖ್ಯಸ್ಥರಾದ ಡಾ. ಸತೀಶ್ ಅಡಿಗ ಅವರು ಮಾತನಾಡಿ “ಭಾರತದಲ್ಲಿ ಸುಮಾರು 20 ಮಿಲಿಯನ್ ದಂಪತಿಗಳಿಗೆ ನೆರವಿನ ಸಂತಾನವೃದ್ಧಿಯ ಅಗತ್ಯವಿದೆ. ಆದರೂ ಪುರುಷ ಫಲವತ್ತತೆಯ ಸಂಶೋಧನೆ ಸೀಮಿತವಾಗಿದೆ. ಈ ಕಾರ್ಯಾಗಾರವು ಟ್ರಾನ್ಸ್ಲೇಷನಲ್ ಆಂಡ್ರಾಲಜಿಯಲ್ಲಿ (ಪುರುಷರ ಸಂತಾನೋತ್ಪತ್ತಿ ಆರೋಗ್ಯ ) ಇಂಡೋ-ಜರ್ಮನ್ ಸಹಯೋಗವನ್ನು ಬೆಳೆಸುವ ಮೂಲಕ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಜಾಗತಿಕವಾಗಿ ವೀರ್ಯದ ಗುಣಮಟ್ಟ ಇಳಿಕೆಯು ಆತಂಕಕಾರಿಯಾಗಿದೆ. ಈ ಕಾರ್ಯಾಗಾರವು ಭಾರತೀಯ ಪುರುಷರಲ್ಲೂ ಇದೇ ರೀತಿಯ ಬದಲಾವಣೆಗಳಿವೆಯೇ ಮತ್ತು ಈ ಪ್ರವೃತ್ತಿಗಳು ಜರ್ಮನಿಯೊಂದಿಗೆ ಹೇಗೆ ಹೋಲಿಕೆಯಾಗುತ್ತಿವೆ ಎಂಬುದನ್ನು ಸಹ ಅನ್ವೇಷಿಸುತ್ತದೆ. ಭವಿಷ್ಯದ ಸಂತಾನೋತ್ಪತ್ತಿ ಆರೋಗ್ಯ ತಂತ್ರಗಳನ್ನು ರೂಪಿಸಲು ಈ ಮಾದರಿಗಳನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ ಎಂದರು.
ಜರ್ಮನಿಯ ಮ್ಯೂನ್ಸ್ಟರ್ ವಿಶ್ವವಿದ್ಯಾಲಯದ ಸಂತಾನೋತ್ಪತ್ತಿ ಔಷಧ ಮತ್ತು ಆಂಡ್ರಾಲಜಿ ಕೇಂದ್ರದ ನಿರ್ದೇಶಕ ಪ್ರೊ. ಡಾ. ಸ್ಟೀಫನ್ ಶ್ಲಾಟ್ ಅವರು ಮಾತನಾಡಿ “ಫಲವತ್ತತೆ ಕುರಿತ ಚಿಕಿತ್ಸೆಗಳಲ್ಲಿ ಕಳಪೆ ವೀರ್ಯದ ಗುಣಮಟ್ಟವೇ ಸವಾಲಾಗಿದೆ. ಇದು ಐವಿಎಫ್ ಯಶಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆರೋಗ್ಯಕರ ವೀರ್ಯವನ್ನು ಆಯ್ಕೆಮಾಡಲು ಸುಧಾರಿತ ವಿಧಾನಗಳನ್ನು ಅಭಿವೃದ್ಧಿಪಡಿಸುವ ತುರ್ತು ಅವಶ್ಯಕತೆಯಿದೆ, ಸಹಾಯದ ಸಂತಾನೋತ್ಪತ್ತಿಗೆ ಒಳಗಾಗುವ ದಂಪತಿಗಳಿಗೆ ಉತ್ತಮ ಫಲಿತಾಂಶಗಳನ್ನು ಇದು ಖಾತ್ರಿಪಡಿಸುತ್ತದೆ” ಎಂದು ಹೇಳಿದರು.
ಇಂಡೋ-ಜರ್ಮನ್ ಟ್ರಾನ್ಸ್ಲೇಷನಲ್ ಆಂಡ್ರಾಲಜಿ ಕಾರ್ಯಾಗಾರವು ಭಾರತ ಮತ್ತು ಜರ್ಮನಿಯ ಉನ್ನತ ಸಂಶೋಧಕರನ್ನು ಒಟ್ಟುಗೂಡಿಸಿದೆ. ಜೊತೆಗೆ ಪ್ರಯೋಗಾಲಯ ಸಂಶೋಧನೆ ಮತ್ತು ಪ್ರಾಯೋಗಿಕ ಕ್ಲಿನಿಕಲ್ ಅಭ್ಯಾಸದ ನಡುವಿನ ಅಂತರವನ್ನು ಕಡಿಮೆ ಮಾಡಲು ಸಂತಾನೋತ್ಪತ್ತಿ ಔಷಧ ಮತ್ತು ಫಲವತ್ತತೆಯ ಆರೈಕೆ ವಿಧಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚುತ್ತಿರುವ ಜಾಗತಿಕ ಸಹಯೋಗಗಳನ್ನು ಪ್ರದರ್ಶಿಸಿದೆ.