ಉಡುಪಿ : ಅಂಬಲಪಾಡಿ “ಅನು ಡೆಂಟಲ್ ಕೇರ್”ನ ಅಂಗ ಸಂಸ್ಥೆ ‘ದಿಯಾ ಪಾಲಿಕ್ಲಿನಿಕ್’ನ ಉದ್ಘಾಟನೆ ರವಿವಾರ ನಡೆಯಿತು.
ಅಂಬಲಪಾಡಿ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನೀ. ಬೀ. ವಿಜಯ ಬಲ್ಲಾಳ್ ಅವರು ಉದ್ಘಾಟಿಸಿ ಮಾತನಾಡಿ, ವೈದ್ಯರಲ್ಲಿ ಕೇಳುವ ಗುಣ ಇರಬೇಕು, ರೋಗಿಗಳ ಸಮಸ್ಯೆಯನ್ನು ತಾಳ್ಮೆಯಿಂದ ಕೇಳಿ ಔಷಧ ನೀಡಿದಾಗ ಉತ್ತಮ ಫಲಿತಾಂಶ ಸಿಗುತ್ತದೆ. ಈಗಾಗಲೇ ಈ ಭಾಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಅನು ಡೆಂಟಲ್ ಕೇರ್ ಈಗ ದಿಯಾ ಪಾಲಿಕ್ಲಿನಿಕ್ ಆರಂಭಿಸಿರುವುದು ಜನರಿಗೆ ಹೆಚ್ಚಿನ ಉಪಯೋಗವಾಗಲಿದೆ, ಸಂಸ್ಥೆಯಿಂದ ಇನ್ನೂ ಹೆಚ್ಚಿನ ಸೇವೆ ಜನರಿಗೆ ಸಿಗಲಿ ಎಂದರು.
ಮುಖ್ಯ ಅತಿಥಿಯಾಗಿ ಕಾರ್ತಿಕ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಹರಿಯಪ್ಪ ಕೋಟ್ಯಾನ್, ಗಿರಿಜಾ ತಲ್ಲೂರು ಶಿವರಾಮ ಶೆಟ್ಟಿ, ನಗರಸಭಾ ಸದಸ್ಯ ಹರೀಶ್ ಶೆಟ್ಟಿ, ಡಿಸ್ಟ್ರಿಕ್ಟ್ ಸರ್ಜನ್ ಡಾ.ಹೆಚ್ ಅಶೋಕ್, ಡಾ.ನರೇಂದ್ರ ಬಲ್ಲಾಳ್, ಡಾ.ಕಾವ್ಯ ಬಲ್ಲಾಳ್, ಡಾ. ಶಿವಪ್ರಕಾಶ್, ಡಾ.ಛಾಯಾ ಲತಾ, ಡಾ.ಸಂಜತಾ, ಶ್ಯಾಮಲಾ ಪ್ರಸಾದ್, ಸುನೀಲ್ ಕುಮಾರ್ ಶೆಟ್ಟಿ, ಉಷಾ ಕೋಟ್ಯಾನ್, ಡಾ.ಅನುಪಮಾ ಸುನೀಲ್ ಮೊದಲಾದವರು ಉಪಸ್ಥಿತರಿದ್ದರು. ಸುನೀಲ್ ಸಾಲ್ಯಾನ್ ಕಡೆಕಾರ್ ಸ್ವಾಗತಿಸಿ ವಂದಿಸಿದರು.
ಖ್ಯಾತ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ . ಪವಿತ್ರಾ ಜಿ.ಎಸ್. ಅವರು ದಿಯಾ ಪಾಲಿಕ್ಲಿನಿಕ್ನಲ್ಲಿ ಸಂಜೆ 4 ಗಂಟೆಯಿಂದ ಸಮಾಲೋಚನೆಗೆ ಲಭ್ಯವಿರಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ದಿಯಾ ಪಾಲಿಕ್ಲಿನಿಕ್, ಆನಂದರಾವ್ ರಸ್ತೆ, ವಸಂತ ಮಂಟಪದ ಬಳಿ, ಅಂಬಲಪಾಡಿ, 0820 2520238, 80736 59440ನ್ನು ಸಂಪರ್ಕಿಸಬಹುದು.