ಉಡುಪಿ : ಕೊರೊನಾ ಕಾಲಘಟ್ಟದಲ್ಲಿ ಸಾಂಕ್ರಾಮಿಕ ರೋಗ ಹಾವಳಿ ಬಗ್ಗೆ ಜ್ಯೋತಿಷ್ಯಾಧಾರಿತವಾಗಿ ಖಚಿತವಾಗಿ ಪರಿಹಾರ ನೀಡಿ ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲ ತಾಣಗಳ ಮೂಲಕ ಲಕ್ಷಾಂತರ ಸದಸ್ಯರನ್ನು ಹೊಂದಿ ತನ್ನ ಕಿರು ವಯಸ್ಸಿನಲ್ಲಿಯೇ ಅತ್ಯಂತ ಪ್ರಸಿದ್ದಿಯನ್ನು ಹೊಂದಿದ ಕುಮಾರ ಅಭಿಘ್ಯಾ ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದರು.

ಇದಕ್ಕಾಗಿಯೇ ಅರುಣಾಚಲದ ತನ್ನ ಊರಿನಿಂದ ಉಡುಪಿಗೆ ಬೈಕ್ ಮೂಲಕ ಬಂದ ಸಾಹಸಿ ಈತ. ಶ್ರೀಕೃಷ್ಣನ ವಿಶೇಷ ಭಕ್ತನಾಗಿ ಒಳ್ಳೆಯ ಸಂಸ್ಕಾರ ಪಡೆದ ಅಭಿಜ್ಞಾ ಪೂಜ್ಯ ಶ್ರೀಪಾದರ ಕೋಟಿ ಗೀತಾ ಲೇಖನ ಯಜ್ಞದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಿಂದ ಪಡೆದು ಉಡುಪಿಗೆ ಆಗಮಿಸಿದ್ದು ವಿಶೇಷವಾಗಿದೆ.
ಪೂಜ್ಯ ಪರ್ಯಾಯ ಪುತ್ತಿಗೆ ಶ್ರೀಪಾದರು ಈತನಿಗೆ ಇನ್ನಷ್ಟು ಸಮಾಜ ಸೇವೆ ಮಾಡುವಂತಾಗಲಿ ಎಂದು ಹರಸಿ ಭಗವದ್ಗೀತಾ ಲೇಖನ ದೀಕ್ಷೆಯನ್ನಿತ್ತು ಹರಸಿದರು.