ಉಡುಪಿ : ಪೆರ್ಡೂರು ಕದಳೀಪ್ರಿಯ ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆ ಮಾ.19ರವರೆಗೆ ಕ್ಷೇತ್ರದ ತಂತ್ರಿಗಳಾದ ಕೆ.ಜಿ. ರಾಘವೇಂದ್ರ ತಂತ್ರಿ ಹಾಗೂ ಅರ್ಚಕ ಪಿ.ಕೃಷ್ಣ ಅಡಿಗ ಅವರ ಧಾರ್ಮಿಕ ನೇತೃತ್ವದಲ್ಲಿ ವಿವಿಧ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.
ಮಾ.13ರಂದು ಧ್ವಜಾರೋಹಣ, ಅಗ್ನಿಜನನ, ಪ್ರಧಾನ ಹೋಮ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ ದೀವಟಿಗೆ ಸೇವೆ, ಉತ್ಸವ ಬಲಿ ನಡೆಯಲಿದೆ.
ಮಾ.14ರಂದು ಮೀನ ಸಂಕ್ರಮಣ ಆಚರಣೆ ನಡೆಯಲಿದೆ. ಮಧ್ಯಾಹ್ನ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ದೀವಟಿಕೆ ಸಲಾಮ್, ಕೊಡಿಪೂಜೆ, ಉತ್ಸವ ಬಲಿ, ಗರುಡವಾಹನ, ತೆಪ್ಪೋತ್ಸವ, ರಥೋತ್ಸವ, ವಾಲಗಮಂಟಪ ಪೂಜೆ, ವೇದಪಾರಾಯಣ, ಸಂಗೀತ, ವಾದ್ಯ, ನರ್ತನ ಸೇವೆಗಳು, ಮಹಾಪೂಜೆ, ನಿತ್ಯಬಲಿ, ಸವಾರಿ ಬಲಿ, ಕಟ್ಟೆಪೂಜೆ, ಕಂಚಲ ಸೇವೆ, ದೊಡ್ಡರಂಗಪೂಜೆ, ರಂಗಪೂಜೆ ಬಲಿ, ಕೆರೆದೀಪ, ಚಂದ್ರಮಂಡಲ ರಥ, ಉಷಾಃಕಾಲ ಪೂಜೆ, ಕಂಚಲ ಪ್ರಸಾದ ವಿತರಣೆ ನಡೆಯಲಿದೆ.
ಮಾರ್ಚ್ 15ರಂದು ಬೆಳಗ್ಗೆ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ದೀವಟಿಕೆ ಸಲಾಮ್, ಕೊಡಿಪೂಜೆ, ಉತ್ಸವ ಬಲಿ, ಬಯ್ಯದ ಬಲಿ, ವಸಂತೋತ್ಸವ, ಬೆಳ್ಳಿ ಪಲ್ಲಕ್ಕಿ, ಚಂದ್ರಮಂಡಲ ರಥ, ಇಡಿಗಾಯಿ, ವಾಲಗಮಂಟಪ ಪೂಜೆ, ವೇದಪಾರಾಯಣ, ಸಂಗೀತ, ವಾದ್ಯ, ನರ್ತನ ಸೇವೆಗಳು, ಮಹಾಪೂಜೆ, ನಿತ್ಯಬಲಿ, ಸವಾರಿ ಬಲಿ, ಕಟ್ಟೆಪೂಜೆ, ಭುಜಂಗ ಬಲಿ ನಡೆಯಲಿದೆ.
