ಕಾರ್ಕಳ : ಕಾರ್ಕಳದಲ್ಲಿ ಬೀಸಿ ಬಂದ ಭಾರೀ ಗಾಳಿಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ. ಕಾರ್ಕಳ ಬಸ್ಸು ನಿಲ್ದಾಣದ ಹತ್ತಿರವಿದ್ದ ಬೃಹತ್ ಗಾತ್ರದ ಮಾವಿನ ಮರವೊಂದು ಆಟೋ ರಿಕ್ಷಾದ ಮೇಲೆ ಬಿದ್ದು ಆಟೋ ಸಂಪೂರ್ಣವಾಗಿ ಜಖಂ ಗೊಂಡಿದ್ದು ಆಟೋ ಚಾಲಕ ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಅಲ್ಲದೆ ವಿದ್ಯುತ್ ಕಂಬವೊಂದು ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದು ದ್ವಿಚಕ್ರ ವಾಹನ ಪೂರ್ತಿ ಜಖಂಗೊಂಡಿದೆ.
ಜಿಲ್ಲೆಯಲ್ಲಿ ಉಳಿದ ತಾಲೂಕುಗಳಲ್ಲಿಂದು ಮಳೆ ವಿರಾಮ ಪಡೆದಿದ್ದು, ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದೆ.


