Sushanth Brahmavar A top-graduate from Poorna Prajna Evening college and Vice-President of Bharthiya Janatha Party OBC Morcha Udupi City of RSS Background Who has brought international Fame Award for completing Entire Bhagvadgits”s Verses in 5.30 hours has been nominated for one more National Fame Award of India Books of Awards, which has brought great privilage to the party in the city but the intresting part does not end here he has also taken the steps for getting the farmers ahead by giving great innovative margin profits to the farmers of the state promoting Indian Produce.Mr.Sushanth’s work has not only empowered local farmers but also set new benchmarks in sustainable agri-business.His entrepreneurial spirit and passion for excellence make him a true inspiration in many fields. Let us all applause his dedication and extend our heartfelt appreciation for his contribution to the nations’ economic and agricultural growth.
Award
ಪಡುಬಿದ್ರಿ : ಕರ್ನಾಟಕ ಸರಕಾರವು 2024ರ ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ 197 ಪೋಲಿಸ್ ಅಧಿಕಾರಿಗಳನ್ನು ಘೋಷಿಸಿದ್ದು, ಪ್ರಶಸ್ತಿ ಪುರಸ್ಕೃತರಲ್ಲಿ ಪಡುಬಿದ್ರಿ ಠಾಣೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಪ್ರಸನ್ನ ಪಿ. ಎಸ್ರವರು ಆಯ್ಕೆ ಆಗಿದ್ದಾರೆ.
ಪೋಲಿಸ್ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಕಳ, ಮಂಗಳೂರು ವಿವಿಧ ಕಡೆಗಳಲ್ಲಿ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ದಕ್ಷ ಅಧಿಕಾರಿಯಾಗಿ ಸೇವೆಗೈದು ಪ್ರಸ್ತುತ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಠಾಣಾಧಿಕಾರಿ ಅಗಿರುವ ಪ್ರಸನ್ನ ಪಿ.ಎಸ್ ರವರು ಕರ್ನಾಟಕ ಸರ್ಕಾರದ 2024ರ ಪ್ರತಿಷ್ಠಿತ ಮುಖ್ಯಮಂತ್ರಿ ಪದಕ ಪುರಸ್ಕೃತರಾಗಿದ್ದಾರೆ.
ಎಪ್ರಿಲ್ 2(ಬುಧವಾರ) ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಪತ್ರಕರ್ತರ ಸಂಘ ಕೊಡಮಾಡುವ ವಡ್ಡರ್ಸೆ ರಘುರಾಮ್ ಶೆಟ್ಟಿ ಪ್ರಶಸ್ತಿಗೆ ರವಿ ಹೆಗಡೆ ಆಯ್ಕೆ
ಕೋಟ : ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ ಆಶ್ರಯದಲ್ಲಿ ಕೊಡಮಾಡುವ 2024ನೇ ಸಾಲಿನ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕ, ಹಿರಿಯ ಪತ್ರಕರ್ತ ರವಿ ಹೆಗಡೆ ಆಯ್ಕೆಯಾಗಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸಿದ ಗಣ್ಯರಿಗೆ ಬ್ರಹ್ಮಾವರ ಪತ್ರಕರ್ತರ ಸಂಘವು ವಡ್ಡರ್ಸೆಯವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಜನವರಿ 11ರಂದು ಸಂಜೆ 5ಗಂಟೆಗೆ ಬ್ರಹ್ಮಾವರ ಬಂಟರ ಭವನದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೆರವೇರಲಿದೆ ಎಂದು ಬ್ರಹ್ಮಾವರ ಪತ್ರಕರ್ತರ ಸಂಘ ಪ್ರಕಟನೆಯಲ್ಲಿ ತಿಳಿಸಿದೆ.
