ಉಡುಪಿ : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಎಲೆಕ್ಟ್ರಾನಿಕ್ಸ್ ಮಳಿಗೆಗೆ ನುಗ್ಗಿದ ಘಟನೆ ಸಂಭವಿಸಿದೆ.
ಉಡುಪಿ ನಗರದ ಹೃದಯ ಭಾಗದಲ್ಲಿರುವ ಕೆ.ಎಂ.ಮಾರ್ಗದಲ್ಲಿನ ಗೃಹೋಪಯೋಗಿ ಮಳಿಗೆಗೆ ಕಾರು ನುಗ್ಗಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡಮಗ್ಗಲಿಗೆ ಕಾರು ಹೋಗಿದೆ. ಶಾಪ್ನ ಮುಂಭಾಗದಲ್ಲಿರುವ ಮೆಟ್ಟಿಲನ್ನು ಏರಿ ನಿಂತಿದೆ. ಅದೃಷ್ಟವಶಾತ್ ಅಲ್ಲಿಂದ ಮುಂದೆ ಸಾಗದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಕೂಡಲೇ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಒಟ್ಟಾಗಿ ಕಾರನ್ನು ರಸ್ತೆಗೆ ಎಳೆದು ತಂದಿದ್ದಾರೆ. ಒಳಗಿದ್ದವರು ಕೂಡ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
