ಮಂಗಳೂರು : ಹಣವನ್ನು ಡಬಲ್ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ರೂ 3.7 ಲಕ್ಷ ರೂ ವಂಚಿಸಲಾಗಿದ್ದು, ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ. 13 ರಂದು ಅಪರಿಚಿತ ವ್ಯಕ್ತಿಯು ವಾಟ್ಸಪ್ ಮೆಸೇಜ್ ಮಾಡಿ GLOBAL INVESTMENT ಬಗ್ಗೆ ತಿಳಿಸಿ GLOBAL INVESTMENT ನಲ್ಲಿ ರೂ 5000 ವನ್ನು ಹಣವನ್ನು ಹೂಡಿಕೆ ಮಾಡಿದರೆ 10,000/- ರೂಗಳನ್ನು ವಾಪಾಸು ಕೊಡುವುದಾಗಿ ನಂಬಿಸಿದ್ದರು. ಆರೋಪಿಯ ಮಾತನ್ನು ನಂಬಿದ ವ್ಯಕ್ತಿ 5,000/- ರೂ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಅದೇ ದಿನ ರೂ 10,000/- ಹಣವನ್ನು ಹಿಂದಿರುಗಿಸಿ ವರ್ಗಾಯಿಸಿರುತ್ತಾರೆ.
ಡಿ. 14 ರಂದು ಅಪರಿಚಿತ ವ್ಯಕ್ತಿಯು ರೂ 19,000/- ಹಣವನ್ನು INVESTMENT ಮಾಡುವಂತೆ ತಿಳಿಸಿದ್ದು, ಈ ವ್ಯಕ್ತಿ ರೂ 19,000/- ರೂ ಹಣವನ್ನು ಹೂಡಿಕೆ ಮಾಡಿದ್ದಾರೆ. ಆದರೆ ಆರೋಪಿಯು ಈ ವ್ಯಕ್ತಿಗೆ ನೀವು ಮಾಡಿದ ಹಣದ ವರ್ಗಾವಣೆ ತಪ್ಪಾಗಿದೆ ಎಂದು ನಂಬಿಸಿ ಅವರಿಂದ ಡಿ. 13 ರಿಂದ ಡಿ. 15 ರವರೆಗೆ ಒಟ್ಟು 3,70,000/- ರೂ ಹಣವನ್ನು ಆರೋಪಿಯು ತಿಳಿಸಿದಂತೆ ವರ್ಗಾವಣೆ ಮಾಡಿದ್ದಾರೆ. ಆದರೆ ಆರೋಪಿಯು ಮೊದಲೇ ನಂಬಿಸಿದಂತೆ ಹೂಡಿಕೆ ಮಾಡಿದ ಹಣವನ್ನು ಡಬಲ್ ಮಾಡಿಕೊಡದೇ, ಹೂಡಿಕೆ ಮಾಡಿದ ಹಣವನ್ನು ವಾಪಾಸು ಕೊಡದೇ ಮೋಸ ಹಾಗೂ ವಂಚನೆ ಮಾಡಿರುತ್ತಾರೆ ಎಂದು ಇದೀಗ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.