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಪ್ಲಾಟಿನಂ ವರ್ಗದಲ್ಲಿ ಗೌರವಾನ್ವಿತ “ಸಿಐಐ ಇಂಡಸ್ಟ್ರಿ ಅಕಾಡೆಮಿಯ ಪಾಲುದಾರಿಕೆ ಪ್ರಶಸ್ತಿ 2024” ಅನ್ನು ಪಡೆದಿದೆ. ಈ ಪ್ರಶಸ್ತಿ 2024ರ ಡಿಸೆಂಬರ್ 12ರಂದು ನವದಿಲ್ಲಿಯ ಲಲಿತ್ನಲ್ಲಿ ನಡೆದ ಭಾರತೀಯ ಉದ್ಯಮ ಸಮ್ಮೇಳನದಲ್ಲಿ ತಂತ್ರಜ್ಞಾನ, ಬುದ್ಧಿವಂತಿಕೆ ಆಸ್ತಿ ಮತ್ತು ಉದ್ಯಮ-ಅಕಾಡೆಮಿಯ ಪಾಲುದಾರಿಕೆಗಳಲ್ಲಿ ನೀಡಲಾಯಿತು.
ಈ ಪ್ರಶಸ್ತಿ ವಿಶ್ವಾದ್ಯಂತದ ಸಮಸ್ಯೆಗಳ ಶ್ರೇಷ್ಟ ಉಲ್ಲೇಖಗಳಿಗೆ, ನವೋತ್ಪಾದನೆಗೆ, ಮತ್ತು ಶ್ರೇಷ್ಟ ಸಂಬಂಧಗಳನ್ನು ನಿರ್ಮಿಸಲು ಮಾಹೆಯ ಶ್ರೇಷ್ಟ ಕೊಡುಗೆಗಳನ್ನು ಗೌರವಿಸಿ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಗೌರವಾರ್ಪಣೆ ಸಂದರ್ಭದಲ್ಲಿ, ಮಾಹೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರವಿರಾಜ್ ಎನ್. ಎಸ್. ಮತ್ತು ಮಾಹೆಯ ಕಾರ್ಪೊರೆಟ್ ಸಂಬಂಧಗಳ ನಿರ್ದೇಶಕ ಡಾ. ಹರೀಶ್ ಕುಮಾರ್ ಎಸ್. ಮಾಹೆ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಮಾಹೆ ಮಣಿಪಾಲದ ಸಹಾಯಕ ನಿರ್ದೇಶಕ ಶ್ರೀನಿಧಿ ಕಾಮತ್ ಮತ್ತು ಬುದ್ಧಿವಂತಿಕೆ ಹಕ್ಕುಗಳು ಮತ್ತು ತಂತ್ರಜ್ಞಾನ ವರ್ಗಾವಣೆ ಕಚೇರಿಯ ಸಂಯೋಜಕ ಡಾ. ಎಸ್. ವರದರಾಜನ್ ಕೂಡ ಮಾಹೆಯ ಪ್ರತಿನಿಧಿ ತಂಡದ ಭಾಗವಾಗಿದ್ದರು.
ಮಾಹೆ ಉಪಕುಲಪತಿ ಲೆಫ್ಟಿ. ಜನರಲ್ (ಡಾ.) ಎಂ. ಡಿ. ವೆಂಕಟೇಶ್, ವಿ.ಎಸ್.ಎಂ (ನಿವೃತ), ಮಾತನಾಡಿ “ಈ ಸಿಎಐಐ ಮಾನ್ಯತೆ ಮಹಾದೇವಿ ಅಹಿಲ್ಯಾ ಎಂಜಿನಿಯರಿಂಗ್ ಕಾಲೇಜಿನ ಕೈಗಾರಿಕಾ-ಶಿಕ್ಷಣ ಸಹಯೋಗದಲ್ಲಿ ನಾಯಕತ್ವವನ್ನು ಇನ್ನಷ್ಟು ಬಲಪಡಿಸುತ್ತದೆ. ಮಹಾದೇವಿ ಅಹಿಲ್ಯಾನಲ್ಲಿ, ನಾವು ಸದಾ ಸೃಜನಶೀಲತೆಯನ್ನು ಉತ್ತೇಜಿಸುತ್ತಾ ಮತ್ತು ತಕ್ಷಣದ ಸಮಸ್ಯೆಗಳಿಗೆ ಪ್ರಾಯೋಗಿಕ ಉತ್ತರಗಳನ್ನು ಒದಗಿಸುವ ಶ್ರೇಣಿಯುಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದೇವೆ. ಈ ಗೌರವವು ನಮ್ಮ ಭಾಗಿಧಾರಿಗಳಿಗೆ, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ, ಈ ಗುರಿಯನ್ನು ಸಾಧಿಸಲು ಅನೇಕ ಗಂಟೆಗಳ ಕಾಲ ಶ್ರಮಿಸಿದ ಎಲ್ಲರಿಗೂ ಸಮರ್ಪಣೆಯಾಗಿದೆ. ನಾವು ಕ್ಷೇತ್ರಗಳನ್ನು ಶಕ್ತಿ ನೀಡುವ, ಜ್ಞಾನವನ್ನು ಹೆಚ್ಚಿಸುವ ಮತ್ತು ಸಮಾಜದ ಕಲ್ಯಾಣವನ್ನು ಸುಧಾರಿಸುವ ಸಹಯೋಗಗಳನ್ನು ಉತ್ತೇಜಿಸಲು ಇನ್ನೂ ಬದ್ಧರಾಗಿದ್ದೇವೆ.”
