ಉಡುಪಿ : ಉಡುಪಿಯ ಅನಂತ ಕಲ್ಯಾಣ ನಗರದಲ್ಲಿ ಶ್ರೀಧರ್ ಎಂಬಾತನ ಸಾವು ಕೊಲೆಯಿಂದಲ್ಲ, ಬದಲಾಗಿ ತಾನೇ ಬಿಯರ್ ಬಾಟಲಿಯಿಂದ ಇರಿದು ಆತ್ಮಹತ್ಯೆಗೈದಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಇಂದು ಬೆಳಿಗ್ಗೆ ರಸ್ತೆಯ ಬದಿಯಲ್ಲಿ ಶ್ರೀಧರ (38) ಎಂಬವರ ಮೃತದೇಹ ಕಂಡು ಬಂದಿತ್ತು. ಈ ಸಂಬಂಧ ಪೊಲೀಸರು ಕುತ್ತಿಗೆಗೆ ಚುಚ್ಚಿ ಹಲ್ಲೆ ಮಾಡಿ ಕೊಲೆ ಮಾಡಿರಬಹುದು ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಆದರೆ ನಂತರ ತನಿಖೆ ಕೈಗೊಂಡ ಪೊಲೀಸರು ಆಸುಪಾಸಿನ ಸಿಸಿಟಿವಿಗಳನ್ನು ಪರಿಶೀಲಿಸಿದಾಗ, ಮೃತ ವ್ಯಕ್ತಿಯು ಬಿಯರ್ ಬಾಟಲಿಯಿಂದ ತಾನೇ ಕುತ್ತಿಗೆ ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಶವ ಪರೀಕ್ಷೆ ಮತ್ತು ಸಾಕ್ಷಿಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.