ಮೂರು ಕಡಲಾಮೆಗಳ ರಕ್ಷಣೆ

ಕುಂದಾಪುರ : ಮರವಂತೆಯ ಶ್ರೀ ಮಾರಸ್ವಾಮಿ ದೇವಸ್ಥಾನದ ಎದುರಿನ ಕಡಲ ತೀರದಲ್ಲಿ ಮೀನುಗಾರಿಕೆ ಬಲೆಯಲ್ಲಿ ಸಿಲುಕಿ ಸಾವು – ಬದುಕಿನ ನಡುವೆ ಹೋರಾಡುತ್ತಿದ್ದ ಎರಡು ದೊಡ್ಡ ಹಾಗೂ ಒಂದು ಸಣ್ಣ ಕಡಲಾಮೆಯನ್ನು ಸ್ಥಳೀಯರು ರಕ್ಷಿಸಿ, ಕಡಲಿಗೆ ಬಿಟ್ಟರು.

ಶುಕ್ರವಾರ ಮರವಂತೆಯ ಕಡಲ ತೀರದಲ್ಲಿ ಬಲೆಗೆ ಸಿಲುಕಿ ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದ ಮೂರು ಕಡಲಾಮೆಗಳನ್ನು ಕಂಡ ಮರವಂತೆ ಗ್ರಾ.ಪಂ. ಸದಸ್ಯ ನಾಗರಾಜ್‌ ಪಟಗಾರ್‌ ಹಾಗೂ ಸ್ಥಳೀಯರಾದ ಲಕ್ಷ್ಮಣ್‌ ಸುವರ್ಣ ಅವರು, ಪ್ರವಾಸಿಗರ ಸಹಾಯದಿಂದ ಬಿಡಿಸಿ ರಕ್ಷಿಸಿದರು.

Related posts

ಷೇರು ವಹಿವಾಟಿನ ಬಗ್ಗೆ ಸಲಹೆ ನೀಡುವುದಾಗಿ ಯುವಕನಿಗೆ ವಂಚನೆ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ರಕ್ತಸ್ರಾವ ಅಸ್ವಸ್ಥತೆ ಚಿಕಿತ್ಸಾಲಯ ಉದ್ಘಾಟನೆ – ಆಶಾ ಕಾರ್ಯಕರ್ತರಿಗಾಗಿ ಕಾರ್ಯಾಗಾರ

ಗ್ರಾಮ ಪಂಚಾಯತ್ ಉಪ ಚುನಾವಣೆಗೆ ವೇಳಾಪಟ್ಟಿ ಪ್ರಕಟ