ಮಂಗಳೂರು : ಮಂಗಳೂರಿನಲ್ಲಿ ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಸರ್ವೆ ಮೇಲ್ವಿಚಾರಕ ತುಮಕೂರು ಮೂಲದ ಮಂಜುನಾಥ್ ಅವರ ಬಿಜೈನ 8ನೇ ಕ್ರಾಸ್‌ನ ಮನೆ ಹಾಗೂ ಕಚೇರಿ ಮೇಲೆ ಆದಾಯಕ್ಕಿಂತ ಅಧಿಕ ಅಪಾರ ಆಸ್ತಿ ಗಳಿಕೆಯ ಆರೋಪ ಹಿನ್ನೆಲೆ ಲೋಕಾಯುಕ್ತ ಎಸ್ ಪಿ ನೇತೃತ್ವದಲ್ಲಿ ದಾಳಿ ಮಾಡಲಾಯಿತು.
ಮನೆಯಲ್ಲಿ ಮಹತ್ವದ ದಾಖಲೆ ಪತ್ರಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಒಟ್ಟು 3 ಕಾರುಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಬಂದಿದ್ದರು. ಮೂರು ಅಂತಸ್ತಿನ ಮನೆಯಲ್ಲಿ ಮಂಜುನಾಥ್ ಕುಟುಂಬ ವಾಸವಿದ್ದರು. ಕಳೆದ 23 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಜುನಾಥ್ ಕರ್ತವ್ಯ ನಿರ್ವಹಿಸುತ್ತಿದ್ದರು.