ಸಿಎಐಐ ಕೈಗಾರಿಕಾ-ಅಕಾಡೆಮಿಯಾ ಭಾಗೀದಾರಿ ಪ್ರಶಸ್ತಿ, ವ್ಯಾಪಾರಗಳೊಂದಿಗೆ ಸಮೀಪದ ಸಂಬಂಧಗಳನ್ನು ಪರಿಣಾಮಕಾರಿಯಾಗಿ ಬೆಳೆಸುವ ಶ್ರೇಣಿಕಾರ್ಯ ಸಂಸ್ಥೆಗಳನ್ನು ಗೌರವಿಸುತ್ತದೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಂಶೋಧನಾ ವ್ಯಾಪಾರೀಕರಣವನ್ನು ಉತ್ತೇಜಿಸುತ್ತದೆ. ಹೊಸದಾದ ಬುದ್ಧಿವಂತಿಕೆಯ ಆಸ್ತಿ ಅಭಿವೃದ್ಧಿ, ಶ್ರೇಷ್ಟವಾದ ಸಂಶೋಧನಾ ಭಾಗೀದಾರಿಕೆಗಳು ಮತ್ತು ಶಕ್ತಿಯುತ ತಂತ್ರಜ್ಞಾನ ವರ್ಗಾವಣಾ ಪರಿಸರವನ್ನು ಒಳಗೊಂಡ ಮಹಾದೇವಿ ಅಹಿಲ್ಯಾ ಕಾಲೇಜಿನ ಪ್ರಯತ್ನಗಳು ಈ ಕ್ಷೇತ್ರದಲ್ಲಿ ಭಾಗವಹಿಸುತ್ತವೆ.
ಈ ಗುರುತಿಸುವಿಕೆ ಮಾಹೆ ಕಾಲೇಜಿನ ಮಹತ್ವಪೂರ್ಣ ತಿರುವಿನ ಬಿಂದುಗಳನ್ನು ಗುರುತಿಸುತ್ತದೆ ಮತ್ತು ಮಾಹಿತಿ ಹಂಚಿಕೆ ಮತ್ತು ಸಹಕಾರಿಯ ಬೆಳವಣಿಗೆಗೆ ಅದರ ಸ್ಥಾನವನ್ನು ಬಲಪಡಿಸುತ್ತದೆ.
ಮಂಗಳೂರು : ಯುವವಾಹಿನಿ ಸಂಸ್ಥೆಯಿಂದ ಕೊಡಮಾಡುವ ‘ವಿಶುಕುಮಾರ್ ಪ್ರಶಸ್ತಿ’ಗೆ ಈ ಬಾರಿ ಪತ್ರಿಕಾ ಸಂಪಾದಕ, ಸಾಹಿತಿ, ಸಂಶೋಧಕ, ಬಾಬು ಶಿವ ಪೂಜಾರಿ ಆಯ್ಕೆಯಾಗಿದ್ದಾರೆ.
