ಉಡುಪಿ : ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ನಮ್ಮ ಉಡುಪಿ ಸ್ವಚ್ಛ ಉಡುಪಿ ಅಭಿಯಾನವನ್ನು ಮಣಿಪಾಲ – ಕೊಳಲಗಿರಿ ಸಂಪರ್ಕಿಸುವ ಶೀಂಬ್ರ ಫೆರಾರಿ ಸೇತುವೆ ಬಳಿ ನಡೆಯಿತು.
ಉಡುಪಿ ಸ್ವಚ್ಛ ಉಡುಪಿ ಅಭಿಯಾನಕ್ಕೆ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪುರವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಈ ಬ್ರಿಡ್ಜ್ನಲ್ಲಿ ಗಿಡಗಂಟಿಗಳು ಕಸಗಳು ತುಂಬಿದ್ದು ಮಣ್ಣು ಮತ್ತು ಮರಳು ರಾಶಿ ಬಿದ್ದಿದ್ದರಿಂದ ಹಲವಾರು ಅಪಘಾತಗಳು ಸಂಭವಿಸಿದ್ದು ಹಾಗೂ ಈ ಪ್ರದೇಶದಲ್ಲಿ ತಡರಾತ್ರಿಯವರೆಗೂ ಮದ್ಯ ಸೇವನೆ, ಅಕ್ರಮಕೂಟ, ಧೂಮಪಾನ ನಡೆಸುವವರ ಬಗ್ಗೆ ನಮ್ಮ ಸಂಘಟನೆಗೆ ದೂರು ಬರುತ್ತಿದ್ದು ಶೀಘ್ರವೇ ಸಿ.ಸಿ ಕ್ಯಾಮೆರಾ ಅಳವಡಿಸುವುದು ಮತ್ತು ದಾರಿದೀಪ ವ್ಯವಸ್ಥೆಯನ್ನು ಮಾಡಬೇಕು ಮತ್ತು ಈ ಬ್ರಿಜ್ಜಿನ ಕೆಳಗಡೆ ಪೈಪ್ ಹಾಗೂ ಇತರ ತ್ಯಾಜ್ಯ ವಸ್ತುಗಳು ಶೇಖರಣೆಯಾಗಿದ್ದು ಕೂಡಲೇ ನಗರಸಭೆ ತೆರಗೊಳಿಸುವಂತೆ ಅಗ್ರಹಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ನಗರಸಭೆ ಕೌನ್ಸಿಲರ್ ಅನಿತಾ, ಕ್ರಿಶ್ಚಿಯನ್ ಯುನಿಟಿ ಪೆರoಪಳ್ಳಿ ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್, ಉಪಾಧ್ಯಕ್ಷ ಗಾಡ್ವಿನ್, ಉಡುಪಿ ಜಿಲ್ಲಾ ವೀಕ್ಷಕರು ಫ್ರಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾಧ್ಯಕ್ಷ ಕೃಷ್ಣಕುಮಾರ್, ಜಿಲ್ಲಾ ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಮಿಕ ಘಟಕ ಉಪಾಧ್ಯಕ್ಷ ಕುಶಾಲ್ ಅಮೀನ್ ಬೆಂಗ್ರೆ, ಕಾರ್ಮಿಕ ಘಟಕ ಸಂಘಟನಾ ರೋಶನ್ ಬಂಗೇರ, ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್, ಕಾರ್ಮಿಕ ಘಟಕ ಜೊತೆ ಕಾರ್ಯದರ್ಶಿ ಮಜಿದ್ ಮಹಿಳಾ ಕಾರ್ಯಕಾರಿ ಸದಸ್ಯರಾದ ಜ್ಯೋತಿ, ರವಿಜಾ ವಿದ್ಯಾರ್ಥಿ ಘಟಕ ಮುಖಂಡ ಅಭಿಷೇಕ್ ಭಾಗವಹಿಸಿದ್ದರು. ಸ್ವಚ್ಛತಾ ಕಾರ್ಯಕ್ಕೆ ಉಡುಪಿ ನಗರಸಭೆ ಸಂಪೂರ್ಣವಾಗಿ ಸಹಕಾರ ನೀಡಿದರು.