ಮಂಗಳೂರು : “ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಮುಸ್ಲಿಂ ತೀವ್ರವಾದಿಗಳು ಹಿಂದೂಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇಸ್ಕಾನ್ನ ಪ್ರಮುಖರಾದ ಚಿನ್ಮಯ ಕೃಷ್ಣ ದಾಸ್ ಸ್ವಾಮೀಜಿಯವರನ್ನು ಬಂಧನಕ್ಕೊಳಪಡಿಸಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುವ ಅಲ್ಪ ಸಂಖ್ಯಾತರಾದ ಹಿಂದೂಗಳ ವಿರುದ್ಧ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದ್ದರೂ ಎಲ್ಲ ಪಕ್ಷಗಳು ಮೌನ ಯಾಕೆ? ಒಂದು ವೇಳೆ ಇಂತಹ ಘಟನೆಗಳು ಭಾರತದಲ್ಲಿ ನಡೆದರೆ ಎಷ್ಟು ಬೆಂಬಲ ಸಿಗಬಹುದು ಭಾರತ ಸರಕಾರ ಬಾಂಗ್ಲಾದೇಶಕ್ಕೆ ಎಚ್ಚರಿಕೆ ನೀಡಬೇಕು ಇಲ್ಲವಾದಲ್ಲಿ ಸೈನಿಕ ಅಕ್ರಮಣ ನಡೆಸಿ ಹಿಂದೂಗಳಿಗೆ ರಕ್ಷಣೆಯನ್ನು ನೀಡಿ ಬಾಂಗ್ಲಾದೇಶವನ್ನು ಭಾರತಕ್ಕೆ ಸೇರಿಸಬೇಕು“ ಎಂದು ಅಖಿಲ ಭಾರತ ಸಂತ ಸಮಿತಿ ರಾಜ್ಯಾಧ್ಯಕ್ಷ ಮಹಾಮಂಡಲೇಶ್ವರ ವಿದ್ಯಾನಂದ ಸರಸ್ವತಿ ಅವರು ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದ್ದಾರೆ.
ವಕ್ಫ್ ಆಕ್ಟ್ನಿಂದ ಹಲವು ಸ್ಥಳಗಳು ಮಠ ಹಾಗೂ ರೈತರ ಆಸ್ತಿಯು ದೋಚುವ ಪರಿಸ್ಥಿತಿ ಈ ಆಕ್ಟಿನ ಪರಿಣಾಮ ಜನ ಮನದಲ್ಲಿ ಆತಂಕದ ಪರಿಸ್ಥಿತಿ ತುಂಬಾ ನಷ್ಟ ವನ್ನುಂಟು ಮಾಡುತ್ತಿದೆ. ಕಾಲಂತರದಿಂದ ತಮ್ಮ ಕೈವಶವಿದ್ದ ಆಸ್ತಿ ಕಳೆದುಕೊಳ್ಳುವಂತಹ ಸ್ಥಿತಿ ಆದರಿಂದ ಇಂತಹ ಆಕ್ಟನ್ನು ಶೀಘ್ರ ರದ್ದುಗೊಳಿಸಬೇಕೆಂದು ಅವರು ಸರಕಾರಕ್ಕೆ ಒತ್ತಾಯಿಸಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಪ್ರತ್ಯೇಕ ಭಾಗ ಮಾಡಲಿ ಎಂದು ಸಂತರು ಅಗ್ರಹಿಸಿದ್ದಾರೆ. ಈ ರೀತಿ ಹಿಂದುಗಳಿಗೆ ದೌರ್ಜನ್ಯ ನಡೆದರೆ ದೇಶಾದ್ಯಂತ ಸಮಾವೇಶದ ಜೊತೆಗೆ ಉಗ್ರ ಹೋರಾಟ ನಡೆಯಲಿದೆ, ಎಲ್ಲಾ ಮಠ ಮಂದಿರಗಳಿಗೆ ಭೇಟಿ ನೀಡಿ ಉಗ್ರ ಹೋರಾಟಕ್ಕೆ ಆಯೋಜನೆ ಮಾಡುತಿದ್ದದ್ದು, ಹಿಂದೂಗಳನ್ನು ಇಬ್ಬಾಗ ಮಾಡಿದ್ದು ಈ ಹಿಂದಿನ ಸರಕಾರ ಆದರಿಂದ ವಕ್ಫ್ ಬೋರ್ಡ್ ರದ್ದುಗೊಳಿಸಿ ಏಕರೂಪದ ಕಾನೂನು ಜಾರಿಗೊಳಿಸಲಿ“ ಎಂದರು.
ಸುದ್ದಿಗೋಷ್ಠಿಯಲ್ಲಿ ಓಂ ಶ್ರೀ ಮಠದ ಮಾತಾಶ್ರೀ ಶಿವಜ್ಞಾಮಯೀ ಸರಸ್ವತಿ, ಅಖಿಲ ಭಾರತೀಯ ಸಂತ ಸಮಿತಿ ಕೋಶಾಧಿಕಾರಿ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ, ಮುಖ್ಯ ಕಾರ್ಯದರ್ಶಿ ಶ್ರೀ ರಾಜೇಶ್ನಾಥ್ ಗುರೂಜಿ, ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀ ನಿಶ್ಚಲ ನಿರಂಜನ ಕೇಂದ್ರ ಸ್ವಾಮೀಜಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಶ್ರೀ ಮೋಹನದಾಸ ಸ್ವಾಮೀಜಿ, ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ತೀರ್ಥ ಸ್ವಾಮೀಜಿ, ಮಂಗಳೂರು ಚಿತ್ರಾಪುರ ಮಠದ ವಿಧ್ಯೇಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.