ಕಾದಂಬರಿಕಾರ, ಕತೆಗಾರ, ನಾಟಕಕಾರ, ರಂಗನಟ, ರಂಗ ನಿರ್ದೇಶಕ, ಚಲನಚಿತ್ರ ನಿರ್ದೇಶಕ, ಪತ್ರಕರ್ತ, ಅಂಕಣಕಾರ, ಸಂಘಟಕ ವಿಶು ಕುಮಾರ್ ಸ್ಮರಣಾರ್ಥ ಯುವವಾಹಿನಿ ಸಂಸ್ಥೆಯು ಕಳೆದ 20 ವರ್ಷಗಳಿಂದ “ವಿಶುಕುಮಾರ್ ಪ್ರಶಸ್ತಿ” ನೀಡುತ್ತಾ ಬಂದಿದೆ. ಈ ಸಾಲಿನ ಪ್ರಶಸ್ತಿಗೆ ಬಿ.ಎಂ. ರೋಹಿಣಿ, ಮುದ್ದು ಮೂಡುಬೆಳ್ಳೆ, ಡಾ| ಪ್ರಭಾಕರ ನೀರುಮಾರ್ಗ, ಡಾ| ಯೋಗೀಶ್ ಕೈರೋಡಿ, ಪ್ರೊ. ಶಶಿಲೇಖಾ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಆಯ್ಕೆಯನ್ನು ನಡೆಸಿದೆ.
ನವೆಂಬರ್ 10ರಂದು ಉರ್ವ ಸ್ಟೋರ್ನ ತುಳು ಭವನದ ‘ಅಮೃತ ಸೋಮೇಶ್ವರ ಸಭಾಂಗಣ’ದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಯುವವಾಹಿನಿ ಸಂಸ್ಥೆಯ ವಿಶುಕುಮಾರ್ ದತ್ತಿ ನಿಧಿ ಸಮಿತಿಯ ಸಂಚಾಲಕ ಸುರೇಶ್ ಪೂಜಾರಿ ಹಾಗೂ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ. ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೋಟ : ಯಕ್ಷಗಾನದ ಕಂಚಿನ ಕಂಠದ ಭಾಗವತರೆಂದೇ ಪ್ರಸಿದ್ಧರಾದ ಕಾಳಿಂಗ ನಾವಡರ ನೆನಪಿನಲ್ಲಿ ಬೆಂಗಳೂರಿನ ಪ್ರತಿಷ್ಟಿತ ಸಾಂಸ್ಕೃತಿಕ ಸಂಸ್ಥೆಯಾದ ಕಲಾಕದಂಬ ಆರ್ಟ್ ಸೆಂಟರ್ ಪ್ರತೀ ವರ್ಷ ಯಕ್ಷಗಾನದ ಸಾಧಕರೊಬ್ಬರಿಗೆ ಕಾಳಿಂಗ ನಾವಡ ಪ್ರಶಸ್ತಿ ನೀಡುತ್ತಿದೆ. ಹತ್ತು ಸಾವಿರ ನಗದು, ಬೆಳ್ಳಿ ತಟ್ಟೆ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಕಾಳಿಂಗ ನಾವಡ ಪ್ರಶಸ್ತಿ ಒಳಗೊಂಡಿರುತ್ತದೆ.
ಗುಂಡ್ಮಿ ಸದಾನಂದ ಐತಾಳ್, ಸುಬ್ರಹ್ಮಣ್ಯ ಧಾರೇಶ್ವರ್, ಕೆಪ್ಪೆಕೆರೆ ಸುಬ್ರಾಯ ಹೆಗಡೆ, ಎಳ್ಳಾರೆ ವೆಂಕಟ್ರಾಯ ನಾಯಕ್, ನೆಟ್ಟೂರು ನಾರಾಯಣ ಹೆಗಡೆ, ಕರ್ಕಿ ಪ್ರಭಾಕರ ಭಂಡಾರಿ, ಕೆ.ಪಿ ಹೆಗ್ಡೆ, ಟಿ ಜಯಂತ್ ಕುಮಾರ್, ಮಂದಾರ್ತಿ ರಾಮಕೃಷ್ಣ, ಶ್ರೀಧರ ಹೆಬ್ಬಾರ್, ಗೋವಿಂದ ಉರಾಳ, ಶಂಕರ ಭಾಗವತ ಯಲ್ಲಾಪುರ, ಬಿದ್ಕಲ್ಕಟ್ಟೆ ಕೃಷ್ಣಯ್ಯ ಆಚಾರ್ಯ ಹಾಗೂ ಸುರೇಶ್ ರಾವ್ ಬಾರ್ಕೂರ್ ಅವರು ಈಗಾಗಲೇ ಕಾಳಿಂಗ ನಾವಡ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಈ ಸಾಲಿನ “ಕಾಳಿಂಗ ನಾವಡ ಪ್ರಶಸ್ತಿ” ಯನ್ನು ಸುಮಾರು 46 ವರ್ಷಗಳಿಂದ ಯಕ್ಷಗಾನದ ವೀರ ವಾದ್ಯವೆನಿಸಿದ ಚಂಡೆಯ ನುಡಿಸಾಣಿಕೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿ ಚಂಡೆಯ ಗಂಡುಗಲಿ ಎಂದು ಖ್ಯಾತರಾದ ಕೋಟ ಶಿವಾನಂದರವರಿಗೆ ಬೆಂಗಳೂರಿನ ಚಾಮರಾಜಪೇಟೆಯ ಉದಯಭಾನು ಸಭಾಂಗಣದ ವೇದಿಕೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ನೀಡಲಾಗುವುದೆಂದು ಕಲಾಕದಂಬ ಆರ್ಟ್ ಸೆಂಟರ್ನ ನಿರ್ದೇಶಕರಾದ ಡಾ.