ಕೋಟ : ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಪಾರಂಪಳ್ಳಿಯಲ್ಲಿ 1.89 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರುತ್ತಿರುವ ಘನತ್ಯಾಜ್ಯ ನಿರ್ವಹಣಾ ಘಟಕದ ಕಾಮಗಾರಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿದ್ದು ಇದರಿಂದ ಈ ಭಾಗದ ರೈತರಿಗೆ, ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗಲಿದೆ ಎಂದು ಸ್ಥಳೀಯ ಹೋರಾಟಗಾರ ಮಹೇಶ್ ಪೂಜಾರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸ್ಥಳದಲ್ಲಿ ಹಿಂದೆ ತ್ಯಾಜ್ಯ ವಿಗಂಡನೆ ಪ್ರಕ್ರಿಯೆ ಮಾನವ ಶಕ್ತಿಯ ಬಳಕೆ ಮೂಲಕ ನಡೆಸಲಾಗುತ್ತಿತ್ತು. ಆದರೆ ಇದೀಗ ಯಂತ್ರೋಪಕರಣಗಳ ಮೂಲಕ ಕಸ ವಿಗಂಡನೆ ನಡೆಸಲು ಉದ್ದೇಶಿಸಲಾಗಿದೆ. ಈ ಘಟಕ ಸ್ಥಾಪನೆಯಾದಲ್ಲಿ ಪಕ್ಕದಲ್ಲೇ ಇರುವ ಹೊಳೆಗೆ ತ್ಯಾಜ್ಯ ನೀರು ಸೇರಲಿದ್ದು ಇದರಿಂದ ಒಳನಾಡು ಮೀನುಗಾರಿಕೆಗೆ ಸಮಸ್ಯೆಯಾಗಲಿದೆ. ಮಾತ್ರವಲ್ಲ, ಇಲ್ಲಿನ ಕೃಷಿ ಚಟುವಟಿಕೆಗೆ ಹಾನಿಯಾಗಲಿದೆ ಎಂದರು.
ಪ್ರಸ್ತುತ ಈ ಸ್ಥಳದಲ್ಲಿ ಮಾನವ ಶಕ್ತಿಯ ಮೂಲಕ ತ್ಯಾಜ್ಯ ವಿಂಗಡನೆ ನಡೆಯುತ್ತಿದೆ. ಮುಂದೆ ಈ ಕಾರ್‍ಯವನ್ನು ಯಂತ್ರಗಳ ಮೂಲಕ ಮಾಡುವುದಾಗಿ ನನಗೆ ಮಾಹಿತಿ ನೀಡಿದ್ದಾರೆ. ಮತ್ತು ಸುತ್ತ ತಡೆಗೋಡೆ ನಿರ್ಮಿಸುವುದಾಗಿ ಮಾಹಿತಿ ಇದೆ. ಇದನ್ನು ಹೊರತುಪಡಿಸಿ ಬೇರೆ
ಯಾವುದೇ ಕಾಮಗಾರಿ ನಡೆದರೂ ನನ್ನ ವಿರೋಧವಿದ್ದು, ಗ್ರಾಮಸ್ಥರ ಹೋರಾಟಕ್ಕೆ ಸಹಕಾರ ನೀಡುತ್ತೇನೆ. ಪರಿಸರಕ್ಕೆ ಯಾವುದೇ ಸಮಸ್ಯೆ ಇಲ್ಲದ ಘಟಕವಾದರೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ವಾರ್ಡ್ ಸದಸ್ಯೆ ಅನುಸೂಯ ಹೇರ್ಳೆ ತಿಳಿಸಿದರು.
ಸ್ಥಳೀಯರಾದ ಸುರೇಂದ್ರ ಪೂಜಾರಿ, ಕೃಷ್ಣ ಪೂಜಾರಿ, ಗಣೇಶ್, ಸಂತೋಷ್, ಮಹೇಶ್ ಪೂಜಾರಿ, ಉಮೇಶ್, ನಿತೀನ್, ಮನೋಜ್ ಪತ್ರಿಕಾಗೋಷ್ಠಿಯಲ್ಲಿದ್ದರು.