ಉಡುಪಿ : ಗಾಳಿ, ಮಳೆಯನ್ನೂ ಲೆಕ್ಕಿಸದೆ ಕೃಷಿ ಭೂಮಿಯಲ್ಲಿ ದುಡಿಯುತ್ತಿರುವ ರೈತರು ಮತ್ತು ಕೃಷಿಕರನ್ನು ಗುರುತಿಸಿ, ರೋಟರಿ ಕ್ಲಬ್ ಉದ್ಯಾವರದ ಸದಸ್ಯರು ಗದ್ದೆಯಲ್ಲಿ ಅವರನ್ನು ಸನ್ಮಾನಿಸಿ ಗೌರವಿಸುವ ವಿಶಿಷ್ಟ ಕಾರ್ಯಕ್ರಮ ಉದ್ಯಾವರದಲ್ಲಿ ನಡೆಯಿತು.

‘ರೈತ ಮಿತ್ರ’ ಹೆಸರಿನ ಕಾರ್ಯಕ್ರಮದ ಮೂಲಕ ಕ್ಲಬ್ಬಿನ ನಿಕಟ ಪೂರ್ವ ಅಧ್ಯಕ್ಷರಾದ ರೋ. ಪ್ರಸಾದ್ ಶೆಟ್ಟಿರವರ ಕೃಷಿ ಭೂಮಿಯಲ್ಲಿ ರೈತರನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ 15 ಮಂದಿ ಭತ್ತ ಬಿತ್ತನೆ ಮಾಡಿದ ರೈತರನ್ನು ರೋಟರಿ ಕ್ಲಬ್ ಉದ್ಯಾವರದ ಅಧ್ಯಕ್ಷ ರೋ. ಜೀವನ್ ಡಿಸೋಜ ಹಾಗೂ ಸರ್ವ ಸದಸ್ಯರು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಬಳಿಕ ರೈತರ ಕೆಲಸಗಳಿಗೆ ಕ್ಲಬ್ಬಿನ ಸದಸ್ಯರು ಸಾಥ್ ನೀಡಿದರು.
