ಕುಂದಾಪುರ : ಮರವಂತೆಯ ಶ್ರೀ ಮಾರಸ್ವಾಮಿ ದೇವಸ್ಥಾನದ ಎದುರಿನ ಕಡಲ ತೀರದಲ್ಲಿ ಮೀನುಗಾರಿಕೆ ಬಲೆಯಲ್ಲಿ ಸಿಲುಕಿ ಸಾವು – ಬದುಕಿನ ನಡುವೆ ಹೋರಾಡುತ್ತಿದ್ದ ಎರಡು ದೊಡ್ಡ ಹಾಗೂ ಒಂದು ಸಣ್ಣ ಕಡಲಾಮೆಯನ್ನು ಸ್ಥಳೀಯರು ರಕ್ಷಿಸಿ, ಕಡಲಿಗೆ ಬಿಟ್ಟರು.

ಶುಕ್ರವಾರ ಮರವಂತೆಯ ಕಡಲ ತೀರದಲ್ಲಿ ಬಲೆಗೆ ಸಿಲುಕಿ ಬಿಡಿಸಿಕೊಳ್ಳಲಾಗದೆ ಒದ್ದಾಡುತ್ತಿದ್ದ ಮೂರು ಕಡಲಾಮೆಗಳನ್ನು ಕಂಡ ಮರವಂತೆ ಗ್ರಾ.ಪಂ. ಸದಸ್ಯ ನಾಗರಾಜ್ ಪಟಗಾರ್ ಹಾಗೂ ಸ್ಥಳೀಯರಾದ ಲಕ್ಷ್ಮಣ್ ಸುವರ್ಣ ಅವರು, ಪ್ರವಾಸಿಗರ ಸಹಾಯದಿಂದ ಬಿಡಿಸಿ ರಕ್ಷಿಸಿದರು.