ಮಾ. 16ರಂದು ಬೆಳಿಗ್ಗೆ ಪ್ರಧಾನ ಹೋಮ, ಕಲಶಾಭಿಷೇಕ, ರಥ ಹೋಮ, ರಥಸಂಪ್ರೋಕ್ಷಣೆ, ಕೊಡಿ ಪೂಜೆ, ಮಹಾಪೂಜೆ, ಮಧ್ಯಾಹ್ನ ರಥಾರೋಹಣ, ಸಂಜೆ 6ಕ್ಕೆ ಶ್ರೀ ಮನ್ಮಹಾರಥೋತ್ಸವ, ರಾತ್ರಿ ದೀವಟಿಕೆ ಸಲಾಮ್, ನರ್ತನ, ವಾದ್ಯ ಸೇವಾದಿಗಳು, ಹಚ್ಚಡ ಸೇವೆ, ರಥಾವರೋಹಣ, ಪಲ್ಲಕ್ಕಿ ಸುತ್ತು, ತೆಪ್ಪೋತ್ಸವ, ವಾಲಗ ಮಂಟಪ ಪೂಜೆ, ವೇದಪಾರಾಯಣ, ಸಂಗೀತ, ವಾದ್ಯ, ನರ್ತನ ಸೇವೆಗಳು, ಮಹಾಪೂಜೆ, ಮಹಾಪೂಜೆ, ಶ್ರೀಭೂತಬಲಿ, ಕವಾಟಬಂಧನ, ಶಯನೋಲಗ ನಡೆಯಲಿದೆ.
ಮಾ. 17ರಂದು ಬೆಳಗ್ಗೆ ಬೆಳಗ್ಗೆ ಮುಖದಾನ, ಕವಾಟೋದ್ಘಾಟನೆ, ಅಷ್ಟಾವಧಾನಸೇವೆಗಳು, ಅಂಕುರ ಪ್ರಸಾದ ವಿತರಣೆ, ಭಕ್ತರ ತುಲಾಭಾರಾದಿ ಸೇವೆಗಳು, ಕೊಡೆ ನೀರು, ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ರಾತ್ರಿ ದೀವಟಿಕೆ ಸಲಾಮ್, ಕೊಡಿಪೂಜೆ, ವಾಲಗಮಂಟಪ ಪೂಜೆ, ಓಕುಳಿ, ತೀರ್ಥಯಾತ್ರ ಬಲಿ, ಅವಭೃಥ ಸ್ನಾನ, ಆರಾಟೋತ್ಸವ, ಸೂಟೆಬಲಿ, ಪೂರ್ಣಾಹುತಿ, ಮಂತ್ರಾಕ್ಷತೆ, ಧ್ವಜಾವರೋಹಣ, ಮಹಾಪೂಜೆ, ನಿತ್ಯಬಲಿ, ದೊಡ್ಡರಂಗಪೂಜೆ, ರಂಗಪೂಜೆ ಬಲಿ, ಚಂದ್ರಮಂಡಲ ರಥ ನಡೆಯಲಿದೆ.
ಮಾ.18ರಂದು ಬೆಳಗ್ಗೆ ಪುಣ್ಯಾಹವಾಚನ, ಕಲಶಾಭಿಷೇಕ ಮಹಾಪೂಜೆ, ಉತ್ಸವ ಬಲಿ, ಪಲ್ಲಕಿ, ಚಂದ್ರಮಂಡಲ ರಥ, ಓಕುಳಿಯಾಟ, ಮಹಾಪೂಜೆ, ನಿತ್ಯಬಲಿ ನಡೆಯಲಿದೆ.
ಮಾ.19ರಂದು ಮಹಾಸಂಪ್ರೋಕ್ಷಣೆ, ಗಣಪತಿ ಹೋಮ, ಬ್ರಹ್ಮಕುಂಭಾಭಿಷೇಕ, ಮಹಾಪೂಜೆ, ಸಂಜೆ ಮಹಾಮಂತ್ರಾಕ್ಷತೆ, ಮಹಾಪೂಜೆ, ನಿತ್ಯಬಲಿ, ಪರಿವಾರ ದೈವಗಳ ಪೂಜೆ, ಬಲಿ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾಠ್ಯಕ್ರಮ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಮೋದ್ ರೈ ಪಳಜೆ, ಕಾರ್ಯನಿರ್ವಹಣಾಧಿಕಾರಿ ಗುರುರಾಜ್ ಪಿ.ಆರ್. ತಿಳಿಸಿದ್ದಾರೆ.