ರಾಧಾಕೃಷ್ಣ ಉರಾಳರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕೋಟ : ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಇದರ 5ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಭಾನುವಾರ ಶ್ರೀ ಗುರುನರಸಿಂಹ ದೇವಸ್ಥಾನ ಜ್ಞಾನಮಂದಿರ, ಸಾಲಿಗ್ರಾಮದಲ್ಲಿ ಜರಗಿತು.
ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ. ಎಸ್. ಕಾರಂತ ಶುಭಾಶಂಸನೆಗೈದು ಮಾತಾನಾಡಿ ಸಮಾಜದ ಓರೆಕೋರೆಗಳನ್ನು ತಿದ್ದಲು ಸಂಘಸಂಸ್ಥೆಗಳ ಪಾತ್ರ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ವಿಪ್ರ ವಲಯ ಸಾಲಿಗ್ರಾಮ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡು ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಇದೇ ವೇಳೆ ರಂಗ ಕಲಾವಿದೆ ಸುಧಾ ಮಣೂರು ಇವರಿಗೆ ಗೌರವ ಸನ್ಮಾನ ನೀಡಲಾಯಿತು. ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ 2024 ಪುರಸ್ಕೃತೆ ಜಾಹ್ನವಿ ಹೇರ್ಳೆ ಇವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಧಾರ್ಮಿಕ ಸಂಘಟನೆಯಾದ ಶ್ರೀ ಮಹಾವಿಷ್ಣು ಭಜನಾ ಸಂಘ, ಪಾರಂಪಳ್ಳಿ ಇವರನ್ನು ಗುರುತಿಸಿ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಇದರ ಅಧ್ಯಕ್ಷೆ ವನಿತಾ ಉಪಾಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಕೆ.ಅನಂತ ಪದ್ಮನಾಭ ಐತಾಳ್, ಬ್ರಹ್ಮಾವರ ತಾಲೂಕು ಮಹಿಳಾ ವಲಯದ ಅಧ್ಯಕ್ಷೆ ಮಂಜುಳ ಅಡಿಗ, ಉಪಸ್ಥಿತರಿದ್ದರು. ಕಾರ್ಯಕ್ರಮದ ವರದಿಯನ್ನು ಸುಜಾತ ಬಾಯರಿ ವಾಚಿಸಿದರು. ಸನ್ಮಾನ ಪತ್ರವನ್ನು ಡಾ.ಸವಿತಾ ಉಪಾಧ್ಯಾಯ, ಶುಭ ಅಡಿಗ ವಾಚಿಸಿದರು. ಸ್ಮಿತಾ ರಾಣಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಸುಪ್ರೀತಾ ಪುರಾಣಿಕ ನಿರೂಪಿಸಿದರು. ಶಿವ ಪ್ರಭಾ ಅನ್ನೇ ವಂದಿಸಿದರು.

ಕಾರ್ಕಳ : ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ಮಾಲಕಿ ಸಾಧನ ಅಶ್ರಿತ್ರವರಿಗೆ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯ ಜೀವಮಾನದ ಸಾಧನ ಪ್ರಶಸ್ತಿ ಲಭಿಸಿದೆ.

ಬೆಂಗಳೂರಿನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿವತಿಯಿಂದ ನಡೆದ ಸಮಾರಂಭದಲ್ಲಿ ಕಾರ್ಕಳದ ಸುಮೇಧ ಫ್ಯಾಶನ್ ಇನ್ಸ್ಟಿಟ್ಯೂಟ್ ಮಾಲಕಿ ಸಾಧನ ಅಶ್ರಿತ್ರವರಿಗೆ ಶೈಕ್ಷಣಿಕ , ಸಾಮಾಜಿಕ, ವಸ್ತ್ರವಿನ್ಯಾಸ ಕ್ಷೇತ್ರದಲ್ಲಿನ ತನ್ನ ವೈಯಕ್ತಿಕ ಹಾಗೂ ಮಹಿಳಾ ಸ್ವಾವಲಂಬಿ ಸಾಧನೆಗಾಗಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯ ಜೀವಮಾನದ ಸಾಧನಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿಯ ಹಿರಿಯ ಸದಸ್ಯೆ ಕಾಮತ್ರವರು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯಿಂದ ಕೊಡ ಮಾಡಲ್ಪಡುವ 2024ರ ಡಾ. ಬಿ.ಸಿ. ರಾಯ್ ಪ್ರಶಸ್ತಿಗೆ ಭಾಜನರಾಗಿದ್ದಾರೆ

ಬೆಂಗಳೂರಿನಲ್ಲಿ ನಡೆದ ವೈದ್ಯರ ದಿನಾಚರಣೆಯ ಸಂದರ್ಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಚಿವ ಡಾ. ಎಚ್ ಕೆ ಪಾಟೀಲ್, ಭಾ ವೈ ಸಂಘದ ರಾಜ್ಯಾಧ್ಯಕ್ಷ ಡಾ. ಶ್ರೀನಿವಾಸ ಹಾಗೂ ಗೌರವ ಕಾರ್ಯದರ್ಶಿ ಡಾ ಕರುಣಾಕರ್ ಉಪಸ್ಥಿತರಿದ್ದರು.
ಉಡುಪಿ : ನಮ ತುಳುವೆರ್ ಕಲಾ ಸಂಘಟನೆ (ರಿ) ಮತ್ತು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ
‘ಸಿಜಿಕೆ ರಂಗಪುರಸ್ಕಾರ’-2024 ಕ್ಕೆ ಉಡುಪಿ ಜಿಲ್ಲೆಯಿಂದ ನಟ, ನಿರ್ದೇಶಕ, ಸಂಘಟಕ ರವಿರಾಜ್ ಎಚ್ಪಿ ಆಯ್ಕೆಯಾಗಿರುತ್ತಾರೆ.
ಇವರು ಕಳೆದ 30 ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ನಟ-ನಿರ್ದೇಶಕ-ಸಂಘಟಕರಾಗಿ ಸೇವೆ ಸಲ್ಲಿಸಿದ್ದಾರೆ.
ಇವರ ನಟನೆಗೆ ಹಾಗೂ ನಿರ್ದೇಶನಕ್ಕೆ ರಾಜ್ಯಮಟ್ಟದ ಪ್ರಶಸ್ತಿಗಳು ಬಂದಿರುತ್ತವೆ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಇವರ ಪರಿಕಲ್ಪನೆಯಲ್ಲಿ ನಡೆಸಿದ ಹೀಗೊಂದು ರಂಗ ಕಲಿಕೆ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿರುತ್ತಾರೆ.
ಹಲವು ಟಿವಿ ಧಾರವಾಹಿ, ಚಲನಚಿತ್ರಗಳಲ್ಲಿ ಪೋಷಕ ನಟನಾಗಿ ಪಾತ್ರ ನಿರ್ವಹಿಸಿರುತ್ತಾರೆ. ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಇದರ ಸಂಚಾಲಕರಾಗಿ ಉಡುಪಿ ಜಿಲ್ಲೆಯಲ್ಲಿ ಹಲವಾರು ನಾಟಕ, ಸಾಂಸ್ಕೃತಿಕ ಉತ್ಸವಗಳನ್ನು ಕಳೆದ ಐದು ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತಾರೆ. ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನಮ ತುಳುವೆರ್ ಕಲಾ ಸಂಘಟನೆ (ರಿ) ಇದರ ಅಧ್ಯಕ್ಷರಾದ ಸುಕುಮಾರ್ ಮೋಹನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.