ಉಡುಪಿ : ಬೆಂಗಳೂರಿನ ಜೈನ್ ಡೀಮ್ಡ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎಂ.ಎ ಪರ್ಫಾಮಿಂಗ್ ಆರ್ಟ್ (ನೃತ್ಯಶಾಸ್ತ್ರ) ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದ ಉಡುಪಿಯ ಯುವ ನೃತ್ಯ ಪ್ರತಿಭೆ ವಿಂಧ್ಯಾ ಆಚಾರ್ಯ ಅವರು ಸ್ವರ್ಣ ಪದಕ ಸಹಿತ ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು.

ಇವರು ಕೆ. ವಿಷ್ಣುಮೂರ್ತಿ ಆಚಾರ್ಯ ಮತ್ತು ಸ್ನೇಹಾ ಆಚಾರ್ಯ ದಂಪತಿಯ ಪುತ್ರಿ. ಭರತನಾಟ್ಯ ಹಾಗು ಯಕ್ಷಗಾನ ಕಲಾಪ್ರವೀಣೆಯಾಗಿದ್ದು ಕಳೆದ ಕೆಲ ವರ್ಷಗಳಿಂದ ರಾಜ್ಯ, ದೇಶ ಮತ್ತು ವಿದೇಶಗಳ ನೂರಾರು ವೇದಿಕೆಗಳಲ್ಲಿ ತಮ್ಮ ನೃತ್ಯಕಲಾ ಪ್ರತಿಭೆಯಿಂದ ಚಿರಪರಿಚಿತರಾಗಿದ್ದಾರೆ.