ಕಾಸರಗೋಡು : ಸುಳ್ಯ – ಕಾಸರಗೋಡು ರಸ್ತೆಯ ಕುಂಟಾರು – ಮುರೂರು ಮಧ್ಯೆ ಓಮ್ನಿ ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಕಾರು ಚಾಲಕ ಮೃತಪಟ್ಟ ಘಟನೆ ಡಿ. 10ರ ಮಂಗಳವಾರ ನಡೆದಿದೆ.

ಮೃತ ದುರ್ದೈವಿಯನ್ನು ಸುಳ್ಯದ ಅಜ್ಜಾವರ ಕರ್ಲಪ್ಪಾಡಿ ನಿವಾಸಿ ಮಹಮ್ಮದ್ ಕುಂಞಿ ಎಂದು ಗುರುತಿಸಲಾಗಿದೆ.
ಅವರು ತನ್ನ ಮಗನನ್ನು ಕಾಸರಗೋಡಿಗೆ ಬಿಟ್ಟು ಬರುತ್ತಿದ್ದಾಗ ಕುಂಟಾರು ಕಳೆದು – ಮೂರೂರು ಸಮೀಪ ತಲುಪುತ್ತಿದ್ದಂತೆ ಕುಂಟಾರಿನ ಲಾರಿಯೊಂದು ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಓಮ್ನಿ ಕಾರು ನಜ್ಜುಗುಜ್ಜಾಗಿದ್ದು ಚಾಲಕ ಮಹಮ್ಮದ್ ಕುಂಞಿ ಆಸ್ಪತ್ರೆಗೆ ಕರೆತರುವ ವೇಳೆ ಮೃತಪಟ್ಟಿದ್ದಾರೆ.
 
			        


 
			         
                        
 
                        
 
                        
 
                        
 
                        

 
                        
 
                        
 
                         
                         
                        