ಉಡುಪಿ : ವಾಟ್ಸಾಪ್ ಮೂಲಕ ಫೈಲ್ ಕಳಿಸಿ ಆನ್ಲೈನ್ ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದೂರುದಾರರಾದ ಕೆ ಜಯರಾಮ (69) ಶಿವಳ್ಳಿ ಗ್ರಾಮ ಇವರ ವಾಟ್ಸಾಪ್ಗೆ APK File ಬಂದಿದ್ದು ಅದನ್ನು ಒತ್ತಿದ ತಕ್ಷಣ ಅವರ ಯುನಿಯನ್ ಬ್ಯಾಂಕ್ ಎಸ್ಬಿ ಸಹಿತ ಬೇರೆ ಬೇರೆ ಖಾತೆಯಲ್ಲಿರುವ ಒಟ್ಟು 3,83,800 ರೂಪಾಯಿಯನ್ನು ಆರೋಪಿಯು ತನ್ನ ಅಕೌಂಟ್ಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.