ಉಡುಪಿ : ಲೊoಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ಹಿರಿಯ ವೈದ್ಯ ಮತ್ತು ಕಟಪಾಡಿ ನಿವಾಸಿಯಾಗಿರುವ ಡಾ. ಗಣೇಶ್ ಕಾಮತ್ (71) ಅವರು ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ರೋಗಿಗಳ ಪಾಲಿಗೆ ದೇವರಾಗಿ, ಉಡುಪಿಯ ಜನರ ಅಚ್ಚುಮೆಚ್ಚಿನ ವೈದ್ಯರಾಗಿದ್ದ ಇವರು ಕಳೆದ ಹತ್ತು ವರ್ಷಗಳಿಂದ ಮಿಷನ್ ಆಸ್ಪತ್ರೆಯಲ್ಲಿ ರೋಗಿಗಳ ಸೇವೆ ಮಾಡುತ್ತಾ ಬಂದಿದ್ದರು. ಇದೀಗ ಇವರ ಅಗಲಿಕೆ ತುಂಬಲಾರದ ನಷ್ಟವಾಗಿದೆ.
ಇವರು ಆಸ್ಪತ್ರೆಯ ಹಿರಿಯ ವೈದ್ಯಕೀಯ ಸಮಾಲೋಚಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪತ್ನಿ, ಓರ್ವ ಪುತ್ರನ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಆಸ್ಪತ್ರೆಯ ಆಡಳಿತ ಬಳಗ ಸಂತಾಪ ಸೂಚಿಸಿದೆ.