ಕಾರ್ಕಳ : ಕಾರ್ಕಳ ಪುರಸಭೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಇದರ ಹೊರತಾಗಿಯೂ ಪ್ಲಾಸ್ಟಿಕ್ ಬಳಕೆ ಎಲ್ಲೆಂದರಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಕಳ ಪುರಸಭೆ ಅಧಿಕಾರಿಗಳು ಅಂಗಡಿ ಮುಗ್ಗಟ್ಟು, ಹೋಟೆಲ್, ಮಾರ್ಕೆಟ್‌ಗಳಿಗೆ ಮುಖ್ಯಾಧಿಕಾರಿ ರೂಪಾ ಟಿ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಿದರು.

ಈ ವೇಳೆ ಸುಮಾರು 2 ಕೆಜಿಗಳಷ್ಟು ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಯಿತು. ಅಧಿಕಾರಿಗಳು ಸುಮಾರು 8800 ರೂಪಾಯಿ ದಂಡ ವಸೂಲಿ ಮಾಡಿದರು. ದಾಳಿಯ ಸಂದರ್ಭ ಪುರಸಭೆ ಕಂದಾಯ ಅಧಿಕಾರಿ ಅಶೋಕ್, ಕಚೇರಿ ವ್ಯವಸ್ಥಾಪಕ ಉದಯ ಕುಮಾರ್ ಜಿ, ಪರಿಸರ ಅಭಿಯಂತರ ಜ್ಯೋತಿಶ್ವರಿ, ಹಿರಿಯ ಆರೋಗ್ಯ ಅಧಿಕಾರಿ ಲೈಲಾ ಥಾಮಸ್ ಮತ್ತಿತರರಿದ್ದರು.

